ದಿನ ಭವಿಷ್ಯ: ಶಾಲಿವಾಹನ ಶಕವರ್ಷ 1948, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶೀ ತಿಥಿ, ಗುರುವಾರ. ಇಂದು ಅನ್ಯ ಕ್ಷೇತ್ರದಿಂದ ನೆರವು, ಹಣಕಾಸಿನ ಹರಿವು, ಕೆಲಸದಲ್ಲಿ ಮರೆವು, ಹೊಸ ಯೋಜನೆಯ ಅರಿವು ಇರಲಿದೆ. ಯಾವ ರಾಶಿಗೆ ಯಾವ ಫಲವೆಂದು ತಿಳಿಯಿರಿ.
ಮೇಷ ರಾಶಿ:
ವೈಯಕ್ತಿಕ ಹಿತಾಸಕ್ತಿಯನ್ನು ಕೆಲವೊಮ್ಮೆ ಬದಿಗಿಟ್ಟು ಕೆಲಸ ಮಾಡಬೇಕು. ತ್ವರಿತವಾಗಿ ಹಣ ಗಳಿಸುವ ಮೊದಲು ಆಪ್ತರ ಸಲಹೆ ಪಡೆಯಿರಿ. ಕುಟುಂಬಕ್ಕೆ ಒಳ್ಳೆಯ ಹೆಸರು ಬರುವುದು. ವಿವಾಹದ ಮಾತುಕತೆ ಇಂದು ನಿಶ್ಚಿತವಾಗಬಹುದು. ಇತರರನ್ನು ಗೊಂದಲಕ್ಕೆ ಸಿಲುಕಿಸಬೇಡಿ. ಹೂಡಿಕೆಯಿಂದ ಸಂತೋಷ. ಸ್ನೇಹಿತರು ನಿಮ್ಮನ್ನು ಬಯಸುವರು. ಅಮುಖ್ಯ ಕಾರ್ಯಗಳಿಗೆ ಓಡಾಟವಾಗಬಹುದು. ಪಾಲುದಾರಿಕೆಯಲ್ಲಿ ಮೋಸದ ಭಾವನೆ. ಶತ್ರುಗಳ ಬಗ್ಗೆ ಎಚ್ಚರ. ಎಲ್ಲರನ್ನೂ ಸಮಾನವಾಗಿ ಕಾಣಲು ಪ್ರಯತ್ನಿಸಿದರೂ ಕಷ್ಟ. ಆಪಾಯದ ಸೂಚನೆಯನ್ನು ಗಮನಿಸಿ. ವ್ಯಾಪಾರದಲ್ಲಿ ಕೌಶಲ್ಯವಿದೆ. ಹೂಡಿಕೆಯಲ್ಲಿ ತಪ್ಪು ದಾರಿ ತೋರಿಸಬಹುದು. ಉದ್ಯಮಿಗಳ ಭೇಟಿಯಾಗುವುದು. ಜವಾಬ್ದಾರಿಯನ್ನು ಪೂರೈಸಿ.
ವೃಷಭ ರಾಶಿ:
ಯಾರೋ ಕಾರಣಕ್ಕೆ ಇನ್ನೊಬ್ಬರ ಮೇಲೆ ಕೋಪಗೊಳ್ಳುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಭೀತಿ. ಮುಂಗೋಪದಿಂದ ಕೆಲಸ ಮಾಡಬೇಡಿ. ಪ್ರೀತಿಗೆ ಬೆಲೆ ಕೊಡುವ ಗುಣ ಮುಂದುವರಿಯಲಿ. ರಾಜಕೀಯ ರಹಸ್ಯ ಬಹಿರಂಗವಾಗಬಹುದು. ದಕ್ಷ ಕಾರ್ಯ ಎಲ್ಲರಿಗೂ ಮಾದರಿಯಾಗುವುದು. ತುರ್ತು ಚಿಕಿತ್ಸೆಯ ಅಗತ್ಯ ಬರಬಹುದು. ಅನಗತ್ಯ ಓಡಾಟವನ್ನು ಕಡಿಮೆ ಮಾಡಿ. ನಿಮ್ಮ ಸಂಗತಿ ಉನ್ನತವಾಗಿದೆ. ಪ್ರಯತ್ನಕ್ಕೆ ಫಲ ಸಿಗುವುದು. ಖರ್ಚಿನ ಬಗ್ಗೆ ಎಚ್ಚರಿಕೆ. ಗುರಿಯನ್ನು ಬದಲಾಯಿಸಬೇಡಿ. ಶ್ರಮಕ್ಕೆ ಯೋಗ್ಯ ಆದಾಯ. ಸತ್ಯವನ್ನು ಸ್ಪಷ್ಟವಾಗಿ ಹೇಳಿ. ಯಾವುದೇ ಬೇಸರವಿಲ್ಲ.
ಮಿಥುನ ರಾಶಿ:
ದೀರ್ಘಕಾಲದ ಖರ್ಚು ಕಡಿಮೆಯಾಗುವ ಸಾಧ್ಯತೆ. ಬೇಡದ ವಸ್ತುಗಳನ್ನು ತೆಗೆದಿಡುವಿರಿ. ಮೌನವೇ ಪರಿಹಾರ ಎಂದು ಯೋಚಿಸಿ. ಕಲಹ ಬೇಕೇ ಎಂದು ನಿರ್ಧರಿಸಿ. ಮನಸ್ಸಿಗೆ ಒಂದನ್ನು ತಂದುಕೊಂಡು ಮುಂದುವರಿಯಿರಿ. ಪ್ರಯಾಣದ ಆಯಾಸ ದುರ್ಬಲಗೊಳಿಸುವುದು. ಯೋಜನೆಗೆ ಪುರಸ್ಕಾರ ಸಿಗಬಹುದು. ಆಲಸ್ಯದಿಂದ ಸಮಯ ವ್ಯರ್ಥ. ಚಿತ್ರಕಾರರಿಗೆ ಅವಕಾಶ. ಜೀವನದಲ್ಲಿ ಹಿಂದೆ ಬೀಳುವಿರಿ. ಸಂಗಾತಿಯೊಂದಿಗೆ ಉತ್ತಮ ದಿನ. ಕಾಳಜಿಯಿಂದ ಮುಜುಗರ. ಕಟ್ಟಡ ನಿರ್ಮಾಣಕ್ಕೆ ಲಾಭ. ಹೊಸ ಯೋಜನೆ ಸಿಗುವುದು. ಕಾರ್ಯಕ್ಷೇತ್ರದಲ್ಲಿ ಪ್ರಗತಿ.
ಕರ್ಕಾಟಕ ರಾಶಿ:
ಸಹೋದ್ಯೋಗಿಗಳ ಜೊತೆ ಸಾಮರಸ್ಯ ಕಷ್ಟ. ವಿವಾಹಕ್ಕೆ ವಿಘ್ನಗಳು. ಕುಟುಂಬದಲ್ಲಿ ಶಾಂತಿ. ಸಂತಾನದಿಂದ ಅಶಾಂತಿ. ನಿಯಮ ಭಂಗದಿಂದ ಕಷ್ಟ. ನಿಮ್ಮವರು ನಿಮ್ಮವರಾಗದಿರಬಹುದು. ಕಲಹ ತಣ್ಣಗಾಗುವುದು. ಧಾರ್ಮಿಕ ಕಾರ್ಯಕ್ಕೆ ಸಂಪತ್ತು ಖರ್ಚು. ದಾಖಲೆಗಳು ಸರಿಯಾದ ಮಾಹಿತಿ ಕೊಡುವುವು. ಅಪರೂಪದ ವ್ಯಕ್ತಿಗಳ ಸಂಪರ್ಕ. ಕೃಷಿಯಿಂದ ಲಾಭ. ವಿರೋಧಿಗಳು ಹೆಚ್ಚು. ಕಲಾವಿದರಿಗೆ ವಿದೇಶ ಪ್ರವಾಸ. ನಿಂತ ಕಾರ್ಯಕ್ಕೆ ಚಾಲನೆ. ಆಶ್ರಯದಾತರಿಗೆ ಅಪಮಾನ. ಸ್ಪರ್ಧೆಯ ಶ್ರಮ ವ್ಯರ್ಥ.
ಸಿಂಹ ರಾಶಿ:
ವ್ಯವಹಾರದಲ್ಲಿ ಓಡಾಟ. ಅಕಾಲದ ಭೋಜನ, ವಿಶ್ರಾಂತಿಯಿಂದ ಆರೋಗ್ಯದಲ್ಲಿ ವ್ಯತ್ಯಾಸ. ಪಿತ್ರಾರ್ಜಿತ ಆಸ್ತಿ ಆನಂದ. ಶತ್ರುಗಳು ಗಮನಿಸುವರು. ಸಮಸ್ಯೆಗೆ ಪರಿಹಾರ. ಅಶುಭ ವಾರ್ತೆಯಿಂದ ಉತ್ಸಾಹಕ್ಕೆ ಭಂಗ. ಜಾಣ್ಮೆಯಿಂದ ದೂರ ಮಾಡಿ. ಪ್ರತ್ಯಕ್ಷವಾಗಿ ಪರಿಶೀಲಿಸಿ. ಪ್ರಯಾಣ ಅನಿವಾರ್ಯವಲ್ಲ. ಸಮಯ ವೇಗವಾಗಿ ಸಾಗುವುದು. ಬದಲಾವಣೆಗೆ ಉತ್ತರ ಕೊಡುವಿರಿ. ಹಲವು ಕಾರ್ಯಗಳು ಒಮ್ಮೆಗೆ. ಎಲ್ಲವೂ ಆಗಿಹೋದಂತೆ ಭಾಸವಾಗುವುದು. ಬಿಟ್ಟು ಹೋದವರ ಬಗ್ಗೆ ಚಿಂತನೆ ಬೇಡ. ವಸತಿ ಬದಲಾವಣೆ ಸಾಧ್ಯ.
ಕನ್ಯಾ ರಾಶಿ:
ಕೆಲಸಕ್ಕೆ ದೈವ ಬಲ ಪ್ರಾರ್ಥಿಸುವಿರಿ. ಸ್ವಂತ ಉದ್ಯೋಗಕ್ಕೆ ಲಾಭ. ಧಾರ್ಮಿಕ ಕಾರ್ಯಕ್ಕೆ ಲಾಭ. ಶಾಂತ ಮನಸ್ಸಿನಿಂದ ಪ್ರಗತಿ. ಉಕರಣಗಳಿಗೆ ಧನವ್ಯಯ. ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನ. ಉತ್ತಮರ ಸಹವಾಸದಿಂದ ತಿರುವು. ಅತಿಯಾದ ಆತ್ಮವಿಶ್ವಾಸ ಬೇಡ. ಮಾರ್ಗಭ್ರಷ್ಟಗೊಳಿಸುವ ಕೆಲಸ ನಡೆಯಬಹುದು. ಹಿರಿಯರಿಂದ ಹಿತೋಪದೇಶ. ವ್ಯಾಪಾರದಲ್ಲಿ ಇಕ್ಕಟ್ಟು. ತಾಳ್ಮೆ ಕಾಯ್ದುಕೊಳ್ಳಿ. ಅರಿತವರು ಬಿಡಲಾರರು. ಅನಾರೋಗ್ಯದಿಂದ ಉತ್ಸಾಹ ಕಡಿಮೆ. ಸಮಯ ಕೆಲಸಕ್ಕೆ ವ್ಯಯ.
ತುಲಾ ರಾಶಿ:
ಅಭಿವೃದ್ಧಿಯಿಂದ ಅಸೂಯೆ. ಕಾರ್ಯದಕ್ಷತೆಗೆ ಉನ್ನತ ಸ್ಥಾನ. ಮಾನಸಿಕ ತೊಂದರೆ. ಅವಕಾಶಗಳು ಕೈತಪ್ಪುವ ಸಾಧ್ಯತೆ. ವಿರೋಧ ಸಹಿಸಲಾಗದು. ಪರೀಕ್ಷೆಯ ಭಯ. ಭೂವ್ಯವಹಾರದಲ್ಲಿ ನಷ್ಟ. ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆ. ಪರಿಶ್ರಮಕ್ಕೆ ಫಲ. ಸಾಮರ್ಥ್ಯ ವೃದ್ಧಿಗೆ ಕೌಶಲ. ಸ್ತ್ರೀಯರಿಂದ ಕೌಶಲ ಪ್ರದರ್ಶನ. ಪಾಲುದಾರಿಕೆಯಿಂದ ಲಾಭ. ದಾಂಪತ್ಯದಲ್ಲಿ ಸೌಹಾರ್ದ. ಮಕ್ಕಳಿಗೆ ಅನಗತ್ಯ ಖರ್ಚು ಬೇಡ. ಅಸತ್ಯವನ್ನು ಕಂಡುಹಿಡಿಯುವಿರಿ.
ವೃಶ್ಚಿಕ ರಾಶಿ:
ಅಧಿಕಾರದಲ್ಲಿ ವಿವೇಚನೆ ಕಳೆಯುವ ಭೀತಿ. ಸಾಮಾಜಿಕ ಮನ್ನಣೆಗೆ ಅಸೂಯೆ. ಬಂಗಾರದ ವ್ಯಾಪಾರಿಗಳಿಗೆ ಲಾಭ. ಮಾನಸಿಕ ಶಾಂತಿ. ಕುಟುಂಬದಿಂದ ಅಶುಭ ಸುದ್ದಿ. ಸರಳ ಉಪಾಯ. ಪ್ರಾಮಾಣಿಕತೆಗೆ ಪ್ರಶಂಸೆ. ವಿದ್ಯಾರ್ಥಿಗಳಿಗೆ ಸ್ವಪ್ರತಿಭೆಯ ಪ್ರದರ್ಶನ. ಸಂತಾನದ ಸುಖ. ಪ್ರೀತಿಪಾತ್ರರ ಆಗಮನ. ಸಂಗಾತಿಯಿಂದ ಖುಷಿಯ ಪ್ರಯತ್ನ. ಮಿತ್ರರಿಂದ ವಿರೋಧ. ಅಮೂಲ್ಯ ವಸ್ತು ಖರೀದಿ.
ಧನು ರಾಶಿ:
ಮಿತ್ರರಿಂದ ಸಲ್ಲದ ಮಾತು. ದಾಂಪತ್ಯದ ವಿರಸ ನ್ಯಾಯಾಲಯಕ್ಕೆ. ಆಸ್ತಿಯಿಂದ ಕಲಹ. ಅಪಪ್ರಚಾರ. ಸಾಮಾಜಿಕ ಮನ್ನಣೆ. ವಸ್ತುಗಳ ಮೇಲೆ ಮೋಹ. ಸ್ನೇಹಿತರ ಜೊತೆ ಕಾಲಕ್ಷೇಪ. ಇತರರ ನೋವಿಗೆ ಸ್ಪಂದನೆ. ಸಂಗಾತಿಯ ಯೋಚನೆಗೆ ಪ್ರತಿಸ್ಪಂದನೆ. ಹಳೆಯ ನೋವು. ಮಕ್ಕಳ ಖರ್ಚಿನಿಂದ ಆರ್ಥಿಕ ಹಿನ್ನಡೆ. ಮಧ್ಯವರ್ತಿಗಳಿಗೆ ನಷ್ಟ. ಹಳೆಯ ಸ್ನೇಹಿತರ ಭೇಟಿ. ಆಕಸ್ಮಿಕ ಧನಲಾಭ. ಶ್ರೇಷ್ಠರ ಸಹವಾಸ.
ಮಕರ ರಾಶಿ:
ಅನಾರೋಗ್ಯದಿಂದ ಕಠೋರ ಮಾತು. ಸಜ್ಜನರೆಂದು ಭಾವನೆ. ಮೌಲ್ಯಯುತ ವಸ್ತು ಖರೀದಿ. ಹಣದ ಪ್ರಾಮುಖ್ಯತೆ. ದಾಂಪತ್ಯದಲ್ಲಿ ಶತ್ರುತ್ವ. ವಿದ್ಯುದುಪಕರಣದಿಂದ ನಷ್ಟ. ಅಗತ್ಯ ಮಾತು. ಅಸೂಯೆಯಿಂದ ತೊಂದರೆ. ಹಿರಿಯರ ಅನಾರೋಗ್ಯದಿಂದ ಆತಂಕ. ನಿಯಂತ್ರಣ ಬೇಕು. ಉತ್ಸಾಹಕ್ಕೆ ಕೊರತೆ. ಚಂಚಲ ಮನಸ್ಸಿಗೆ ವಿವಾದ ಬೇಡ. ಸಂಗಾತಿಯಿಂದ ಬೆಂಬಲ. ಒಂಟಿತನದ ಭಾವ. ಸ್ತ್ರೀಯರಿಗೆ ಕಿರಿಕಿರಿ.
ಕುಂಭ ರಾಶಿ:
ಆಲೋಚನೆ ದಿಕ್ಕು ತಪ್ಪಬಹುದು. ಪುಣ್ಯಸ್ಥಳ ಭೇಟಿ. ಆಪ್ತರ ಜೊತೆ ಸಮಾಲೋಚನೆ. ಸಂಗಾತಿಯಿಂದ ಹಣದ ನಿರೀಕ್ಷೆ. ಹಿರಿಯರ ಆಶೀರ್ವಾದ. ಹಣದ ವ್ಯಯದಿಂದ ಆತಂಕ. ವಿವೇಚನೆ. ನಂಬಿಕೆಯಿಂದ ಕಾರ್ಯ ಸಾಧನೆ. ದಂಪತಿಗಳ ಮಾತುಕತೆ ಮುಂದುವರಿಯುವುದು. ಸಾಲ ದೀರ್ಘಕಾಲ ಇಡಬೇಡಿ. ಪ್ರೀತಿಯ ಅದ್ಭುತ ಭಾವ. ಆದಾಯಕ್ಕೆ ನಾನಾ ಮೂಲ. ಆಕಸ್ಮಿಕ ಆರೋಗ್ಯ ಸಮಸ್ಯೆ. ಬದಲಾವಣೆಗೆ ಪ್ರಯತ್ನ.
ಮೀನ ರಾಶಿ:
ಕೋಪಕ್ಕೆ ಕಾರಣವಿದ್ದು, ಮನೆಯವರು ಶಾಂತಗೊಳಿಸುವರು. ಒತ್ತಡದಲ್ಲೂ ಪ್ರಶಂಸೆ. ಹಣದ ಸಮಸ್ಯೆಯಿಂದ ಮುಕ್ತಿ. ಅವಕಾಶಗಳು ಬರಲಿವೆ. ವೈದ್ಯರಿಗೆ ಗೌರವ. ಪರೋಪಕಾರದಿಂದ ತೃಪ್ತಿ. ಕೃಷಿಯಿಂದ ಲಾಭ. ಉನ್ನತ ಉದ್ದೇಶ ಸಾಕಾರ. ಹಬ್ಬದ ವಾತಾವರಣ. ಅಲ್ಪ ಆದಾಯವೂ ಉತ್ತೇಜನ. ವಿವಾಹಕ್ಕೆ ಸಲಹೆ. ಭೂಮಿ ವಿಚಾರ ಇತ್ಯರ್ಥ. ಉನ್ನತ ವಿದ್ಯೆಗೆ ಹೊರಗಡೆ ವಾಸ. ಕಾರ್ಯಕ್ಕೆ ಓಡಾಟ. ಕೆಲಸದ ಬದಲಾವಣೆ.