2025ರ ಮಾರ್ಚ್ 1ರಂದು ಈ ರಾಶಿಗಳಿಗೆ ವಿಶೇಷ ಸಂಧಾನಗಳನ್ನು ತಂದೊಡ್ಡುತ್ತದೆ. ಈ ದಿನದ ಗ್ರಹಗಳ ಸ್ಥಿತಿ, ಚಂದ್ರನ ಚಲನೆ, ಮತ್ತು ನಕ್ಷತ್ರಗಳ ಸಂಯೋಜನೆಯು ಕೆಲವು ರಾಶಿಯವರಿಗೆ ಅದೃಷ್ಟವನ್ನೂ, ಮತ್ತೆ ಕೆಲವರಿಗೆ ಸವಾಲುಗಳನ್ನೂ ನೀಡಬಹುದು.
ನಿತ್ಯ ಪಂಚಾಗ : ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಿದ್ಧ, ಕರಣ : ಬವ ಸೂರ್ಯೋದಯ–06–50 am, ಸೂರ್ಯಾಸ್ತ–06–39 pm, ಇಂದಿನ ಶುಭಾಶುಭಕಾಲ : ರಾಹು ಕಾಲ 09:48–11:16, ಯಮಘಂಡ ಕಾಲ 14:14–15:42, ಗುಳಿಕ ಕಾಲ 06:51–08:19.
ಎಲ್ಲಾ 12 ರಾಶಿಗಳ ಸಂಕ್ಷಿಪ್ತ ಫಲಾಫಲ:
ಸಿಂಹ ರಾಶಿ:
ಹಿರಿಯರ ಮಾರ್ಗದರ್ಶನ ಪಡೆದು ಸರಿಯಾದ ಹಾದಿಯಲ್ಲಿ ಸಾಗಿ. ಜಯ ನಿಮ್ಮದೇ ಆಗಲಿದೆ.ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಹಣಕಾಸಿನ ಲಾಭದ ಸಾಧ್ಯತೆ.
ಕನ್ಯಾ ರಾಶಿ:
ಸುತ್ತಲಿನ ಜನರು ನಿಮ್ಮ ಮೇಲೆ ಮೇಲೆ ವಿಶೇಷ ನಂಬಿಕೆ ಇಟ್ಟಿದ್ದು, ಪ್ರಾಮಾಣಿಕವಾಗಿರಿ.ಸಂಬಂಧಗಳಲ್ಲಿ ಸಾಮರಸ್ಯ ಮತ್ತು ಕುಟುಂಬದ ಬೆಂಬಲ.
ಧನು ರಾಶಿ:
ಹೊಸ ಮನೆ ಖರೀದಿ ಮಾಡುವ ಹಲವು ವರ್ಷಗಳ ಕನಸು ನನಸಾಗಲಿದೆ. ಶುಭದಿನ.ಪ್ರಯಾಣ ಅಥವಾ ಶಿಕ್ಷಣದಲ್ಲಿ ಯಶಸ್ಸಿನ ಸೂಚನೆ.
ವೃಷಭ ರಾಶಿ:
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಜೇಬಿನಲ್ಲೇ ಹಣವಿದ್ದರೂ ಅನುಭವಿಸಲಾರಿರಿ.ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ವೃಶ್ಚಿಕ ರಾಶಿ:
ನಿಮ್ಮ ತಪ್ಪಿಲ್ಲದಿದ್ದರೂ ಅನಿವಾರ್ಯ ಕಾರಣಗಳಿಂದ ಅಪವಾದ ಎದುರಾಗಲಿದೆ.ಹಣಕಾಸಿನ ನಿರ್ಧಾರಗಳಲ್ಲಿ ಸಾವಧಾನತೆ ಅಗತ್ಯ.
ಮೀನ ರಾಶಿ:
ದಿಢೀರ್ ಧನಲಾಭದಿಂದ ಹಳೆಯ ಸಾಲಗಳು ತೀರಲಿದ್ದು, ಹೊಸ ಯೋಜನೆ, ರೂಪಿಸುವಿರಿ.ಸಾಮಾಜಿಕ ವಿವಾದಗಳಿಂದ ದೂರವಿರಿ.
ಮೇಷ ರಾಶಿ:
ಅತಿಯಾದ ಆಹಾರ ಸೇವನೆ ಯಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ.ಸಣ್ಣ ತೊಂದರೆಗಳು, ಆದರೆ ಕುಟುಂಬದ ಬೆಂಬಲ.
ಮಿಥುನ ರಾಶಿ:
ಮಕ್ಕಳ ಆರೋಗ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಿ. ಸಾಂಕ್ರಾಮಿಕ ರೋಗ ಸಾಧ್ಯತೆ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು.
ಕರ್ಕಾಟಕ ರಾಶಿ:
ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಅನವಶ್ಯಕ ವಿಚಾರಗಳನ್ನು ಮೈಮೇಲೆ ಎಳೆದುಕೊಳ್ಳದಿರಿ.ಭಾವನಾತ್ಮಕ ಸ್ಥಿರತೆ ಅಗತ್ಯ.
ತುಲಾ ರಾಶಿ:
ಅಮೂಲ್ಯ ವಸ್ತುವೊಂದು ಕಳೆದುಹೊಗಲಿದ್ದು, ನಿಮ್ಮ ಮೇಲೆ ಆರೋಪ ಬರಲಿದೆ.ಹೊಸ ಯೋಜನೆಗಳಿಗೆ ಸೂಕ್ತ ಸಮಯ.
ಮಕರ ರಾಶಿ:
ಆತ್ಮೀಯರ ಅಗಲುವಿಕೆಯಿಂದ ಮಾನಸಿಕ ಆಘಾತಕ್ಕೆ ಒಳಗಾಗುವಿರಿ. ಎಚ್ಚರ.ಸಹಕರಿಸುವವರೊಂದಿಗೆ ಸಂವಾದದಲ್ಲಿ ಸಮತೋಲನ.
ಕುಂಭ ರಾಶಿ:
ಪರಿಸ್ಥಿತಿ ಹೇಗೇ ಬಂದರೂ ಎದುರಿಸುವ ಸ್ಥೆರ್ಯ ಬೆಳೆಸಿಕೊಳ್ಳಿ. ಶುಭದಿನ.ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ.
ಈ ದಿನದಲ್ಲಿ ಗ್ರಹಗಳ ಪ್ರಭಾವವು ಪ್ರತಿಯೊಬ್ಬರಿಗೂ ವಿಭಿನ್ನವಾಗಿ ಕಾಣಬಹುದು. ಧ್ಯಾನ, ಯೋಜನಾಬದ್ಧತೆ, ಮತ್ತು ಸಕಾರಾತ್ಮಕತೆಯಿಂದ ಯಾವುದೇ ಸನ್ನಿವೇಶವನ್ನು ನಿಭಾಯಿಸಬಹುದು.