ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜಪೂತ್ ತಮ್ಮ ಸೌಂದರ್ಯದಲ್ಲಿ ಯಾವ ನಟಿಗೂ ಕಮ್ಮಿ ಇಲ್ಲ. ಮೀರಾ ರಜಪೂತ್ ಅವರು ತಮ್ಮದೇ ಆದ ಫ್ಯಾಷನ್ ಸೆನ್ಸ್ಗೆ ಹೆಸರುವಾಸಿಯಾಗಿದ್ದು, ಶಾಹಿದ್ ಕಪೂರ್ ಅವರ ಪತ್ನಿಯಾಗಿ ಮಾತ್ರವಲ್ಲದೆ, ತನ್ನದೇ ಆದ ಶೈಲಿಯ ಫ್ಯಾಷನ್ ಐಕಾನ್ ಆಗಿಯೂ ಗಮನ ಸೆಳೆದಿದ್ದಾರೆ. ಮೀರಾ ರಜಪೂತ್ ಅವರ ಈವರೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಗಳನ್ನು ಪಡೆದಿರುವ ಫೋಟೋಗಳಲ್ಲಿನ ಅವರ ಕಾಸ್ಟ್ಯೂಮ್ ಹಾಗೂ ಆಭರಣಗಳ ಸೆಲೆಕ್ಷನ್ ಬಗ್ಗೆ ಇಲ್ಲಿದೆ ಮಾಹಿತಿ.
ಸಮಕಾಲೀನ ಹಾಗೂ ಕ್ಲಾಸಿಕ್ ಚಾರ್ಮ್ ಸಮ್ಮಿಲನವಿರುವ ಆಭರಣಗಳ ಕಲೆಕ್ಷನ್ ಮೀರಾ ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಮೀರಾ ಅವರು ಆಧುನಿಕ ವಜ್ರದ ವಿನ್ಯಾಸಗಳಿಗೆ ಹೆಚ್ಚು ಆಕರ್ಷಿತಗೊಂಡಿದ್ದರೂ, ಸಾಂಪ್ರದಾಯಿಕ ಪೋಲ್ಕಿ ಆಭರಣಗಳತ್ತವೂ ಸಮಾನವಾದ ಮೆಚ್ಚುಗೆ ಹೊಂದಿದ್ದಾರೆ. ಮೀರಾ ಆಗಾಗ್ಗೆ ಅನಿತಾ ಡೋಂಗ್ರೆ ಪಿಂಕ್ ಸಿಟಿಯಿಂದ ಸಿಂಗಲ್ ಲೈನ್ ಪೋಲ್ಕಿ ನೆಕ್ಲೇಸ್ನಂತಹ ಹಳದಿ ಪ್ರಿಂಟೆಡ್ ಡಿಸೈನರ್ ಸೀರೆಗಳಿಗೆ ಒಪ್ಪುವಂತಹ ಆಭರಣಳನ್ನು ಆಯ್ಕೆ ಮಾಡುತ್ತಿರುತ್ತಾರೆ.
ಇದನ್ನ ಓದಿ: ಶಂಕ್ರಣ್ಣ ಜನ್ಮ ಜಯಂತಿ ವಿಶೇಷ ‘ಮರ್ಯಾದೆ ಪ್ರಶ್ನೆ’ ಟೀಂ ಭರ್ಜರಿ ಆಟೋ ಪ್ರೊಮೋಷನ್ಸ್..!
ಯಾವುದೇ ರೀತಿಯ ಕಿವಿಯೋಲೆಗಳನ್ನು ಅವುಗಳ ಕನಿಷ್ಠ ಡಿಸೈನ್ ಆಗಿರಲಿ ಅಥವಾ ಅದ್ಧೂರಿಯಾಗಿರಲಿ, ಅವುಗಳು ತಾವು ಧರಿಸಿರುವ ಬಟ್ಟೆಗಳು ಹಾಗೂ ಆ ಕಾಲಕ್ಕೆ ಪ್ರಸ್ತುತವಾಗಿವೆಯೇ ಎಂಬುದನ್ನು ಮೀರಾ ಮೊದಲು ಖಚಿತಪಡಿಸಿಕೊಳ್ಳುತ್ತಾರೆ. ಆ ಕಾಲಕ್ಕೆ ಪ್ರಸ್ತುತವೆನಿಸುವ ಆಭರಣಗಳ ಶೈಲಿಯನ್ನೇ ಅವರು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಸಾಂಪ್ರದಾಯಿಕ ಆಭರಣವನ್ನು ತೊಟ್ಟರೂ, ಅವುಗಳಿಗೆ ಆಧುನಿಕ ಸ್ಪರ್ಶವನ್ನೂ ನೀಡುವ ಕೆಲಸ ಮಾಡುತ್ತಾರೆ.
ಸಾಮಾನ್ಯವಾಗಿ ಸರಳವಾದ ಬಟ್ಟೆಗಳನ್ನು ಧರಿಸಿ, ಅವುಗಳಿಗೆ ಹೊಂದಾಣಿಕೆಯಾಗುವಂತಹ ಉಂಗುರ, ಕಿವಿಯೋಲೆ ಹಾಗೂ ಆಭರಣಗಳ ವಿನ್ಯಾಸಗಳನ್ನು ಧರಿಸುತ್ತಾರೆ. ಯಾವಾಗಲಾದರೂ ಒಮ್ಮೆ ಈವೆಂಟ್ಗೆ ಹೊಂದುವಂತೆ ಬೋಲ್ಡ್, ವರ್ಣರಂಜಿತ ರತ್ನ, ಸ್ಟೋನ್ಗಳ ಕುಸುರಿಯಿರುವ ಆಭರಣ ಮತ್ತು ಹೊಳೆಯುವ ನೀಲಮಣಿ ನೆಕ್ಲೇಸ್ ಅಥವಾ ಪಚ್ಚೆ ಕಲ್ಲುಗಳ ಕಿವಿಯೋಲೆಗಳನ್ನೂ ಧರಿಸುತ್ತಾರೆ. ಒಟ್ಟಿನಲ್ಲಿ, ತಮ್ಮ ಕಾಸ್ಟ್ಯೂಮ್ಗೆ ಮ್ಯಾಚ್ ಆಗುವಂತಹ ಆಭರಣಗಳನ್ನು ಧರಿಸುವ ಮೂಲಕ ಮೀರಾ ರಜಪೂತ್ ಕಪೂರ್ ಅವರು ತಮ್ಮದೇ ಆದ ಆಕರ್ಷಿತ ಸ್ಟೈಲ್ವೊಂದನ್ನು ರೂಪಿಸಿಕೊಂಡಿದ್ದಾರೆ.