ಬೆಳ್ತಂಗಡಿ; ಇತ್ತಿಚೀನ ದಿನಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಕಾಡಾನೆ ಉಪಟಳಕ್ಕೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಇನ್ನು ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಾಡಾನೆಗಳನ್ನು ತಡೆಗಟ್ಟಲು ಅರಣ್ಯ ಇಲಾಖೆ ನಾನಾ ಕಸರತ್ತು ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಇದೀಗ ಅರಣ್ಯ ಇಲಾಖೆ ಹೊಸ ಮಾರ್ಗವನ್ನು ಕಂಡುಕೊಂಡಿದೆ. ಕರ್ನಾಟಕದಲ್ಲಿ ದಕ್ಷಿಣ ಹಾಗೂ ಪಶ್ಚಿಮ ಭಾಗದಲ್ಲಿ ಕಾಡಾನೆಗಳನ್ನು ತಡೆಯಲು ಸೌರ ಬೇಲಿಯ ಪ್ರಯತ್ನಕ್ಕೆ ಮುಂದಾಗಿದೆ.
ಈ ಸೌರಬೇಲಿಗೆ ಕಾಡಾನೆಗಳು ಹೆದರಿತ್ತವೆ ಎಂದು ಹೇಳಲಾಗಿದೆ. ಈ ಕುರಿತು ಬೆಳ್ತಂಗಡಿ ತಾಲೂಕಿನ ಮುಂಡಾಜೆ-ಕಡಿರುದ್ಯಾವರ ಅರಣ್ಯ ವ್ಯಾಪ್ತಿಯ ಪರ್ಲಾನಿಯಲ್ಲಿ ಸೌರ ಬೇಲಿ ಪ್ರಯೋಗ ಯಶಸ್ಸು ಕಂಡಿದೆ.