ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಅನ್ನಪೂರ್ಣ ತುಕಾರಾಂ ತಮ್ಮ ಮೊದಲ ಗೆಲುವನ್ನ ದಾಖಲಿಸಿದ್ದಾರೆ. ಬಿಜೆಪಿಯ ಬಂಗಾರು ಹನುಮಂತು ಅವರನ್ನ ಸೋಲಿಸುವ ಮೂಲಕ ಮತ್ತೆ ಸಂಡೂರಿನಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದಾರೆ. ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಅನ್ನಪೂರ್ಣ ತುಕಾರಾಂ ಬಂಗಾರು ಹನುಮಂತು ಅವರನ್ನ 9649 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಯಾರಿಗೆ ಎಷ್ಟು ಮತ:
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ- 93616
ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು- 83967
ಕರ್ನಾಟಕ ಜನತಾ ಪಕ್ಷ ಅಭ್ಯರ್ಥಿ ಆಂಜನಪ್ಪ – 632
ಪಕ್ಷೇತರ ಅಭ್ಯರ್ಥಿ- ಎನ್ ವೆಂಕಣ್ಣ – 461
ಪಕ್ಷೇತರ ಅಭ್ಯರ್ಥಿ – ಟಿ ಯರಿಸ್ವಾಮಿ – 278
ಪಕ್ಷೇತರ ಅಭ್ಯರ್ಥಿ – ಟಿ ಎಂ ಮಾರುತಿ – 211
ನೋಟಾ – 1040