ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ತಿದೆ. ಅದರಲ್ಲೂ ಈ ವಾರ ಬಿಗ್ಬಾಸ್ ಹೊಸದೊಂದು ಟಾಸ್ಕ್ ಕೊಟ್ಟಿದ್ದು, ಮನೆಯ ಕ್ಯಾಪ್ಟನ್ ತ್ರಿವಿಕ್ರಮ್ನ ಹೊರತುಪಡಿಸಿ ಒಟ್ಟು 6 ಜೋಡಿಗಳಾಗಿ ವಿಂಗಡಣೆ ಮಾಡಿದ್ದಾರೆ.
ಇನ್ನೂ ನಿನ್ನೆಯ ಸಂಚಿಕೆಯಲ್ಲಿ ಜೋಡಿಗಳ ಪೈಕಿ ಒಬ್ಬರು ಮಾತ್ರ ನಾಮಿನೇಟ್ ಆಗಬೇಕಿರುತ್ತೆ. ಅದನ್ನು ಖುದ್ದು ಆಯಾ ಜೋಡಿಗಳೇ ನಿರ್ಧಾರ ಮಾಡಬೇಕಿರುತ್ತೆ. ಈ ಪ್ರಕ್ರಿಯೆಯಲ್ಲಿ ಸಖತ್ ಇಂಟರೆಸ್ಟಿಂಗ್ ಅನ್ಸಿದ್ದು ಚೈತ್ರಾ ಕುಂದಾಪುರ ಹಾಗೂ ಶಿಶಿರ್ ಜೋಡಿ. ಇಬ್ಬರು ಪರಸ್ಪರ ಚರ್ಚೆ ನಡೆಸುವಾಗ ಚೈತ್ರಾ ನಾನು ಏನೆಂದು ಪ್ರೂವ್ ಮಾಡಿಕೊಳ್ಳಬೇಕು, ನನ್ನ ತಾಯಿ ಬಿಗ್ಬಾಸ್ ಮನೆಗೆ ಬರಬೇಕು ಅವರು ತಲೆ ಎತ್ತಿ ನಿಲ್ಲಬೇಕು. ಇದನ್ನೂ ನಾನು ನೋಡಬೇಕು, ಹಾಗಾಗಿ ನಾನು ಈ ವಾರ ನಾಮಿನೇಟ್ ಆಗಬಾರದು ಎಂದು ಶಿಶಿರ್ ಬಳಿ ಕೇಳಿಕೊಳ್ತಾರೆ. ಆಗ ಶಿಶಿರ್ ಮನಃಪೂರ್ತಿ ಇದಕ್ಕೆ ಒಪ್ಪಿಗೆ ಸೂಚಿಸಿ ತಾವೇ ನಾಮಿನೇಟ್ ಆಗ್ತಾರೆ.
ಆದ್ರೆ, ಇದೀಗ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಬಿಗ್ಬಾಸ್ ಸ್ಪರ್ದಿಗಳಿಗೆ ಜೋಡಿ ಬದಲಿಸಿಕೊಳ್ಳುವ ಚಾನ್ಸ್ ಕೊಟ್ಟಿದ್ದಾರೆ. ನಿಮ್ಮ ಜೋಡಿ ಸದಸ್ಯತ್ವ ಮುರಿಯುವ ಬಗ್ಗೆ ಸ್ಪರ್ಧಿಗಳಿಗೆ ಕೇಳಿದ್ರು. ಈ ವೇಳೆ ಚೈತ್ರಾ ಕುಂದಾಪುರ ಜೋಡಿ ಮುರಿಯಲು ಒಪ್ಪಿಕೊಂಡಿದ್ದಾರೆ. ನೀವು ಶಿಶಿರ್ಗೆ ಬದಲಾಗಿ ತ್ರಿವಿಕ್ರಮ್ಗೆ ಜೋಡಿ ಆಗ್ತೀರಾ ಎಂದು ಬಿಗ್ಬಾಸ್ ಕೇಳಿದಕ್ಕೆ ಚೈತ್ರಾ ಒಪ್ಪಿಕೊಂಡ್ರು.
ಚೈತ್ರಾ ನಿರ್ಧಾರ ಕೇಳಿ ಶಿಶಿರ್ ಶಾಕ್ ಆಗಿದ್ದಾರೆ. ಚೈತ್ರಾ ಕುಂದಾಪುರ ಮೇಲೆ ಕೆಂಡಾಮಂಡಲರಾಗಿದ್ದಾರೆ. ಕೂಗಾಡಿ ರಂಪಾಟ ಮಾಡಿದ್ರು. ನೀವು ಮಾಡಿದ್ದು ಎಷ್ಟು ಸರಿ ಎಂದು ಚೈತ್ರಾಳನ್ನು ಪ್ರಶ್ನೆ ಮಾಡಿದ್ರು. ಜೋಡಿ ಬದಲಾವಣೆ ಚೈತ್ರಾ ಕೊಟ್ಟ ಕಾರಣ ಶಿಶಿರ್ ಕೋಪವನ್ನು ನೆತ್ತಿಗೇರಿಸಿದೆ.ಶಿಶಿರ್ ಗಿಂತ ತ್ರಿವಿಕ್ರಮ್ ದೈಹಿಕ ಹಾಗೂ ಸ್ಟ್ರಾಂಗ್ ಆಗಿದ್ದಾರೆ ಎಂದು ನಾನು ಈ ಆಯ್ಕೆ ಒಪ್ಪಿಕೊಂಡೆ ಎಂದು ಚೈತ್ರಾ ಹೇಳಿದ್ದಾರೆ. ಮಾನಸಿಕ ಎಂದ ಮಾತಿಗೆ ಶಿಶಿರ್ ಕೋಪಗೊಂಡು ಚೈತ್ರಾ ಮೇಲೆ ಕೂಗಾಡಿದ್ದಾರೆ.
ಇದನ್ನು ಓದಿ :ಅನುಷಾ, ಗೋಲ್ಡ್ ಸುರೇಶ್ ಪ್ರಶ್ನೆಗೆ ಸ್ಪರ್ಧಿಗಳು ಗಪ್ಚುಪ್!
ನಾನೇನು ಕಡ್ಲೆ ಪುರಿ ತಿನ್ತಿದ್ನಾ ಎಂದು ಶಿಶಿರ್ ಕೂಗಾಡಿದ್ರು. ನಾಮಿನೇಷನ್ ಅಂತ ಬಂದಾಗ ಅಯ್ಯೋ-ಅಮ್ಮ ಎಂದು ನಾಟಕವಾಡ್ತಾರೆ. ಈ ನಿರ್ಧಾರದಿಂದ ಒಬ್ಬರನ್ನು ಇಡೀ ವಾರದ ಟಾಸ್ಕ್ನಿಂದ ಹೊರಗಿಡ್ತಾರೆ ಅನ್ನೋದು ದೇವರಾಣೆ ನನಗೆ ಗೊತ್ತಿರಲಿಲ್ಲ ಎಂದು ಚೈತ್ರಾ ಆಣೆ ಪ್ರಮಾಣ ಮಾಡಿದ್ದಾರೆ. 12 ವರ್ಷ ಮಣ್ಣು ಹೊತ್ತಿರೋದು ಆ್ಯಕ್ಟರ್ಗಳು ನಾವಲ್ಲ ನೋಡಿ, ಇಲ್ಲಿ ಇದ್ದಾರಲ್ಲ ಚೈತ್ರಾ ಇವರೇ ಮಹಾನ್ ನಟಿ ಎಂದು ಶಿಶಿರ್, ಚೈತ್ರಾ ಕುಂದಾಪುರ ಮೇಲೆ ಕೂಗಾಡಿದ್ದಾರೆ.