ಸ್ಯಾಂಡಲ್ವುಡ್ ನಲ್ಲಿ ‘ರ’ ಅಕ್ಷರದ ಹಿರೋಯಿನ್ ಅಂತಂದ್ರೆ ಥಟ್ ಅಂತ ನೆನಪಾಗೋದೆ ಸ್ಯಾಂಡಲ್ ವುಡ್ ಕ್ವಿನ್ ರಮ್ಯಾ. ಸದ್ಯ ಸಿನಿಮಾ ರಂಗದಿಂದ ದೂರವಿರೋ ಮೋಹಕ ತಾರೆ. ಸಿನಿಮಾಗಳಿಂದ ಸದ್ಯ ಬ್ರೇಕ್ ತಗೊಂಡಿದ್ದಾರೆ. ಆದರೆ ಹೊಸ ಸುದ್ದಿ ಏನಪ್ಪ ಅಂದ್ರೆ..ರಮ್ಯಾ ಮತ್ತೆ ನಟಿಸ್ತಾರಾ ಅನ್ನೋ ಕ್ಯೂರಿಯಾಸಿಟಿ ಎದ್ದಿದೆ. ಹೌದು 2012ರಲ್ಲಿ ರಿಲೀಸ್ ಆದ ‘ಸಿದ್ಲಿಂಗು’ ಸಿನಿಮಾದಲ್ಲಿ ರಮ್ಯಾ, ಲೂಸ್ ಮಾದ “ಯೋಗಿʼ ಒಟ್ಟಾಗಿ ನಟಿಸಿ ಗಮನ ಸೆಳೆದಿದ್ದರು. ಈಗ ಅವರೇ ಈ ಚಿತ್ರದಲ್ಲಿ ಅತಿಥಿ ಪಾತ್ರ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
“ರ” ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಇನ್ನೂ ಕೆಲವು ಹೀರೋಯಿನ್ಗಳು ಕನ್ನಡದಲ್ಲಿ ಇದ್ದಾರೆ.ಈ ಚಿತ್ರಕ್ಕೆ ಈಗ ಸೀಕ್ವೆಲ್ ಸಿದ್ಧವಾಗುತ್ತಿದೆ. ಮೊದಲ ಭಾಗದಲ್ಲಿ ರಮ್ಯಾ ಅವರ ಪಾತ್ರ ಕೊನೆಗೊಂಡಿದ್ದರಿಂದ ಅವರಂತೂ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಿಲ್ಲ. ಇದನ್ನು ತಂಡ ಮೊದಲೇ ಹೇಳಿಕೊಂಡಿತ್ತು. ಈಗ ರಮ್ಯಾ ಅತಿಥಿ ಪಾತ್ರದ ಮೂಲಕ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕಾರಣ ‘ಸಿದ್ಲಿಂಗು 2’ ಚಿತ್ರದ ಹೊಸ ಪೋಸ್ಟರ್. ‘ರ’ ಅಕ್ಷರ ಎಂದಾಕ್ಷಣ ಫ್ಯಾನ್ಸ್ಗೆ ನೆನಪಾಗಿರೋದು ರಮ್ಯಾ ಅವರ ಹೆಸರು. ಅವರೇ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಬಹುದೇ ಎನ್ನುವ ಕುತೂಹಲ ಮೂಡಿದೆ. “ರ” ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಇನ್ನೂ ಕೆಲವು ಹೀರೋಯಿನ್ಗಳು ಕನ್ನಡದಲ್ಲಿ ಇದ್ದಾರೆ. ಆದರೆ, ಮುಖ್ಯವಾಗಿ ರಮ್ಯಾ ಹೆಸರು ಫ್ಯಾನ್ಸ್ಗೆ ನೆನಪಾಗಿದೆ.