ಮೇಷ: ಹೂಡಿಕೆಗೆ ಸಮಯ ತುಂಬಾ ಅನುಕೂಲಕರವಾಗಿದೆ . ಮನೋರಂಜನೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಯವನ್ನು ಕಳೆಯಲಾಗುತ್ತದೆ. ಸೋಮಾರಿತನದಿಂದಾಗಿ, ನೀವು ಯಾವುದೇ ಕೆಲಸವನ್ನು ನಿರ್ಲಕ್ಷಿಸಬಹುದು, ಅದು ನಿಮ್ಮ ಮೇಲೆ ಪರಿಣಾಮ ಬೀರಬಹುದು. ನಿಮ್ಮೊಳಗೆ ಹೇಳಿಕೊಳ್ಳಲಾಗದ ಭಯವು ಕಾಣಿಸುವುದು. ಅತಿಯಾದ ಸುಖದಿಂದ ನಿಮ್ಮ ಕ್ರಿಯಾಶೀಲತೆ ನಿಂತುಹೋಗುವುದು. ದುಷ್ಟಶಕ್ತಿಯ ಬಗ್ಗೆ ನಮಗೆ ಸಂದೇಹ ಬರಬಹುದು. ಉಪಕಾರಕ್ಕೆ ಕೃತಜ್ಞತೆಯಾದರೂ ಇರಲಿ. ವಾಹನ ಖರೀದಿಯಲ್ಲಿ ಗೊಂದಲ ಉಂಟಾಗಬಹುದು.
ವೃಷಭ:ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ನಿಮ್ಮಿಂದ ಆಗದ ಕೆಲಸಕ್ಕೆ ಸಮಯವನ್ನು ಕೊಡುವುದು ಬೇಡ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು. ಇಂದು ಬಂಧುಗಳ ಮನೆಯಲ್ಲಿ ವಾಸಮಾಡಬೇಕಾಗಬಹುದು. ಈ ಬಾರಿ ವೃತ್ತಿ ಮತ್ತು ಕೆಲಸದ ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಮಾಡಲು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಕುಟುಂಬ ವಾತಾವರಣ ಸಂತೋಷದಿಂದ ಕೂಡಿರುತ್ತದೆ.
ಮಿಥುನ ರಾಶಿ: ನಿಮ್ಮ ವಸ್ತುಗಳು ಕಾಣಿಸದೇ ನೀವು ಆತಂಕಪಡುವಿರಿ. ಸಿಕ್ಕ ಅವಕಾಶವನ್ನು ನೀವೇ ಬಿಟ್ಟುಕೊಂಡು ನಿಮ್ಮನ್ನೇ ಹಳಿದುಕೊಳ್ಳುವಿರಿ. ಅನ್ಯರ ಕುರಿತಾಗಿ ಸಂತಾಪವನ್ನು ವ್ಯಕ್ತಪಡಿಸುವುದು ವ್ಯರ್ಥವಾಗಬಹುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ನೀವು ಮನಸ್ಸಿನ ಶಾಂತಿ ಮತ್ತು ನಿಮ್ಮೊಳಗೆ ಪೂರ್ಣ ಶಕ್ತಿಯನ್ನು ಅನುಭವಿಸುವಿರಿ. ನಿಮ್ಮ ನಿಕಟ ಸ್ನೇಹಿತರು ಮತ್ತು ಸಂಪರ್ಕಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ಕರ್ಕಾಟಕ ರಾಶಿ: ಅಧಿಕಾರಿಗಳ ನಡವೆ ಕಲಹವಾಗಬಹುದು. ಉದ್ವೇಗದಿಂದ ಏನನ್ನಾದರೂ ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಹಳೆಯ ಸ್ನೇಹವನ್ನು ಮರಳಿ ಪಡೆಯುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು.ಇದು ನಿಮಗೆ ಮುಂದೆ ಹೋಗಲು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವಿರಲಿ. ಪತಿ ಪತ್ನಿಯರ ಬಾಂಧವ್ಯ ಮಧುರವಾಗಿರಬಹುದು.
ಸಿಂಹ ರಾಶಿ:ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ವಿದೇಶ ಪ್ರಯಾಣದಿಂದ ಆಯಾಸ ಹೆಚ್ಚು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ.ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲರಾಗುತ್ತೀರಿ. ಒತ್ತಡದ ಬದಲು, ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ಅನಗತ್ಯ ಪ್ರಯಾಣವನ್ನು ತಪ್ಪಿಸಿ.
ಕನ್ಯಾ ರಾಶಿ: ವಿಶ್ವಾಸವನ್ನು ಗಳಿಸದೇ ನೀವು ವ್ಯವಹಾರದಲ್ಲಿ ಯಶಸ್ಸು ಸಾಧ್ಯವಾಗದು. ವಿದೇಶ ಪ್ರಯಾಣದಿಂದ ಆಯಾಸ ಹೆಚ್ಚು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಇಲ್ಲವೇ ಸುಮ್ಮನೆ ಇರುವಿರಿ. ಅಮೂಲ್ಯ ವಸ್ತುಗಳನ್ನು ಪಡೆದುಕೊಳ್ಳುವ ಹಂಬಲವಿರುವುದು. ವೈವಾಹಿಕ ಜೀವನ ಮತ್ತು ಪ್ರೀತಿ ಎರಡೂ ಸುಖಮಯವಾಗಿರುತ್ತದೆ.
ತುಲಾ ರಾಶಿ: ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು.ವಿವಾಹಿತರು ಕೆಲವು ರೀತಿಯ ಭಿನ್ನಾಭಿಪ್ರಾಯವನ್ನು ಹೊಂದಿರಬಹುದು. ಈ ಸಮಯದಲ್ಲಿ ಪರಿಸ್ಥಿತಿಗಳನ್ನು ಪರಿಹರಿಸಲು ತಾಳ್ಮೆ ಮತ್ತು ಸಂಯಮವನ್ನು ಬಳಸಿ, ಇಲ್ಲದಿದ್ದರೆ ಹಾನಿಗೊಳಗಾಗಬಹುದು.
ವೃಶ್ಚಿಕ ರಾಶಿ: ಮೇಲಧಿಕಾರಿಗಳ ಮಾತುಗಳಿಂದ ನಿಮಗೆ ಅವಮಾನವಾಗಿದ್ದು ಮುಂದೇನು ಎಂಬುದರ ಬಗ್ಗೆ ನಿಮಗೆ ಚಿಂತೆ ಬರಬಹುದು. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಮನೆಯ ವಾತಾವರಣವು ಆಹ್ಲಾದಕರ ಮತ್ತು ಶಾಂತಿಯುತವಾಗಿರಬಹುದು. ದೈಹಿಕ ಮತ್ತು ಮಾನಸಿಕ ಆಯಾಸ ಉಂಟಾಗಬಹುದು ಅತಿಯಾದ ಕೆಲಸದ ಕಾರಣದಿಂದಾಗಿ.
ಧನು ರಾಶಿ: ಇಂದು ಆಪ್ತರೊಂದಿಗೆ ಸಂತೋಷದ ಸಮಯ ಇರುತ್ತದೆ . ಯಾವುದೇ ವಿಶೇಷ ವಿಷಯದ ಬಗ್ಗೆ ಪ್ರಯೋಜನಕಾರಿ ಚರ್ಚೆಗಳು ಸಹ ನಡೆಯುತ್ತವೆ. ಮಾನಸಿಕ ಶಾಂತಿ ಕಾಪಾಡುವುದು ಮುಖ್ಯ. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಸಂಗಾತಿಯ ವಿರುದ್ಧ ಸಿಟ್ಟಾಗಬಹುದು. ಮಹಿಳೆಯರಿಗೆ ನಿಮ್ಮಿಂದ ಹೆಚ್ಚಿನ ಸಹಕಾರವು ಸಿಕ್ಕಬಹುದು. ಉನ್ನತ ಅಧಿಕಾರದ ಆಸೆಯನ್ನು ಸಹೋದ್ಯೋಗಿಗಳು ನಿಮಗೆ ತಿಳಿಸಬಹುದು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗುವುದು.
ಮಕರ ರಾಶಿ: ಹಿತಶತ್ರುಗಳು ನಿಮ್ಮ ಅವನತಿಯನ್ನು ನಿರೀಕ್ಷಿಸಬಹುದು. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು.ಕೆಲವೊಮ್ಮೆ ನಿಮ್ಮ ಅತಿಯಾದ ಆತ್ಮವಿಶ್ವಾಸ ಮತ್ತು ದುರಹಂಕಾರ ನಿಮ್ಮನ್ನು ದಾರಿ ತಪ್ಪಿಸಬಹುದು. ಹಿರಿಯರ ಸಲಹೆ ಮತ್ತು ಮಾರ್ಗದರ್ಶನದಂತೆ ನಡೆದುಕೊಳ್ಳಿ. ಬಹುತೇಕ ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯಗಳು ಸುಗಮವಾಗಿ ಸಾಗುತ್ತವೆ.
ಕುಂಭ ರಾಶಿ: ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸಬಹುದು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ. ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇರುವುದು. ನಕಾರಾತ್ಮಕ ಚಟುವಟಿಕೆಯ ಜನರಿಂದ ದೂರವಿರುವುದು ಒಳ್ಳೆಯದು. ಅವರು ನಿಮ್ಮನ್ನು ವಿಚಲಿತಗೊಳಿಸಬಹುದು.
ಮೀನ ರಾಶಿ: ಉದ್ಯೋಗದಲ್ಲಿ ಬರುವ ಮನಸ್ತಾಪವನ್ನು ನಿಮ್ಮೊಳಗೇ ಇಟ್ಟುಕೊಂಡು ಮುಂದುವರಿಯುವಿರಿ. ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಗೊಂದಲ ಬರಬಹುದು. ನಿಮ್ಮ ಕಾರ್ಯಗಳಿಗೆ ಹೊಸ ಆಕಾರವನ್ನು ನೀಡಲು ಹೆಚ್ಚು ಸೃಜನಶೀಲ ವಿಧಾನವನ್ನು ಅಳವಡಿಸಿಕೊಳ್ಳಿ. ನಿಮ್ಮ ಜೀವನಶೈಲಿಯನ್ನು ಸುಧಾರಿಸುವುದು ಯಶಸ್ಸನ್ನು ತರುತ್ತದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬಹುದು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ:https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc