ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮಧ್ಯೆ ಸ್ನೇಹ ಸಂಬಂಧಕ್ಕೆ ಅನುಷ್ಕಾ ಶರ್ಮಾ ಅಪ್ಪುಗೆಯೇ ಉತ್ತರ..!

Befunky collage 2025 03 10t131908.092

ಅವರಿಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ಲ. ಅವನನ್ನ ತುಳಿಯೋಕೆ ಇವನು.. ಇವನನ್ನ ತುಳಿಯೋಕೆ ಅವನೂ ಇನ್ನಿಲ್ಲದಂತೆ ಟ್ರೈ ಮಾಡ್ತಾರೆ. ಇಂತಾ ಕಥೆ ಇರೋದು ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ. ಆದರೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಮ್ಯಾಚ್ ವಿನ್ ಆದ ನಂತರ ನಡೆದಿರೋ ಕೆಲವು ಘಟನೆಗಳು, ಕಣ್ಣಿಗೆ ಕಂಡ ದೃಶ್ಯಗಳು ಇವುಗಳಿಗೆಲ್ಲ ಫುಲ್ ಸ್ಟಾಪ್ ಇಟ್ಟಿವೆ.

ರವೀಂದ್ರ ಜಡೇಜಾ ಫೋರ್ ಹೊಡೆದು ಮ್ಯಾಚ್ ವಿನ್ ಆಗುತ್ತಿದ್ದಂತೆಯೇ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕೊಹ್ಲಿ, ರೋಹಿತ್ ಶರ್ಮಾ ಅವರನ್ನ ಅಪ್ಪಿಕೊಂಡು ಖುಷಿ ಪಟ್ಟಿದ್ಧಾರೆ.
ವಿನ್ನರ್ ಆಗುತ್ತಿದ್ದಂತೆ ಫೀಲ್ಡಿಗೆ ಕುಣಿದಾಡುತ್ತಾ ಹೋದ ರೋಹಿತ್ ಮೊದಲ ವಿಕೆಟ್ ಎತ್ತಿಟ್ಟುಕೊಂಡ್ರೆ, ಇನ್ನೊಂದು ವಿಕೆಟ್ ಕಿತ್ತುಕೊಂಡ ಕೊಹ್ಲಿ, ರೋಹಿತ್ ಜೊತೆ ದಾಂಡಿಯಾ ಆಡಿದ್ದಾರೆ.

ADVERTISEMENT
ADVERTISEMENT


ಅಷ್ಟೇ ಅಲ್ಲ, ಮ್ಯಾಚ್ ಮುಗಿಯುತ್ತಿದ್ದಂತೆ ರೋಹಿತ್ ಶರ್ಮಾ, ಪತ್ನಿ ರಿತಿಕಾ, ಮಗಳ ಜೊತೆ ಮಾತನಾಡುತ್ತಿದ್ದಾಗ.. ಅಲ್ಲಿಗೆ ಬಂದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ರೋಹಿತ್ ಶರ್ಮಾರನ್ನ ಅಪ್ಪಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ರೋಹಿತ್ ಜೊತೆ ಮಾತನಾಡುತ್ತಿರುವ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ.

ಇನ್ನು ರೋಹಿತ್ ಶರ್ಮಾ, ಮಾತಿನಲ್ಲಿ ಚೋಕ್ ಕೊಡ್ತಾರೆಯೇ ಹೊರತು, ಸ್ಟೈಲ್ ಇಲ್ಲ. ಅವರೊಂಥರಾ ಮೂಡಿ. ಬೌಂಡರಿ, ಸಿಕ್ಸರುಗಳಂತೆಯೇ ಡೈಲಾಗ್ ಮಾತ್ರ ಸಖತ್ತಾಗಿರುತ್ತೆ. ಆದರೆ ಹಾವಭಾವಗಳಲ್ಲಿ ಕೊಹ್ಲಿಯೇ ನಂಬರ್ 1. ಇಲ್ಲೂ ಅಷ್ಟೇ, ಟ್ರೋಫಿ ಜೊತೆ ಶಾಂಪೇನ್ ಸಿಡಿಸುವಾಗ.. ರೋಹಿತ್ ಜೊತೆ ಕೊಹ್ಲಿ ಆಡಿರೋ ತರಲೆ ತಮಾಷೆ ದೃಶ್ಯಗಳು ವೈರಲ್ ಆಗ್ತಿವೆ.
ಇನ್ನು ಮ್ಯಾಚ್ ಮುಗಿದ ಮೇಲೆ ರೋಹಿತ್ ಶರ್ಮಾ ನಾವು ಈಗಲೇ ರಿಟೈರ್ ಆಗ್ತಿಲ್ಲ. ರೂಮರ್ಸ್ ನಂಬಬೇಡಿ ಅಂತಾ ಕ್ಲಿಯರ್ ಆಗಿ ಹೇಳಿದ್ದಾರೆ. ಈ ಮಾತಿನಲ್ಲಿ ನನ್ನ ಎಂದು ಇಲ್ಲ. ನಮ್ಮ ಎಂದು ಇದೆ. ಸದ್ಯಕ್ಕೆ ರೋಹಿತ್ ಶರ್ಮಾ ಅವರನ್ನಷ್ಟೆ ಅಲ್ಲ, ವಿರಾಟ್ ಕೊಹ್ಲಿ ಕೂಡಾ ರಿಟೈರ್ ಆಗಬೇಕು ಅನ್ನೋ ಮಾತು ಕೇಳಿ ಬರ್ತಿರೋ ಹಿನ್ನೆಲೆಯಲ್ಲಿ ಈ ಮಾತು ವೇಯ್ಟೇಜ್ ತಗೊಂಡಿದೆ.


ಆದರೆ ಇಲ್ಲೂ ಕೂಡಾ ಕೊಹ್ಲಿ ಮತ್ತು ರೋಹಿತ್ ನಡುವೆ ಎಲ್ಲ ಓಕೆ, ಅವರ ಹೆಂಡತಿಯರು ಮಾತನಾಡೋದಿಲ್ಲ ಯಾಕೆ ಅನ್ನೋ ಪ್ರಶ್ನೆಗಳೂ ಇವೆ. ಏಕೆಂದರೆ ರೋಹಿತ್ ಅವರನ್ನ ಹತ್ತಿಕ್ಕೆ ಕರೆದು ಅಪ್ಪಿಕೊಂಡು ವಿಷ್ ಮಾಡೋ ಅನುಷ್ಕಾ ಶರ್ಮಾ, ಪಕ್ಕದಲ್ಲೇ ಇರೋ ರಿತಿಕಾ ಸದೇಶ್ ಅವರನ್ನ ಮಾತನಾಡಿಸೋದಿಲ್ಲ. ವಿರಾಟ್ ಕೊಹ್ಲಿ ಕೂಡಾ ರಿತಿಕಾ ಅವರ ಹತ್ತಿರ ಮಾತಾಡೋದಿಲ್ಲ. ಹಾಗಾದರೆ, ವಿರಾಟ್ ಮತ್ತು ರೋಹಿತ್ ಮಧ್ಯೆ ಇರೋ ಪ್ರಾಬ್ಲಂ ರಿತಿಕಾನೇ ಅನ್ನೋವ್ರೂ ಇದ್ದಾರೆ.


ಅದಕ್ಕೆ ಇನ್ನೊಂದಿಷ್ಟು ಜನ ಕೊಟ್ಟಿರೋ ಕೌಂಟರ್ ಸಖತ್ತಾಗಿದೆ. ಏನೆಂದರೆ, ನೀವು ರೋಹಿತ್ ಶರ್ಮಾ ಆಟ ನೋಡಿ, ಕೊಹ್ಲಿ ಆಟ ನೋಡಿ, ಎಂಜಾಯ್ ಮಾಡಿ. ಗೆದ್ದಾಗ ಭಾರತ್ ಮಾತಾಕಿ ಜೈ ಅನ್ನಿ. ಅದು ಬಿಟ್ಟು.. ಅವರ ಹೆಂಡತಿಯರು ಮಾತಾಡ್ತಾರೋ.. ಇಲ್ವೋ.. ಅದನ್ನೆಲ್ಲ ಕಟ್ಟಿಕೊಂಡು ನಿಮಗೇನು ಅನ್ನೋವ್ರೂ ಇದ್ಧಾರೆ. ಹೌದಲ್ವಾ..?

Exit mobile version