ಶನಿವಾರದ ರಾಶಿ ಭವಿಷ್ಯ: ನಿಮ್ಮ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಿರಿ!

Whatsapp image 2024 11 14 at 7.33.15 am

ಈ ದಿನದಂದು ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ, ಶನಿವಾರ ಅನಾರೋಗ್ಯದಿಂದ ಮನಸ್ಸು ಹಾಳು, ಪುಣ್ಯಕ್ಷೇತ್ರ ದರ್ಶನ, ಹೂಡಿಕೆಯ ಬಗ್ಗೆ ಅಪನಂಬಿಕೆ ಉಂಟಾಗಬಹುದು. ಈ ದಿನದ ಶುಭಾಶುಭ ಕಾಲಗಳು: ರಾಹು ಕಾಲ 09:28–11:01, ಯಮಘಂಡ ಕಾಲ 14:06–15:39, ಗುಳಿಕ ಕಾಲ 06:22–07:55. ಈ ದಿನದಂದು ಯಾವ ರಾಶಿಯವರಿಗೆ ಯಾವ ಫಲ ಸಿಗಲಿದೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ

ADVERTISEMENT
ADVERTISEMENT

ನಿಮ್ಮ ಅನೇಕ ವರ್ಷಗಳ ಕಾರ್ಯಕ್ಕೆ ಜಯ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುವುದು. ಸ್ವಾರ್ಥಿಗಳ ಸಹವಾಸದಿಂದ ದೂರವಿರಿ. ಕೆಲವರು ನಿಮ್ಮನ್ನು ಬಳಸಿಕೊಂಡು ಕೈಬಿಡಬಹುದು. ಮಕ್ಕಳ ಚಲನವಲನದ ಬಗ್ಗೆ ಗಮನವಿಡಿ. ಮನೆಯ ಸ್ಥಳಾಂತರ ಅಥವಾ ಗುರಿಯ ಸಾಧನೆಯ ಸಂಭ್ರಮವಿರಲಿದೆ. ಆಕಸ್ಮಿಕ ಲಾಭದಿಂದ ಖುಷಿಯಾಗುವಿರಿ.

ವೃಷಭ ರಾಶಿ

ನಿಮ್ಮ ಒಳ್ಳೆಯ ಗುಣಗಳಿಂದ ಎಲ್ಲರೂ ಆಕರ್ಷಿತರಾಗುವರು. ಪುಣ್ಯಸ್ಥಳ ದರ್ಶನದಿಂದ ಮನಶ್ಶಾಂತಿ ಸಿಗಲಿದೆ. ವ್ಯಾಪಾರದಲ್ಲಿ ಸಹಭಾಗಿಯೊಂದಿಗೆ ಚರ್ಚಿಸಿ ಮುಂದುವರಿಯಿರಿ. ಅಪರಿಚಿತ ಕ್ಷೇತ್ರದಲ್ಲಿ ಜಾಗರೂಕರಾಗಿರಿ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಒಳ್ಳೆಯ ಅವಕಾಶ ಸಿಗಬಹುದು.

ಮಿಥುನ ರಾಶಿ

ನಿಮ್ಮ ಶ್ರಮಕ್ಕೆ ಯೋಗ್ಯ ಫಲ ಸಿಗದೇ ಬೇಸರವಾಗಬಹುದು. ಕೃಷಿಗೆ ಸಂಬಂಧಪಟ್ಟ ಕೆಲಸಗಳಲ್ಲಿ ಆಸಕ್ತಿಯಿರಲಿದೆ. ಸ್ವಂತ ವಾಹನದಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಿ. ಹಿರಿಯರ ಸಲಹೆಯಿಂದ ಯೋಜನೆಗಳು ಆರಂಭವಾಗಬಹುದು. ಪುಣ್ಯಕ್ಷೇತ್ರ ದರ್ಶನ ಮಾಡಿ.

ಕರ್ಕಾಟಕ ರಾಶಿ

ಸಾಲದ ಬಾಧೆಯಿಂದ ಕಿರಿಕಿರಿಯಾಗಬಹುದು. ಹಣಕಾಸಿನ ವಿಚಾರದಲ್ಲಿ ವಂಚನೆಯಿಂದ ಎಚ್ಚರಿಕೆಯಿರಲಿ. ಅಧ್ಯಾತ್ಮದಲ್ಲಿ ಒಲವು ಮೂಡಬಹುದು. ಕ್ರಿಯಾಶೀಲತೆಯ ಕೊರತೆಯಿಂದ ಮನಸ್ಸಿಗೆ ಚಿಂತೆಯಾಗಬಹುದು. ನೂತನ ವಸ್ತುಗಳಿಂದ ಸಂತೋಷ ಸಿಗಲಿದೆ.

ಸಿಂಹ ರಾಶಿ

ನೀರಿನ ವಿಚಾರದಲ್ಲಿ ಎಚ್ಚರಿಕೆಯಿರಲಿ. ದೊಡ್ಡ ಸಮಾರಂಭದಲ್ಲಿ ಭಾಗಿಯಾಗುವಿರಿ. ವಿದೇಶದ ಸಹಕಾರದಿಂದ ಉದ್ಯಮಕ್ಕೆ ಉತ್ಸಾಹ ಬರಲಿದೆ. ಸಹೋದ್ಯೋಗಿಗಳ ಬೆಂಬಲ ಸಿಗುವುದು. ಪರೋಪಕಾರ ಗುಣ ಹೆಚ್ಚಾಗಲಿದೆ.

ಕನ್ಯಾ ರಾಶಿ

ಕಾನೂನು ವಿಷಯದಲ್ಲಿ ಜಯ ಸಿಗಬಹುದು. ಆರ್ಥಿಕ ವಿಷಯದಲ್ಲಿ ಗೊಂದಲವಿರಲಿದೆ. ಸಂಗಾತಿಯೊಂದಿಗೆ ಚಿಕ್ಕ ಭಿನ್ನಾಭಿಪ್ರಾಯ ಉಂಟಾಗಬಹುದು. ಹಿರಿಯರ ಮಾರ್ಗದರ್ಶನ ಪಡೆಯಿರಿ. ಆರ್ಥಿಕತೆಯನ್ನು ಗೌಪ್ಯವಾಗಿಡಿ.

ತುಲಾ ರಾಶಿ

ಮಧ್ಯವರ್ತಿಗಳಿಗೆ ಆರ್ಥಿಕ ತೊಂದರೆ ಎದುರಾಗಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗುವ ಇಚ್ಛೆಯಿರುವುದು. ನ್ಯಾಯಾಲಯದಿಂದ ಶುಭ ಸುದ್ದಿ ಸಿಗಬಹುದು. ಭವಿಷ್ಯದ ಆರ್ಥಿಕ ಯೋಜನೆಗೆ ಚಿಂತನೆ ನಡೆಸುವಿರಿ.

ವೃಶ್ಚಿಕ ರಾಶಿ

ಮಾತಿನಿಂದ ಕಟ್ಟಿಹಾಕುವ ಸಾಧ್ಯತೆಯಿದೆ. ಸಹನೆಯಿಂದ ಕಾರ್ಯಗಳನ್ನು ನಿರ್ವಹಿಸಿ. ಸ್ನೇಹಿತರಿಂದ ಒಳ್ಳೆಯ ಕೆಲಸದ ಸಲಹೆ ಸಿಗಬಹುದು. ವಿದೇಶ ಪ್ರವಾಸಕ್ಕೆ ದಾಖಲೆಗಳ ಕೊರತೆಯಿಂದ ತೊಂದರೆಯಾಗಬಹುದು.

ಧನು ರಾಶಿ

ಅತಿಯಾದ ಚಿಂತೆಯಿಂದ ಸಮಸ್ಯೆಯಾಗಬಹುದು. ಕುಟುಂಬದ ಕಾಳಜಿಯೇ ಮುಂದುವರಿಯಲಿದೆ. ನಾಯಕತ್ವ ಕೌಶಲ್ಯದಿಂದ ಸಾರ್ವಜನಿಕ ಮನ್ನಣೆ ಸಿಗಲಿದೆ. ಉದ್ಯಮದ ವಿಸ್ತರಣೆಗೆ ಯಶಸ್ಸಿರುವುದು.

ಮಕರ ರಾಶಿ

ಹೂಡಿಕೆಯನ್ನು ಗೌಪ್ಯವಾಗಿಡಿ. ಸ್ಪರ್ಧೆಯಲ್ಲಿ ಜಯ ಸಿಗಲಿದೆ. ಧರ್ಮ ಕಾರ್ಯಗಳಲ್ಲಿ ಮುನ್ನಡೆಯಿರಿ. ಕೃಷಿಯಲ್ಲಿ ಲಾಭಕ್ಕಾಗಿ ಪ್ರಯತ್ನಿಸುವಿರಿ ಆದಾಯಕ್ಕೆ ತಕ್ಕಂತೆ ಖರ್ಚಿರಲಿದೆ.

ಕುಂಭ ರಾಶಿ

ನಂಬಿಕೆಯಿಂದ ಕೆಲಸ ಮಾಡಿ. ಹಣದ ತೊಂದರೆಯಿಂದ ಚಿಂತೆಯಾಗಬಹುದು. ಉತ್ತಮ ಅಭ್ಯಾಸ ಆರಂಭಕ್ಕೆ ಒಳ್ಳೆಯ ದಿನ. ಶುಭ ಕಾರ್ಯಗಳಿಗೆ ಹಣ ಖರ್ಚಾಗಲಿದೆ.

ಮೀನ ರಾಶಿ

ನಿರೀಕ್ಷಿತ ವಾರ್ತೆಯಿಂದ ಸಂತೋಷವಿರುವುದು. ಕೆಲಸಗಳನ್ನು ಮುಂದೂಡುವ ಮನಸ್ಥಿತಿಯಿಂದ ದೂರವಿರಿ. ಸ್ನೇಹಿತರ ಬೆಂಬಲ ಸಿಗಲಿದೆ. ವಿದೇಶ ಪ್ರವಾಸದ ಆಸೆಯಿರುವುದು.

Exit mobile version