Shamita Shetty: ಕನ್ನಡ ಮೂಲದ ಬಾಲಿವುಡ್ ಹಾಟ್ ಬ್ಯೂಟಿ ಶಿಲ್ಪಾ ಶೆಟ್ಟಿಯ ಸಹೋದರಿ ಶಮಿತಾ ಶೆಟ್ಟಿ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಮಿತಾ ಶೆಟ್ಟಿ ಎಂಡೋಮೆಟ್ರಿಯಾಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಇನ್ನು ಈ ಕಾಯಿಲೆ ಗುಣ ಮುಖವಾಗಬೇಕೆಂದರೇ ಶಸ್ತ್ರಚಿಕಿತ್ಸೆ ಅನಿವಾರ್ಯ.
ಆಸ್ಪತ್ರೆಯಲ್ಲಿ ವಿಡಿಯೋದಲ್ಲಿ ಮಾತಾನಾಡಿದ ಶಮಿತಾ ಶೆಟ್ಟಿ, ಎಲ್ಲ ಮಹಿಳೆಯರು ದಯವಿಟ್ಟು ಎಂಡೋಮೆಟ್ರಿಯಾಸಿಸ್ ಕಾಯಿಲೆ ಬಗ್ಗೆ ತಿಳಿದುಕೊಳ್ಳುವುದು ಒಳಿತು.ತೀವ್ರ ಹಂತಕ್ಕೆ ತಲುಪಿರೇ ಜೀವಕ್ಕೆ ಅಪಾಯವಾಗಬಹುದು.
ನಿಮ್ಮ ದೇಹದಲ್ಲಿ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೇ ಅದನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಎಂಡೋಮೆಟ್ರಿಯಾಸಿಸ್ ಕಾಯಿಲೆ ಬಗ್ಗೆ ಹೆಚ್ಚರಿಕೆ ನೀಡಿದ್ದಾರೆ.