ಲೋಕಸಭೆ ಚುನಾವಣೆಗೂ ಮುನ್ನವೇ ಇಂಡಿಯಾ ಮೈತ್ರಿ ಕೂಟ ಸೋಲನ್ನ ಒಪ್ಪಿಕೊಳ್ತಾ.? ಇಂಥದೊಂದು ಪ್ರಶ್ನೆ ಹುಟ್ಟಲು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕಾರಣವಾಗಿದೆ. ಹೌದು ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟಕ್ಕೆ ಬಹುಮತ ಬರಲ್ಲ ಅಂತ ಹೇಳಿದ್ದಾರೆ.
‘ಇಂಡಿಯಾ’ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತವನ್ನು ಪಡೆಯದಿರಬಹುದು. ಆದರೆ ಅದೇ ವೇಳೆ ಎನ್ಡಿಎ ಮೈತ್ರಿಕೂಟ ಕೂಡ ಸಂಪೂರ್ಣ ಬಹುಮತವನ್ನು ಪಡೆಯುವುದಿಲ್ಲ ಅಂತ ಹೇಳಿದ್ದಾರೆ. ‘ಇಂಡಿಯಾ’ ಮೈತ್ರಿಕೂಟಕ್ಕೆ ಟಿಎಂಸಿಯ ಮಮತಾ ಬ್ಯಾನರ್ಜಿ, ಬಿಜೆಡಿಯ ನವೀನ್ ಪಟ್ನಾಯಕ್, ಸಿಪಿಐ (ಎಂ) ಬೆಂಬಲವೂ ಬೇಕಾಗಬಹುದು ಅಂತ ತಿಳಿಸಿದ್ದಾರೆ.