ಸಂಡೂರು ಸೋಲನ್ನು ಒಪ್ಪಿಕೊಳ್ಳುತ್ತೇವೆ. ಈ ರೀತಿಯಲ್ಲಿ ಸೋಲುತ್ತೇವೆ ಎಂದು ಅಂದುಕೊಂಡಿರಲಿಲ್ಲಾ ಎಂದು ಶಾಸಕ ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 5 ಸಾವಿರ ಮತಗಳಿಂದ ನಾವು ಗೆಲ್ಲುತ್ತೇವೆ ಅಂತ ಇತ್ತು. ಆದರೆ 9 ಸಾವಿರಕ್ಕೂ ಹೆಚ್ಚು ಅಂತರದಿಂದ ಕಾಂಗ್ರೆಸ್ಗೆ ಗೆಲುವಾಗಿದೆ. ಸಿಎಂ ಸಿದ್ದರಾಮಯ್ಯ ಪಂಚಾಯತ್ ಲೆವಲ್ನಲ್ಲಿ ಪ್ರಚಾರ ಮಾಡಿದ್ದಾರೆ. 100 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಹಣ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸಂಡೂರು ಸರ್ಕಲ್ ಇನ್ಸ್ಪೆಕ್ಟರ್, ಮಹೇಶ್ ಗೌಡ ಸೇರಿದಂತೆ ಅನೇಕ ಪೊಲೀಸರ ದುರ್ಬಳಕೆ ಆಗಿದೆ. ಸಂಡೂರು ಜನರ 83 ಸಾವಿರ ಮತಗಳು ಬಂಗಾರು ಹನುಮಂತು ಅವರಿಗೆ ಬಂದಿವೆ ಎಂದರು.
ನಮಗೆ ಇನ್ನೂ 5 ಸಾವಿರ ಮತಗಳು ನಮಗೆ ಬೇಕಿತ್ತು. ಸಿಎಂ ಸಿದ್ದರಾಮಯ್ಯ ಅವರು ಬಂದು ಕ್ಯಾಂಪೇನ್ ಮಾಡಿದ್ದಾರೆ. ಹಣದ ಹೊಳೆ ಹರಿಸಿದ್ದಾರೆ. ಅಧಿಕಾರ ದುರುಪಯೋಗ ಆಗಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಇವೆಲ್ಲವೂ ಇವತ್ತು ಕೆಲಸ ಮಾಡಿದೆ. ತುಕಾರಾಂ ಅವರಿಗೆ ಎಂಪಿ ಚುನಾವಣೆಯಲ್ಲಿ ಲೀಡ್ ಎಷ್ಟಿತ್ತು, ಈಗ ಎಷ್ಟಿದೆ ನೋಡಿ. 83 ಸಾವಿರ ಮತಗಳು ನಮಗೆ ಬಂದಿವೆ. 30-40 ಸಾವಿರ ಮತಗಳ ಅಂತರದಿಂದ ನಾವು ಸೋತಿಲ್ಲಾ. ನಮಗೆ 5,000 ಮತಗಳು ಬೇಕಿತ್ತು. ರಾಜ್ಯದಲ್ಲಿ ಮೂರು ಕಡೆ ಕಾಂಗ್ರೆಸ್ ಬಂದಿದೆ. ಅಧಿಕಾರ ದುರುಪಯೋಗ ಮಾಡಲಾಗಿದೆ. ಆಡಳಿತ ಪಕ್ಷ ಇರೋ ಸಮಯದಲ್ಲಿ ಸಹಜವಾಗಿ ಆ ಪಕ್ಷ ಗೆಲ್ಲುತ್ತದೆ ಎಂದು ಹೇಳಿದರು.ಸಂಡೂರು ಸೋಲನ್ನು ಒಪ್ಪಿಕೊಳ್ಳುತ್ತೇವೆ. ಈ ರೀತಿಯಲ್ಲಿ ಸೋಲುತ್ತೇವೆ ಎಂದು ಅಂದುಕೊಂಡಿರಲಿಲ್ಲಾ ಎಂದು ಶಾಸಕ ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.