ಗ್ರಹಗಳ ಸ್ಥಿತಿ ಮತ್ತು ಚಲನೆ ವಿವಿಧ ರಾಶಿಗಳ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಈ ದಿನ ವಿಶೇಷವಾಗಿ ಗುರು ಮತ್ತು ಶುಕ್ರ ಗ್ರಹಗಳ ಸಂಯೋಗವು ಸಾಮರಸ್ಯ ಮತ್ತು ಆರ್ಥಿಕ ಸುಧಾರಣೆಗೆ ಅನುಕೂಲಕರವಾಗಿದೆ. ಪ್ರತಿ ರಾಶಿಯವರಿಗೂ ಇಂದಿನ ದಿನ ವಿಭಿನ್ನ ಅವಕಾಶಗಳು ಮತ್ತು ಸವಾಲುಗಳನ್ನು ತರಬಹುದು.
ಮೇಷ : ಈ ರಾಶಿಯವರಿಗೆ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಹೊಸ ಯೋಜನೆಗಳು ಯಶಸ್ವಿಯಾಗಬಹುದು.
ವೃಷಭ : ಕುಟುಂಬ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಆಭರಣ ಖರೀದಿಸುವ ಸಾಧ್ಯತೆ ಇದೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಆರೋಗ್ಯದಲ್ಲಿ ಜಾಗರೂಕತೆ ಅಗತ್ಯ
ಮಿಥುನ : ಈ ರಾಶಿಯವರಿಗೆ ಪ್ರವಾಸದ ಅವಕಾಶ ಸಿಗಲಿದೆ. ಆರ್ಥಿಕ ಹೂಡಿಕೆಗಳಿಗೆ ಸೂಚನೆಗಳನ್ನು ಪಾಲಿಸಿ. ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಇದರಿಂದ ಮನಸ್ಸು ಸಮಾಧಾನದಿಂದಿರುತ್ತದೆ.
ಕರ್ಕಾಟಕ : ಈ ರಾಶಿಯವರು ಆರೋಗ್ಯದ ಕಡೆ ಗಮನ ಕೊಡಿ. ವ್ಯವಹಾರದಲ್ಲಿ ಶತ್ರುಗಳಿಂದ ತೊಂದರೆಯಾಗಲಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯ. ಹಣಕಾಸಿನ ಯೋಜನೆಗಳು ಯಶಸ್ವಿಯಾಗಲಿದೆ.
ಸಿಂಹ : ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಸ್ಥಿರ ಆಸ್ತಿಗಳನ್ನು ಖರೀದಿಸುವ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ಆದಾಯವು ಹೆಚ್ಚಾಗುತ್ತದೆ. ಆರ್ಥಿಕ ಪ್ರಗತಿ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ.
ಕನ್ಯಾ : ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಉತ್ತಮ ಸ್ಥಾನಕ್ಕೇರಲು ಶುಭ ಸಮಯ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ. ಹಳೆಯ ಸಮಸ್ಯೆಗಳು ಬಗೆಹರಿಯಲಿದೆ.
ತುಲಾ : ಈ ರಾಶಿಯವರು ಹಣಕಾಸು ನಿರ್ವಹಣೆಯಲ್ಲಿ ಜಾಗರೂಕರಾಗಿರಿ. ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಎಚ್ಚರಿಕೆಯಿಂದಿರಿ. ಕಠಿಣ ಪರಿಶ್ರಮದಿಂದ ನಿಮಗೆ ಯಶಸ್ಸು ತರಲಿದೆ.
ವೃಶ್ಚಿಕ : ಈ ರಾಶಿಯವರಿಗೆ ಹೊಸ ಸ್ನೇಹಿತರು ಪರಿಚಯವಾಗಬಹುದು. ವ್ಯಾಪಾರದಲ್ಲಿ ಶತ್ರುಗಳ ಕಾಟ ಇರಲಿದೆ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದೊಂದಿಗೆ ಸಮಯ ಕಳೆಯಿರಿ.
ಧನು : ಈ ರಾಶಿಯವರಿಗೆ ದೂರ ಪ್ರಯಾಣ ಮಾಡುವ ಅವಕಾಶಗಳು ಸಿಗಬಹುದು. ಕೌಟುಂಬಿಕ ಕಲಹ ಬೀದಿಗೆ ಬರುವ ಸಾಧ್ಯತೆ ಇದೆ. ಶಿಕ್ಷಣದಲ್ಲಿ ಪ್ರಗತಿ ಸಾಧಿಸುವಿರಿ.
ಮಕರ : ವಿವಾಹಿತ ದಂಪತಿಗಳು ಸಮಯ ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ.
ಕುಂಭ : ಈ ರಾಶಿಯವರು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಯೋಗ-ಧ್ಯಾನ ಮಾಡುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ. ಯಾವುದೇ ಹೂಡಿಕೆಗಳಲ್ಲಿ ಜಾಗರೂಕರಾಗಿರಿ.
ಮೀನ : ಈ ರಾಶಿಯವರಿಗೆ ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ. ಆರೋಗ್ಯದ ಕಡೆ ಗಮನ ಕೊಡಿ