ಪ್ರಶಾಂತ್ ಎಸ್ , ಸ್ಪೇಷಲ್ ಡೆಸ್ಕ್, ಗ್ಯಾರಂಟಿ ನ್ಯೂಸ್
ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ರೆಕಾರ್ಡ್ ಮಾಡಿದ್ದಾರೆ. ಚಾಂಪಿಯನ್ ಟ್ರೋಫಿ ಕಪ್ನೊಂದಿಗೆ ಕೊಟ್ಟ ಒಂದು ಪೋಸ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಅಷ್ಟೇ ಯಾಕೆ ವಿರಾಟ್ ಕೊಹ್ಲಿ ದಾಖಲೆಯನ್ನೂ ಉಡೀಸ್ ಮಾಡಿದೆ. ಹಾಗಾದ್ರೆ ಹಾರ್ದಿಕ್ ಪಾಂಡ್ಯ ಕೊಟ್ಟ ಪೋಸ್ ಎಂತದ್ದು..? ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದೇಗೆ ಅಂತೀರಾ.. ಮುಂದಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಐಸಿಸಿ ಟ್ರೋಫಿ ಗೆದ್ದು ಟೀಂ ಇಂಡಿಯಾ ಚಾಂಪಿಯನ್ ಆಗುತ್ತಿದ್ದಂತೆ ಇಡೀ ಭಾರತವೇ ಸಂತಸದಲ್ಲಿ ಮುಳುಗಿತ್ತು. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿತ್ತು. ಇನ್ನು ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ಗೆ ಸೋಲಿನ ರುಚಿ ತೋರಿಸಿದ ಭಾರತದ ಆಟಗಾರರ ಸೆಲೆಬ್ರೇಷನ್ ಕೇಳ್ಬೇಕಾ..? ಮೈದಾನದಲ್ಲೇ ಸಖತ್ ಸ್ಟೆಪ್ ಹಾಕಿ, ಚಾಂಪಿಯನ್ ಗೆಲುವನ್ನು ಆನಂದಿಸಿದ್ರು. ಒಬ್ಬೊಬ್ಬ ಆಟಗಾರ ಚಾಂಪಿಯನ್ ಟ್ರೋಫಿ ಹಿಡಿದು ಡಿಫ್ರೆಂಟ್, ಡಿಫ್ರೆಂಟ್ ಸ್ಟೈಲ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೊಟ್ಟ ಒಂದು ಪೋಸ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಬರೆದಿದೆ.
ಚಾಂಪಿಯನ್ ಟ್ರೋಫಿ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಒಂದು ಪೋಸ್ ಕೊಟ್ಟಿದ್ದರು. ಇದು ಇಟಲಿಯ ಸೋಷಿಯಲ್ ಮೀಡಿಯಾ ಸ್ಟಾರ್ ಖಾಬಿಲ್ ಲೆ ಹಮ್ ಅವರ ಟ್ರೇಡ್ಮಾರ್ಕ್ ಪೋಸ್. ಟಿ-ಟ್ವೆಂಟಿ ವರ್ಲ್ಡ್ ಕಪ್ ಗೆದ್ದಾಗಲೂ ಹಾರ್ದಿಕ್ ಪಾಂಡ್ಯ ಕಪ್‌ನಾ ಪಿಚ್ ಮಧ್ಯ ಭಾಗದಲ್ಲಿಟ್ಟು ಖಾಬಿಲ್ ಹೆ ಹಮ್ ಸ್ಟೈಲ್‌ನಲ್ಲಿ ಪೋಸ್ ನೀಡಿದ್ದರು. ಇದೀಗ ಚಾಂಪಿಯನ್ ಟ್ರೋಫಿ ಗೆದ್ದ ನಂತರ ಸೇಮ್ ಅದೇ ಸ್ಟೈಲ್‌ನಲ್ಲಿ ಲುಕ್ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಈ ಫೋಟೋವನ್ನು ಹಾರ್ದಿಕ್ ಪಾಂಡ್ಯ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರು. ಕೇವಲ ಆರು ನಿಮಿಷದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶೇರ್ ಮಾಡಿದ್ದ ಫೋಟೋ ಜಸ್ಟ್ 6 ನಿಮಿಷದಲ್ಲಿ ಒಂದು ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಕೇವಲ ಆರು ನಿಮಿಷದಲ್ಲಿ ಒಂದು ಮಿಲಿಯನ್ ಲೈಕ್ಸ್ ಪಡೆದ ದಾಖಲೆ ಬರೆದಿದ್ದು, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನ ಪುಡಿಗಟ್ಟಿದೆ. ಕಳೆದ ವರ್ಷ ಟಿ-20 ವರ್ಲ್ಡ್ ಕಪ್ ಗೆದ್ದಾಗ ವಿರಾಟ್ ಕೊಹ್ಲಿ, ಸೆಲೆಬ್ರೇಷನ್ ಮಾಡಿದ್ದ ಫೋಟೋ ಶೇರ್ ಮಾಡಿದ್ದರು. ಅದು 7 ನಿಮಿಷದಲ್ಲಿ ಒಂದು ಮಿಲಿಯನ್ ಲೈಕ್ಸ್ ಪಡೆದುಕೊಂಡಿತ್ತು. ಜಸ್ಟ್ ಒಂದು ನಿಮಿಷದ ಅಂತರದಲ್ಲಿ ಹಾರ್ದಿಕ್ ಪಾಂಡ್ಯ ವಿರಾಟ್ ಕೊಹ್ಲಿ ರೆಕಾರ್ಡ್ ಮುರಿದು ತಮ್ಮ ಫಾಲೋವರ್ಸ್ ಪವರ್ ತೋರಿಸಿದ್ದಾರೆ.
ಪ್ರಶಾಂತ್ ಎಸ್ , ಸ್ಪೇಷಲ್ ಡೆಸ್ಕ್, ಗ್ಯಾರಂಟಿ ನ್ಯೂಸ್