2025ರ ಐಸಿಸಿ ಚಾಂಪಿಯನ್ ಟ್ರೋಫಿ ಸರಣಿಯು ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯುತ್ತಿದ್ದು, ಭಾರತವು ತನ್ನ ಅಗ್ರ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಗೈರಿನೊಂದಿಗೆ ಎದುರಾಳಿಗಳ ವಿರುದ್ಧ ಸೆಣಸಾಡಲು ಕಣಕ್ಕೆ ಇಳಿಯಲಿದೆ.
ಬೆನ್ನು ನೋವಿನ ಕಾರಣದಿಂದಾಗಿ ಬೂಮ್ರಾ ಟೂರ್ನಮೆಂಟ್ ನಿಂದ ಹೊರಗುಳಿದಿದ್ದಾರೆ, ಇದು ಭಾರತ ತಂಡದ ಬೌಲಿಂಗ್ ಘಟಕಕ್ಕೆ ಬಹುದೊಡ್ಡ ನಷ್ಟ ಎಂದು ಮಾಜಿ ಆಟಗಾರರು ಮತ್ತು ಕೋಚ್ ಈ ಮೊದಲೇ ಹೇಳಿಕೆ ನೀಡಿದ್ದಾರೆ.
ಎದುರಾಳಿಗಳಿಗೆ ಸಿಂಹ ಸ್ವಪ್ನವಾಗಿದ್ದ ಬುಮ್ರಾ , ಟೂರ್ನಿಯಲ್ಲಿ ಆಟ ಆಡದಿರುವುದರಿಂದ ಇತರ ತಂಡಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.
ಜಸ್ಪ್ರೀತ್ ಬೂಮ್ರ ಬಾರ್ಡರ್ ಗವಾಸ್ಕರ್ ಟ್ರೋಫಿ, ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ನಿರಂತರ ಬೌಲಿಂಗ್ ಮಾಡಿದ ನಂತರ ಬೆನ್ನು ನೋವಿನ ಸಮಸ್ಯೆಗೆ ಗುರಿಯಾಗಿದ್ದರೆ. ಅವರ ನೋವಿನ ತೀವ್ರತೆಯನ್ನು ಗಮನಿಸಿದ ಬಿಸಿಸಿಐ, ಅವರಿಗೆ 5 ವಾರಗಳ ವಿಶ್ರಾಂತಿಯನ್ನು ಸೂಚಿಸಿತ್ತು. ಆದರೆ ಚಾಂಪಿಯನ್ ಟ್ರೋಫಿಗೂ ಮುನ್ನ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ ಸಮಿತಿಯು ಅಂತಿಮ ತಂಡದಿಂದ ಜೆಸ್ ಪ್ರೀತ್ ಬೂಮ್ರಾ ಅವರ ಹೆಸರನ್ನು ಹೊರತುಪಡಿಸಿತು.
ಜಸ್ಪ್ರೀತ್ ಬುಮ್ರಾ ಗಾಯಗೊಂಡಿರುವುದರಿಂದ ಅವರ ಜಾಗವನ್ನು 23 ವರ್ಷದ ಯುವ ಆಟಗಾರ ಹರ್ಷಿತ್ ರಾಣಾ ತುಂಬುವ ಆಕಾಂಕ್ಷೆಯನ್ನು ಭಾರತ ತಂಡವು ಒಂದಿದೆ.
ಭಾರತ ತಂಡದ ಹೊಸ ಆಟಗಾರರು, ವೇಗಿ ಬೌಲರ್ ಹರ್ಷಿತ್ ರಾಣಾ, ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಾವಳಿಗಳಲ್ಲಿ ತನ್ನ ಮೊದಲ ಪ್ರದರ್ಶನವನ್ನು ನೀಡಿದ್ದು, ನಾಲ್ಕು ಪಂದ್ಯದಲ್ಲಿ 9 ವಿಕೆಟ್ಸ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು.
ಒಟ್ಟಾರೆ ಉತ್ತಮ ಬೌಲರ್ ಜಸ್ಪ್ರೀತ್ ಬುಮ್ರಾ ಗೈರುಹಾಜರಿ ಭಾರತ ತಂಡಕ್ಕೆ ಒಂದಿಷ್ಟು ಸಾವಲೆನಿಸಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಪಿಯಲ್ಲಿ ವೇಗದ ಬೌಲರ್ ಬೂಮ್ರಾ ಗೈರು!

ADVERTISEMENT
ADVERTISEMENT