ಸಿಂಗಾರ ಸಿರಿಯೆ ಬೆಡಗಿ ಸಪ್ತಮಿ ಗೌಡ ‘ಕಾಂತಾರ’ ಪ್ರೀಕ್ವೆಲ್ ಸಿನಿಮಾದಲ್ಲಿ ನಟಿಸುತ್ತಿಲ್ಲ. ಹೌದು, ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದ ಮೂಲಕ ಸಪ್ತಮಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದರು.
ಇದಾದ ಬಳಿಕ ಈ ಚಿತ್ರದ ಪ್ರೀಕ್ವೆಲ್ ಬರಲಿದ್ದು ಅದ್ರಲ್ಲಿ ಸಪ್ತಮಿ ಕಾಣಿಸಿಕೊಳ್ತಿಲ್ಲ.ಇನ್ನು ಸಪ್ತಮಿ ಗೌಡ ಈ ಸಿನಿಮಾದಲ್ಲಿ ನನ್ನ ಪಾತ್ರವಿಲ್ಲ.
ಹೀಗಾಗಿ ಇದರಲ್ಲಿ ನಾನು ನಟಿಸುತಿಲ್ಲ ಎಂದು ಹೇಳಿದ್ದಾರೆ. ಇಂದಿನಿಂದ (ಏ.15 ) ಕಾಂತಾರ ಚಾಪ್ಟರ್-1 ಶೂಟಿಂಗ್ ಆರಂಭವಾಗಲಿದ್ದು, ರಿಷಬ್ ಊರಿನಲ್ಲಿ ಚಿತ್ರೀಕರಣಕ್ಕಾಗಿ ಅದ್ದೂರಿ ಸೆಟ್ ಹಾಕಲಾಗಿದೆ.
ಚಿತ್ರೀಕರಣ ಇನ್ನೂ ಪ್ರಾರಂಭವೇ ಆಗಿಲ್ಲ, ಆದ್ರೆ ಕಾಂತಾರ ಚಿತ್ರ OTT ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೋ ಖರೀದಿಸಿದೆ