ಮಾರ್ಟಿನ್ ಸಿನಿಮಾದ ಬಳಿಕ ನಟ ಧ್ರುವ ಸರ್ಜಾ ಫ್ಯಾಮಿಲಿ ಜೊತೆ ಕ್ವಾಲಿಟಿ ಟೈಂ ಕಳೆಯುತ್ತಿದ್ದಾರೆ. ಮಗ, ಮಗಳು ಹಾಗೂ ಪತ್ನಿ ಜೊತೆ ಚೆನ್ನೈ, ತೋಟದ ಮನೆ, ಸಿನಿಮಾ, ಶಾಪಿಂಗ್ ಹೀಗೆ ಎಲ್ಲೆಡೆ ಸುತ್ತಾಡುತ್ತಾ ಮಸ್ತ್ ಮಜಾ ಮಾಡ್ತಿದ್ದಾರೆ. ಅದರ ಮಧ್ಯೆ ಸಾಮಾಜಿಕ ಕಾರ್ಯಗಳನ್ನ ಸಹ ಮರೆತಿಲ್ಲ ನಟ ಧ್ರುವ ಸರ್ಜಾ. ಬೆಂಗಳೂರಿನ ಕೋರಮಂಗಲದಲ್ಲಿರೋ ಗೋ ಶಾಲೆಯೊಂದಕ್ಕೆ ತಿಂಗಳಿಗೆ ಎರಡು ಬಾರಿ ಭೇಟಿ ನೀಡ್ತಾರಂತೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.
ಹೌದು.. ಇತ್ತೀಚೆಗೆ ಪತ್ನಿ ಹಾಗೂ ಮಕ್ಕಳ ಜೊತೆ ಗೋಶಾಲೆಗೆ ತೆರಳಿದ್ದ ಧ್ರುವ ಸರ್ಜಾ ಸಾಕಷ್ಟು ಸಮಯ ಕಳೆದು ಬಂದಿದ್ದಾರೆ. ಅಲ್ಲಿ ಧ್ರುವ ಸರ್ಜಾ ಮಕ್ಕಳು ಗೋವುಗಳಿಗೆ ಆಹಾರ ತಿನ್ನಿಸೋ ವಿಡಿಯೋ ಒಂದು ಎಲ್ಲೆಡೆ ಸಖತ್ ವೈರಲ್ ಆಗ್ತಿದೆ. ಅಂದಹಾಗೆ ಇಲ್ಲಿರೋ ಬಹುತೇಕ ಗೋವುಗಳು ಕಸಾಯಿಖಾನೆಗೆ ತೆರಳುತ್ತಿದ್ದ ಗೋವುಗಳಾಗಿದ್ದು, ಅವುಗಳನ್ನ ಸಂರಕ್ಷಿಸಲಾಗಿದೆಯಂತೆ.
ಬೆಂಗಳೂರಿನ ಕೋರಮಂಗಲದಲ್ಲಿರೋ ಈ ಗೋಶಾಲೆಗೆ ನಟ ಧ್ರುವ ಸರ್ಜಾ ಭೇಟಿ ನೀಡ್ತಿರೋದು ಇದೇ ಮೊದಲಲ್ಲ. ಈ ಗೋಶಾಲೆಗೆ ಆರ್ಥಿಕ ಸಹಾಯ ಕೂಡ ಮಾಡಿರೋ ನಟ, ತಿಂಗಳಿಗೆ ಎರಡು ಬಾರಿ ಆದ್ರೂ ವಿಸಿಟ್ ಮಾಡ್ತಾರಂತೆ. ಬಹದ್ದೂರ್ ಗಂಡು ಮಾಡ್ತಿರೋ ಈ ಭರ್ಜರಿ ಸಮಾಜಿಕ ಕಾರ್ಯವನ್ನು ನೋಡಿ ಕನ್ನಡಿಗರು ಭೇಷ್ ಅಂತ ಪ್ರಶಂಸಿಸುತ್ತಿದ್ದಾರೆ. ಇನ್ನು ಧ್ರುವ ನೆಕ್ಸ್ಟ್ ವೆಂಚರ್ ಯಾರೊಟ್ಟಿಗೆ ಅಂತ ಕಾಯ್ತಿರೋ ಫ್ಯಾನ್ಸ್ ಮತ್ತು ಕನ್ನಡ ಕಲಾಭಿಮಾನಿಗಳಿಗೆ ಸದ್ಯದಲ್ಲೇ ಧ್ರುವ ಬಿಗ್ ಬ್ರೇಕಿಂಗ್ ನ್ಯೂಸ್ ನೀಡ್ತಾರಂತೆ. ಕಥೆಗಳನ್ನ ಕೇಳ್ತಿರೋ ಧ್ರುವ ಆದಷ್ಟು ಬೇಗ ನಿರ್ದೇಶಕರ ಸಮೇತ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಜೊತೆಗೆ ಕೆಡಿ ಸಿನಿಮಾದ ರಿಲೀಸ್ ಅಪ್ಡೇಟ್ ಕೂಡ ನೀಡಲಿದ್ದಾರೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್