2024ರ ಮಿಸೆಸ್ ಯೂನಿವರ್ಸ್ ಅಮೆರಿಕಾ ನವೆಂಬರ್ 10 ರಂದು ರೆಂಟನ್ನಲ್ಲಿ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಹಲವಾರು ಮಾಡೆಲ್ಗಳು ಭಾಗವಹಿಸಿದ್ದು, ಭಾರತದ ಮಹಿಳೆ ಶಿಫಾಲಿ ಜಮ್ವಾಲ್ ಕೂಡಾ ಇದರಲ್ಲಿ ಸ್ಪರ್ಧಿಯಾಗಿದ್ದರು. ಇದೀಗ ಶಿಫಾಲಿ ದೇಶಕ್ಕೆ ಕೀರ್ತಿ ತರುವ ಮೂಲಕ ಭಾರತೀಯ ಹೊಗಳಿಕೆಗೆ ಪಾತ್ರವಾಗಿದ್ದಾರೆ. ಶಿಫಾಲಿ ಭಾರತೀಯ ಮಹಿಳೆ ಮಾತ್ರವಲ್ಲದೆ, ಇವರು ನಿವೃತ್ತ ಸೇನಾ ಅಧಿಕಾರಿಯೊಬ್ಬರ ಮಗಳು. ಸೇನಾ ಕುಟುಂಬದಲ್ಲಿ ಹುಟ್ಟಿ, ಇದೀಗ ಅವರು ಮಿಸೆಸ್ ಯೂನಿವರ್ಸ್ ಅಮೆರಿಕಾ ಕಿರೀಟ ಗೆಲ್ಲುವ ಮೂಲಕ ಮತ್ತೆ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಮಿಲಿಟರಿ ಕುಟುಂಬದಲ್ಲಿ ಜನಿಸಿದ ಶಿಫಾಲಿ ಜಮ್ವಾಲ್, ನಿವೃತ್ತ ಸೇನಾಧಿಕಾರಿಯವರ ಪುತ್ರಿ. ಜಮ್ಮು ಮೂಲದವರಾದ ಇವರು ಇದೀಗ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಯೂನಿವರ್ಸ್ ಅಮೆರಿಕಾ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಶಿಫಾಲಿ ಜಮ್ವಾಲ್ ನಿವೃತ್ತ ಸೇನಾಧಿಕಾರಿಯೊಬ್ಬರ ಮಗಳು. ಶಿಫಾಲಿ ಭಾರತದ ಜಮ್ಮುವಿನಲ್ಲಿ ಜನಿಸಿದರು. ಮಿಲಿಟರಿ ಕುಟುಂಬದಲ್ಲಿ ಜನಿಸಿದ ಶಿಫಾಲಿ ಬಾಲ್ಯದಿಂದಲೂ ಜೀವನದಲ್ಲಿ ಸಕ್ಸಸ್ ಪಡೆಯೋದು ಹೇಗೆ ಎಂದು ನೋಡಿಕೊಂಡು ಬಂದಿದ್ದಾರೆ. ಇದೇ ಕಾರಣಕ್ಕೆ ಶಿಫಾಲಿಗೆ ಜೀವನದಲ್ಲಿ ಏನನ್ನಾದರು ಸಾಧಿಸಬೇಕೆಂಬ ಛಲವೂ ಇತ್ತು. ಇದೀಗ ಶಿಫಾಲಿ ಜಮ್ವಾಲ್ ಮಿಸೆಸ್ ಯೂನಿವರ್ಸ್ ಅಮೇರಿಕಾ 2024 ರ ಕಿರೀಟವನ್ನು ಗೆಲ್ಲುವ ಮೂಲಕ ಭಾರತದ ಮಗಳು ಏನು ಬೇಕಾದರೂ ಮಾಡಬಹುದು ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಇನ್ನು ಈ ಶಿಫಾಲಿ ಜಮ್ವಾಲ್ ಅವರ ಈ ವಿಜಯ ಬಗ್ಗೆ Lakshya Defence Academy, Jammu ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಶಿಫಾಲಿ ಮಿಸೆಸ್ ಯೂನಿವರ್ಸ್ ಅಮೇರಿಕಾ 2024 ರ ಕಿರೀಟ ಮತ್ತು ಟ್ಯಾಗ್ ಧರಿಸಿದ್ದಾರೆ. ಇನ್ನು ಶಿಫಾಲಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರೂ ಇವರ ಬಗ್ಗೆ ಸರ್ಚ್ ಮಾಡುತ್ತಿದ್ದಾರೆ.
ಶಿಫಾಲಿ ಗೆಲುವಿನಿಂದ ಸದ್ಯ ಭಾರತೀಯರಿಗೆ ತುಂಬಾನೇ ಖುಷಿಯಾಗಿದ್ದು, ಆಕೆಯ ಗೆಲುವಿಗೆ ಅಭಿನಂದನೆಯನ್ನೂ ಸಲ್ಲಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಶಿಫಾಲಿಯವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಮಿಸೆಸ್ ಯೂನಿವರ್ಸ್ ಅಮೆರಿಕಾ ಗೆಲ್ಲೋದು ತುಂಬಾನೇ ಕಷ್ಟದ ಕೆಲಸವಾಗಿದ್ದು, ಸದ್ಯ ಇದನ್ನು ಭಾರತೀಯ ಪ್ರಜೆ ಶಿಫಾಲಿ ಗೆದ್ದಿರೋದು ಇನ್ನೂ ಸಂತಸದ ಸಂಗತಿ.