ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾಅವರು ತಮ್ಮ 15 ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಶೇಷ ‘ಟಾಂಗಾ’ ಸವಾರಿಯೊಂದಿಗೆ ತಮ್ಮ ವಾರ್ಷಿಕೋತ್ಸವನ್ನು ವಿಜ್ರಂಭಣೆಯಿಂದ ಆಚರಿಸುತ್ತಿದಾರೆ. ಇದೇ ವೇಳೆ ಶಿಲ್ಪಾ ಶೆಟ್ಟಿಯವರು ಪತಿ ರಾಜ್ಗಾಗಿ ಹೃದಯಸ್ಪರ್ಶಿ ಪೋಸ್ಟ್ ಅನ್ನು ಬರೆದಿದ್ದಾರೆ.
ಈ ಹಿಂದೆ ರಾಜ್ಕುಂದ್ರಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಾವು ಬೇರೆಯಾಗುತ್ತಿದ್ದೇವೆ ಎಂದು ಪೋಸ್ಟ್ ಹಾಕಿಕೊಂಡಿದ್ದರು ಆ ಪೋಸ್ಟ್ ಭಾರೀ ಸದ್ದು ಮಾಡಿತ್ತು. ಅಭಿಮಾನಿಗಳು ಹಾಗೂ ಹಲವಾರು ಸೆಲೆಬ್ರೆಟಿಗಳು ರಾಜ್ ಮತ್ತು ಶಿಲ್ಪಾ ಬೇರೆಯಾಗುತ್ತಿದ್ದಾರೆ ಎಂದುಕೊಂಡಿದ್ದರು. ಆದರೆ ಅಸಲೀ ಸತ್ಯ ಬೇರೆಯೆ ಇತ್ತು. ರಾಜ್ ಅಸಲಿಗೆ ಪೋಸ್ಟ್ ಹಾಕಿಕೊಂಡಿದ್ದು ತಮ್ಮ ಮಾಸ್ಕ್ ನ ಬಗ್ಗೆ ಅಂದರೆ ತಾನು ಧರಿಸುವ ಮಾಸ್ಕ್ನೊಂದಿಗೆ ದೂರವಾಗುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದರು. ಈಗ ತಮ್ಮ ದಾಂಪತ್ಯ ಸುಖಕರವಾಗಿದೆ ಎಂದು 15 ವರ್ಷಗಳ ವಿವಾಹ ವಾರ್ಷಿಕೋತ್ಸ ಆಚರಿಸಿಕೊಳ್ಳುವುದರ ಮೂಲಕ ಎಲ್ಲಾ ವಿವಾದಗಳಿಗೂ ತೆರೆ ಎಳೆದಿದ್ದಾರೆ.
ಈ ನಡುವೆ ಶಿಲ್ಪಾ ಶೆಟ್ಟಿ ಹೃದಯಸ್ಪರ್ಶಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಹೀಗಿದೆ: “15 ವರ್ಷಗಳು ಮತ್ತು ಎಣಿಸುತ್ತಿಲ್ಲ… ವಾರ್ಷಿಕೋತ್ಸವದ ಶುಭಾಶಯಗಳು. ನೀವು ಪ್ರತಿ ಸವಾರಿಯನ್ನು ಮೌಲ್ಯಯುತವಾಗಿಸುವಿರಿ, ಭಯಾನಕವಾದವುಗಳೂ ಸಹ. ಇನ್ನೂ ಹಲವು ಸಾಹಸಗಳು, ಸವಾರಿಗಳು ಮತ್ತು ವರ್ಷಗಳು ಇಲ್ಲಿವೆ. ‘ಲವಿನ್ಫಿನಿಟಿಯು .’ವಾರ್ಷಿಕೋತ್ಸವದ ಶುಭಾಶಯಗಳು ಧನ್ಯವಾದ ಕತಜ್ಞತೆ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.
ರಾಜ್ ಕುಂದ್ರಾ ಅವರು ತಮ್ಮ ಪತ್ನಿ ಶಿಲ್ಪಾ ಶೆಟ್ಟಿಗಾಗಿ ಟಿಪ್ಪಣಿಯನ್ನು ಬರೆದರು, ಅವರು ಒಟ್ಟಿಗೆ ನೃತ್ಯ ಮಾಡುವ ವೀಡಿಯೊವನ್ನು ಹಂಚಿಕೊಂಡು ಬರೆದಿದ್ದಾರೆ. “ನನ್ನ ಜೀವನದ ಪ್ರೀತಿಗೆ 15 ನೇ ವಾರ್ಷಿಕೋತ್ಸವದ ಶುಭಾಶಯಗಳು. ಪ್ರತಿ ಬೀಟ್, ಟ್ವಿಸ್ಟ್ ಮತ್ತು ಟರ್ನ್ ಮೂಲಕ, ನಾವು ಜೀವನದ ಸವಾಲುಗಳು ಮತ್ತು ಸಂತೋಷಗಳ ಮೂಲಕ ಕೈಜೋಡಿಸಿ ನೃತ್ಯ ಮಾಡಿದ್ದೇವೆ. ನೀವು ಪ್ರತಿ ಕ್ಷಣವನ್ನು ಆಚರಣೆಯಂತೆ ಭಾವಿಸುತ್ತೀರಿ ಮತ್ತು ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಪ್ರೀತಿ, ನಂಬಿಕೆ, ಶಕ್ತಿ ಮತ್ತು ಬೆಂಬಲಕ್ಕಾಗಿ ಇನ್ನೂ ಅನೇಕ ವರ್ಷಗಳ ಪ್ರೀತಿ, ನಗು ಮತ್ತು ಜೀವನದ ಮೂಲಕ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.