ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ಗೆ ಮೈಸೂರಿಗೆ ತೆರಳಲು ಅನುಮತಿ ನೀಡಿನಗರದ 7ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಮೈಸೂರಿನಲ್ಲಿರುವ ವಯೋ ಸಹಜ ಆರೋಗ್ಯ ಸಮಸ್ಯೆಗಳನ್ನು ನರಳುತ್ತಿರುವ 76 ವರ್ಷದ ತನ್ನ ತಾಯಿಯನ್ನು ಕಂಡು ಆರೈಕೆ ಮಾಡಬೇಕಿದೆ. ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ತನ್ನ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಅಭಿಪ್ರಾಯ ಪಡೆಯಬೇಕಿದೆ. ಹಾಗಾಗಿ, ನಾಲ್ಕು ವಾರಗಳ ಕಾಲ ಮೈಸೂರಿಗೆ ಹೋಗಿ ನೆಲೆಸಲು ಅನುಮತಿ ನೀಡಬೇಕು ಎಂದು ಕೋರಿ ದರ್ಶನ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಮೈಸೂರಿಗೆ ತೆರಳಿ, ಎರಡು ವಾರಗಳ ಕಾಲ ನೆಲೆಸಲು ಅನುಮತಿ ನೀಡಿ ಆದೇಶಿಸಿದೆ. ಇದರ ಬೆನ್ನಲ್ಲೇ ದಾಸ ತವರೂರಿಗೆ ಪಯಣಿಸಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಓಡಾಡುತ್ತಾ ರಿಲ್ಯಾಕ್ಸ್ ಮೋಡ್ಗೆ ಜಾರಿದ್ದಾರೆ.
ರೆಗ್ಯುಲರ್ ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದ ದರ್ಶನ್ಗೆ ಮೈಸೂರಿನ ಫಾರ್ಮ್ ಹೌಸ್ ಕಡೆ ಹೋಗಲು ತುಡಿತ ಹೆಚ್ಚಾಗಿತ್ತು. ಇದೇ ನಿಟ್ಟಿನಲ್ಲಿ ಸೆಷನ್ಸ್ ಕೋರ್ಟ್ಗೆ ದಾಸ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಕೂಡಾ ದರ್ಶನ್ಗೆ ಅನುಮತಿ ನೀಡಿತ್ತು. ಡಿಸೆಂಬರ್ 20ರಿಂದ ಜನವರಿ 05ರವರೆಗೆ 2 ವಾರ ಪರ್ಮಿಷನ್ ಕೊಟ್ಟಿದೆ. ಅನುಮತಿ ಕೊಟ್ಟ ಬೆನ್ನಲ್ಲೇ ನಿನ್ನೆ ಬೆಳಗ್ಗೆ ದರ್ಶನ್ ಮೈಸೂರಿಗೆ ಪಯಣಿಸಿದ್ದಾರೆ. ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ವಿನೀಶ್ ಕ್ಯಾಟವೇರಿ ಫಾರ್ಮ್ ಹೌಸ್ನಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಫಾರ್ಮ್ ಹೌಸ್ನಲ್ಲಿ ಪ್ರಾಣಿಗಳ ಜೊತೆ ಕಾಲಕಳೆಯುತ್ತ ದರ್ಶನ್ ಓಡಾಡುತ್ತಿದ್ದಾರೆ. ತೋಟದ ಕೆಲಸ ಮಾಡಿಸುತ್ತ ಬೆನ್ನುನೋವನ್ನೇ ಮರೆತಂತೆ ಕಾಣಿಸಿಕೊಂಡಿದ್ದಾರೆ.
ಇನ್ನೂ ದರ್ಶನ್ ಜೊತೆ ನಟ ಧನ್ವೀರ್ ಕೂಡ ಫಾರ್ಮ್ಹೌಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲಿಗೆ ಹೋದಾಗಿನಿಂದ ಕಾನೂನು ಹೋರಾಟದಲ್ಲಿ ದಾಸನಿಗೆ ಸಾಥ್ ಕೊಟ್ಟಿದ್ದ ಧನ್ವೀರ್ ತಮ್ಮನಂತೆ ನಟ ದರ್ಶನ್ಗೆ ಬೆಂಬಲವಾಗಿ ನಿಂತಿದ್ದಾರೆ.ಇಷ್ಟುದಿನ ಕತ್ತಲಕೋಣೆಯಲ್ಲಿ ಬಂಧಿಯಾಗಿದ್ದ ದಾಸ ಈಗ ಫ್ರೀ ಬರ್ಡ್ ಆಗಿದ್ದಾರೆ. ಮೈಸೂರಿನಲ್ಲಿರುವ ತೋಟದ ಹಸಿರಿನ ಮಧ್ಯೆ ರಿಲ್ಯಾಕ್ಸ್ ಆಗುತ್ತಿದ್ದಾರೆ.