ಭಾರತ ಚಾಂಪಿಯನ್ನರ ಚಾಂಪಿಯನ್ ಆಗಿದೆ. ವಿಶ್ವಕಪ್ ಅಡಿದ ಅಗ್ರ 8 ತಂಡಗಳು ಆಡುಗ ಮಿನಿ ವಿಶ್ವಕಪ್ ಚಾಂಪಿಯನ್ಸ್ ಟ್ರೋಫಿಯನ್ನ ಭಾರತ ಗೆದ್ದುಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಹೊಸ ಇತಿಹಾಸವನ್ನೇನೋ ಬರೆದಿದೆ.
ಈಗ ಕ್ರಿಕೆಟ್ ಮ್ಯಾಚ್ ಅಂದ್ರೆ 11 ಜನ ಆಡಬೇಕು. ಆದರೆ ತಂಡದಲ್ಲಿಒಟ್ಟು 15 ಜನ ಇರ್ತಾರೆ. ಉಳಿದವರು ಏನ್ ಮಾಡ್ತಾರೆ.. ಏನೂ ಮಾಡಲ್ಲ. ಆದರೆ ತಂಡ ಗೆದ್ದಾಗ ಅವರಿಗೂ ಬೇರೆ ಆಟಗಾರರಿಗೆ ಸಿಗುವ ಸಂಭಾವನೆ, ಸೌಲಭ್ಯ ಮತ್ತು ಗೌರವ ಎಲ್ಲವೂ ಸಿಗುತ್ತೆ.
ಈಗ ಚಾಂಪಿಯನ್ ಭಾರತ ತಂಡದಲ್ಲಿರೋ ಅಂತಹ ಮೂವರು ಎಂದರೆ ರಿಷಬ್ ಪಂತ್, ಅರ್ಶ್‌ದೀಪ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್. ಈ ಮೂವರೂ ಕೂಡಾ ಒಂದೇ ಒಂದು ಮ್ಯಾಚ್ ಆಡಲಿಲ್ಲ ಎನ್ನುವುದು ವಿಶೇಷ.
ಟಿ-20 ವಿಶ್ವಕಪ್ ಗೆದ್ದ ತಂಡದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದವರು ರಿಷಬ್ ಪಂತ್. ರಿಷಬ್ ಪಂತ್ ಅವರ ಅವಕಾಶ ಕಿತ್ತುಕೊಂಡಿದ್ದವರು ಕನ್ನಡಿಗ ಕೆಎಲ್ ರಾಹುಲ್. ಪಂತ್, ಅದ್ಭುತ ಆಟಗಾರರೇನೋ ಹೌದು, ಆದರೆ ಸ್ಪಿನ್ ಪಿಚ್ಚುಗಳಲ್ಲಿ ರಾಹುಲ್ ಅವರನ್ನು ನಂಬುವಷ್ಟು, ಪಂತ್ ಅವರನ್ನು ನಂಬೋಕೆ ಆಗಲಿಲ್ಲ. ರಿಷಬ್ ಪಂತ್ ಬಹುತೇಕ ಪಂದ್ಯಗಳಲ್ಲಿ ಅಬ್ಬರದ ಆಟಕ್ಕೆ ಮುಂದಾಗಿ ವಿಕೆಟ್ ಕೊಡ್ತಾರೆ. ಆ ಸ್ಟೈಲ್ ಆಟ, ಈ ವಿಶ್ವಕಪ್ಪಿಗೆ ಬೇಕಿರಲಿಲ್ಲ. ಹೀಗಾಗಿಯೇ ಪಂತ್ ಒಂದೇ ಒಂದು ಮ್ಯಾಚ್ ಆಡಲಿಲ್ಲ. ಇವರ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡ ಕೆಎಲ್ ರಾಹುಲ್, ಪ್ರಮುಖ ಪಂದ್ಯಗಳನ್ನ ಗೆಲ್ಲಿಸಿ ಹೀರೋ ಆದರು. ಅಂದಹಾಗೆ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ಅವಕಾಶವನ್ನ ಕಿತ್ತುಕೊಂಡಿದ್ದವರು ಇದೇ ಪಂತ್.
ಇನ್ನೊಬ್ಬರು ಅರ್ಶ್‌ದೀಪ್ ಸಿಂಗ್. ಇವರೂ ಕೂಡಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಬೌಲರ್. ಜಸ್ ಪ್ರೀತ್ ಬೂಮ್ರಾ ಒಂದು ಕಡೆ ರನ್ನುಗಳನ್ನು ಕೊಡದೆ ಕಂಟ್ರೋಲ್ ಮಾಡ್ತಾ ಇದ್ರೆ, ಅದರ ಭರಪೂರ ಲಾಭ ಎತ್ತಿ, ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದವರು ಅರ್ಶ್‌ದೀಪ್ ಸಿಂಗ್. ಇನ್ನು ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬೂಮ್ರಾ ಇದ್ದರೂ, ಶಮಿ ಇರಲಿಲ್ಲ. ಈ ಟೂರ್ನಿಯಲ್ಲಿ ಶಮಿ ಇದ್ದರು, ಬೂಮ್ರಾ ಇರಲಿಲ್ಲ. ಸ್ಪಿನ್ ಪಿಚ್‌ಗಳಲ್ಲಿ ರೋಹಿತ್, ಶಮಿಗೆ ಚಾನ್ಸ್ ಕೊಟ್ಟರು. ಇನ್ನೊಬ್ಬ ಫಾಸ್ಟ್ ಬೌಲರ್ ಆಗಿ ಆಲ್ ರೌಂಡರ್ ಹಾರ್ದಿಕ್ ಅವರನ್ನ ಬಳಸಿಕೊಂಡ ರೋಹಿತ್, ಟ್ರೋಫಿಗಳನ್ನ ಗೆದ್ದರು. ರೋಹಿತ್ ಲೆಕ್ಕಾಚಾರ ಮಿಸ್ ಆಗಲಿಲ್ಲ.
ಮತ್ತೊಬ್ಬರೆಂದರೆ ವಾಷಿಂಗ್ಟನ್ ಸುಂದರ್. ಇವರನ್ನು ಮಾತ್ರ ದುರದೃಷ್ಟ ಎಂದೇ ಹೇಳಬೇಕು. ಏಕೆಂದರೆ ವಾಷಿಂಗ್ಟನ್ ಸುಂದರ್, ಸ್ಪಿನ್ ಪಿಚ್ಚಿನಲ್ಲಿ ಕೂಡಾ ಆಡುವ 11ರಲ್ಲಿ ಚಾನ್ಸ್ ಪಡೆಯಲೇ ಇಲ್ಲ. ವಾಷಿಂಗ್ಟನ್ ಸುಂದರ್ ಅವರಿಗೆ ಶಾಕ್ ಕೊಟ್ಟಿದ್ದು ಅಕ್ಷರ್ ಪಟೇಲ್ ಅವರ ಆಲ್ ರೌಂಡ್ ಆಟ. ಅತ್ತ ಬ್ಯಾಟಿಂಗು, ಇತ್ತ ಬೌಲಿಂಗು, ಇನ್ನೊಂದ್ ಕಡೆ ಫೀಲ್ಡಿಂಗು.. ಮೂರರಲ್ಲೂ ಮಿಂಚಿದ ಅಕ್ಷರ್ ಪಟೇಲ್, ವಾಷಿಂಗ್ಟನ್ ಅವಕಾಶವನ್ನ ಕಿತ್ತುಕೊಂಡ್ರು. ಜೊತೆಗೆ ಸ್ಪಿನ್ ಬೌಲಿಂಗಿನಲ್ಲಿ ಮಿಸ್ಟರಿ ಸ್ಪಿನ್ನರ್ ಆಗಿ ರೂಪುಗೊಂಡಿದ್ದ ವರುಣ್ ಚಕ್ರವರ್ತಿ, ನಂಬಿಗಸ್ಥ ಆಲ್ ರೌಂಡರ್ ಕೂಡಾ ರವೀಂದ್ರ ಜಡೇಜಾ ವಾಷಿಂಗ್ಟನ್ ಸುಂದರ್ ಕನಸಿಗೆ ಅಡ್ಡಿಯಾಯ್ತು.
ಏನೇ ಇರಲಿ, ಇನ್ನು ಮುಂದೆ ಭವಿಷ್ಯದಲ್ಲಿ ವಿಶ್ವಕಪ್ ವಿಜೇತರು ಅನ್ನೋ ಆಟಗಾರರ ಪಟ್ಟಿ ಮಾಡುವಾಗ ಒಂದು ಮ್ಯಾಚ್ ಆಡದೇ ಇದ್ದರೂ ಕೂಡಾ, ಈ ಮೂವರು ಕೂಡಾ ಆ ಲಿಸ್ಟಿನಲ್ಲಿರ್ತಾರೆ.