ಇಂದಿನ ಗ್ರಹಗಳ ಸ್ಥಾನ ಮತ್ತು ರಾಶಿಚಕ್ರದ ಪ್ರಭಾವವು ವ್ಯಕ್ತಿಗಳ ಜೀವನದ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತದೆ. ಈ ದಿನದಲ್ಲಿ ಸೂರ್ಯ, ಚಂದ್ರ ಮತ್ತು ಗುರು ಗ್ರಹಗಳ ಸಂಯೋಗವು ಶುಭ ಫಲಗಳನ್ನು ನೀಡಲಿದೆ ಎಂದು ಜ್ಯೋತಿಷ್ಯ ತಜ್ಞರು ತಿಳಿಸಿದ್ದಾರೆ. ಪ್ರತಿ ರಾಶಿಯವರೂ ತಮ್ಮ ವೃತ್ತಿ, ಆರೋಗ್ಯ, ಪ್ರೇಮ ಮತ್ತು ಆರ್ಥಿಕ ಸ್ಥಿತಿಗಳಿಗೆ ಸಂಬಂಧಿಸಿದ ಹೊಸ ಅವಕಾಶಗಳನ್ನು ಎದುರಿಸಬಹುದು. ಇದರೊಂದಿಗೆ, ಕೆಲವು ರಾಶಿಗಳಿಗೆ ಸಾವಧಾನತೆ ಮತ್ತು ಯೋಜನಾಬದ್ಧತೆಯ ಅಗತ್ಯವಿರುತ್ತದೆ.
ಮೇಷ ರಾಶಿ (Aries)
ಈ ರಾಶಿಯವರಿಗೆ ಸಹೋದ್ಯೋಗಿಗಳ ಸಹಕಾರದಿಂದ ಸಾಧನೆ ಸಾಧ್ಯ. ಆದರೆ, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅವಕಾಶ ಸಿಗಲಿದೆ. ವೃತ್ತಿ ಮತ್ತು ವ್ಯಪಾರ ಲಾಭದಾಯಕವಾಗುತ್ತದೆ.
ವೃಷಭ ರಾಶಿ (Taurus)
ಹಣಕಾಸಿನ ವಿಷಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಲಹೆ ಪಡೆಯಿರಿ. ಈ ರಾಶಿಯವರಿಗೆ ಸಾಲದ ಒತ್ತಡ ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ವಿವಾದಗಳು ಉಂಟಾಗುತ್ತದೆ. ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ.
ಮಿಥುನ ರಾಶಿ (Gemini)
ಈ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗಗಳಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಬೆಂಬಲ ಹೆಚ್ಚಾಗುತ್ತದೆ. ಪ್ರಯಾಣದ ಅವಕಾಶಗಳು ಲಭ್ಯ.
ಕರ್ಕಾಟಕ ರಾಶಿ (Cancer)
ಈ ರಾಶಿಯವರಿಗೆ ಉದ್ಯೋಗದಲ್ಲಿ ಅಧಿಕಾರಿಗಳ ಜೊತೆಗಿನ ಚರ್ಚೆಗೆ ಫಲ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಮಮ್ ಪ್ರಯತ್ನಗಳಿಗೆ ಉತ್ತಮ ಫಲಿತಾಂಶ ಪಡೆಯುತ್ತೀರಿ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.
ಸಿಂಹ ರಾಶಿ (Leo)
ಈ ರಾಶಿಯವರು ದಿಢೀರ್ ಪ್ರವಾಸವನ್ನು ಕೈಗೊಳ್ಳುವಿರಿ. ವೃತ್ತಿ ಮತ್ತು ವ್ಯವಹಾರಗಳಿ ಮಂದಗತಿಯಲ್ಲಿ ಸಾಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಮುಜಾಗ್ರತೆ ವಹಿಸಿ. ನೀವು ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಉತ್ತಮ. ಹೊಸ ಯೋಜನೆಗಳಿಗೆ ಹಣಕಾಸು ಸಹಾಯ ಮಾಡಲಿದೆ. ಕುಟುಂಬದೊಂದಿಗೆ ಸಮಯ ಕಳೆಯಿರಿ.
ಕನ್ಯಾ ರಾಶಿ (Virgo)
ಈ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಸ್ಥಿರಾಸ್ತಿ ವಿವಾದಗಳು ಕಿರಿಕಿರಿಯನ್ನು ಉಂಟು ಮಾಡುತ್ತವೆ. ಹಣಕಾಸಿನ ವಿಚಾರದಲ್ಲಿ ಬೇರೆಯವರ ಮಾತು ಕೇಳುವುದು ಒಳ್ಳೆಯದಲ್ಲ.
ತುಲಾ ರಾಶಿ (Libra)
ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಈ ರಾಶಿಯವರಿಗೆ ವ್ಯಾಪಾರ ಮತ್ತು ಉದ್ಯೋಗಗಳು ಹೆಚ್ಚು ಅನುಕೂಲಕರವಾಗಿರುತ್ತದೆ. ಹಳೆ ಸಾಲ ವಸೂಲಿಯಾಗುತ್ತದೆ. ಮನರಂಜನಾ ಸಮಾರಂಭಬದಲ್ಲಿ ಭಾಗವಹಿಸುವಿರಿ.
ವೃಶ್ಚಿಕ ರಾಶಿ (Scorpio)
ಈರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭ ದೊರೆಯಲಿದೆ. ದೀರ್ಘಕಾಲದ ಕೆಲಸಗಳು ಪೂರ್ಣಗೊಳ್ಳಿಸುತ್ತೀರಿ. ಬರಬೇಕಾದ ಹಣ ಸಕಾಲಕ್ಕೆ ಸಿಗಲಿದೆ. ವೃತ್ತಿಯಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಿ.
ಧನು ರಾಶಿ (Sagittarius)
ಈ ರಾಶಿಯವರು ನಿಮ್ಮ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ನಿರುದ್ಯೋಗಿಗಳ ಪ್ರಯತ್ನ ಫಲಿಸುವುದಿಲ್ಲ. ದೂರ ಪ್ರಯಾಣದ ಅವಕಾಶಗಳು ಸಿಗಲಿದೆ. ವೃತ್ತಿ ಮತ್ತು ವ್ಯಾಪಾರ ನಿಧಾನವಾಗಿ ಸಾಗಲಿದೆ. ಕುಟುಂಬದ ಬೆಂಬಲದಿಂದ ಯಶಸ್ಸು ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ.
ಮಕರ ರಾಶಿ (Capricorn)
ಈ ರಾಶಿಯವರಿಗೆ ವೃತ್ತಿ ಮತ್ತು ವ್ಯಾಪಾರದಲ್ಲಿ ಸಮಸ್ಯೆಗಳು ಹೆಚ್ಚಾಗಲಿದೆ. ನಿಮ್ಮ ಸಂಬಂಧಿಕರಿಂದ ಅನಿರೀಕ್ಷಿತ ಮಾತುಗಳು ಕೇಳಬೇಕಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಮುಂದೂಡಲಾಗುತ್ತದೆ. ವೃತ್ತಿಯಲ್ಲಿ ಮೆಚ್ಚುಗೆ ದೊರೆಯಲಿದೆ. ಪ್ರಯಾಣದ ಅವಕಾಶಗಳು ಲಭ್ಯ.
ಕುಂಭ ರಾಶಿ (Aquarius)
ಈ ರಾಶಿಯವರಿಗೆ ವ್ಯಾಪಾರ ಮತ್ತು ಉದ್ಯೋಗಗಳು ಲಾಭದಾಯಕವಾಗಿರಲಿದೆ. ಹಳೆ ಸಾಲ ವಸೂಲಿ ಆಗಲಿದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿದೆ. ಕೈಗೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ. ಹೊಸ ಸ್ನೇಹಿತರೊಂದಿಗೆ ಸಂಪರ್ಕ ಬೆಳೆಯಲಿದೆ. ಆರ್ಥಿಕ ಯೋಜನೆಗಳು ಫಲದಾಯಕ.
ಮೀನ ರಾಶಿ (Pisces)
ಈ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರಗಳಲ್ಲಿ ಅನಿರೀಕ್ಷಿತ ಬದಲಾವಣೆಗಳು ಸಂಭವಿಸುತ್ತದೆ. ಕೆಲ ಯೋಜನೆಗಳು ಯಶಸ್ವಿಯಾಗಲಿವೆ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಆರೋಗ್ಯದಲ್ಲಿ ಸುಧಾರಣೆ.