Shreyas Iyer; ಟೀಮ್ ಇಂಡಿಯಾದ ವಾರ್ಷಿಕ ಒಪ್ಪಂದದಿಂದ ಶ್ರೇಯಸ್ ಅಯ್ಯರ್ ಅವರನ್ನ ಬಿಸಿಸಿಐ ಕೈ ಬಿಡಲಾಗಿದೆ. ಶ್ರೇಯಸ್ ಅಯ್ಯರ್ ಅವರನ್ನ ಬಿಸಿಸಿಐ ಕೈ ಬಿಡೋದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯಾ? ಮೋದಿ ಅವರಿಗೆ ಮಾಡಿದ ಅವಮಾನದಿಂದ ಶ್ರೇಯಸ್ ಅಯ್ಯರ್ ಅವರನ್ನ ಬಿಸಿಸಿಐ ತನ್ನ ವಾರ್ಷಿಕ ಒಪ್ಪಂದಿಂದ ಕೈಬಿಟ್ಟಿದೆಯಾ.? ಈ ಅನುಮಾನಕ್ಕೆ ಕಾರಣ ಏಕದಿನ ವಿಶ್ವಕಪ್ನ ಒಂದು ವಿಡಿಯೋ. 2023 ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ನಲ್ಲಿ 500 ಕ್ಕೂ ಹೆಚ್ಚು ರನ್ಗಳೊಂದಿಗೆ ಶ್ರೇಯಸ್ ಪ್ರಚಂಡ ಆಟದ ಹೊರತಾಗಿಯೂ, ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಫೆಬ್ರವರಿಯಲ್ಲಿ BCCI ಯ ವಾರ್ಷಿಕ ಒಪ್ಪಂದದಿಂದ ಹೊರಗಿಟ್ಟಿದೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಶ್ರೇಯಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಸ್ತಲಾಘವ ಮಾಡಲು ನಿರಾಕರಿಸಿದಂತೆ ತೋರುತ್ತದೆ. ಆ ವಿಡಿಯೋವನ್ನ ಹಂಚಿಕೊಂಡು ಇದೇ ಕಾರಣಕ್ಕಾಗಿ ಅವರನ್ನು ಕೈಬಿಡಲಾಯಿತು ಎಂದು ಆರೋಪಿಸಿದ್ದಾರೆ. ಆದರೆ ಇದು ಎಡಿಟ್ ಮಾಡಿದ ವಿಡಿಯೋವಾಗಿದೆ. ಸತ್ಯಾಂಶವೇನೆಂದರೆ ವಿಶ್ವಕಪ್ ಫೈನಲ್ ಸೋಲಿನ ನಂತರ ಪ್ರಧಾನಿ ಮೋದಿಯವರು ಪ್ರತೀ ಆಟಗಾರರ ಬಳಿ ಬಂದು ಸಮಾಧಾನ ಮಾಡುತ್ತಾರೆ.
ಈ ವೇಳೆ ಶ್ರೇಯಸ್ ಐಯ್ಯರ್ ಅವರನ್ನೂ ಸಹ ಮೋದಿ ಶೇಕ್ ಹ್ಯಾಂಡ್ ಮಾಡಿ ಸಮಾಧಾನ ಮಾಡಿದ್ದಾರೆ.. ಪೂರ್ತಿ ವಿಡಿಯೋವನ್ನ ನೋಡಿದಾಗ ಸತ್ಯಾಸತ್ಯತೆ ಗೊತ್ತಾಗಲಿದೆ .ಆದರು ಕೂಡ X ಖಾತೆಯಲ್ಲಿ ಮೋದಿಯಿಂದಲೇ ಶ್ರೇಯಸ್ ಅಯ್ಯರ್ ಬಿಸಿಸಿಐ ವಾರ್ಷಿಕ ಒಪ್ಪಂದಿಂದ ಕೈ ಬಿಡಲಾಗಿದೆ ಅಂತ ಪೋಸ್ಟ್ ಮಾಡಲಾಗುತ್ತಿದೆ.