ಪಾಕಿಸ್ತಾನ. ಈ ಹೆಸರು ಕೇಳಿದರೇನೇ ಭಾರತೀಯರು ಉರಿದು ಬೀಳ್ತಾರೆ. ಸ್ವಾತಂತ್ರ್ಯ ಬಂದು ಬೇರೆಯಾದ ದಿನದಿಂದ ಹಿಡಿದು.. ಈ ದಿನದವರೆಗೂ ಪಾಕಿಸ್ತಾನ, ಆ ದೇಶ ಛೂಬಿಟ್ಟ ಉಗ್ರರು ನಡೆಸಿದ ರಕ್ತಪಾತಗಳೇ ಅದಕ್ಕೆಲ್ಲ ಕಾರಣ. ಹೀಗಿರೋವಾಗ.. ಭಾರತೀಯ ಕ್ರಿಕೆಟ್ ಆಟಗಾರರು ಈಗ ಹಾಕ್ಕೊಂಡಿರೋ ವೈಟ್ ಜಾಕೆಟ್ ಮೇಲೆ ಪಾಕಿಸ್ತಾನ ಅಂಥಾ ಹೆಸರಿದೆ. ಪಾಕಿಸ್ತಾನದ ಹೆಸರಿರೋ ವೈಟ್ ಜಾಕೆಟ್ಟನ್ನ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ.. ಅಷ್ಟೆ ಅಲ್ಲ.. ಎಲ್ಲ 15 ಆಟಗಾರರೂ ಹಾಕ್ಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಗೆದ್ದವರಿಗೆ ಕೇವಲ ಟ್ರೋಫಿ, ಮೆಡಲ್ ಅಷ್ಟೇ ಕೊಡೋದಿಲ್ಲ. ಒಂದು ವೈಟ್ ಜಾಕೆಟ್ಟನ್ನೂ ಕೊಡ್ತಾರೆ. ಅದು ಕಂಪಲ್ಸರಿ. ಸಂಪ್ರದಾಯ. ಅಷ್ಟೇ ಅಲ್ಲ, ಯಾವ ದೇಶದವರು ಆತಿಥ್ಯ ವಹಿಸಿರ್ತಾರೋ.. ಆ ದೇಶದ ಹೆಸರು ಆ ವೈಟ್ ಕೋಟ್ ಅಥವಾ ವೈಟ್ ಜೆರ್ಸಿ ಅಥವಾ ವೈಟ್ ಜಾಕೆಟ್ ಮೇಲೆ ಇರುತ್ತೆ. ಹೀಗಾಗಿಯೇ ವೈಟ್ ಕೋಟ್ ಮೇಲೆ ಪಾಕಿಸ್ತಾನದ ಹೆಸರಿದೆ. ಅದು ಡೈರೆಕ್ಟ್ ಆಗಿ ಆಟಗಾರರ ಎದೆಯ ಹತ್ತಿರವೇ ಇದೆ.
ಭಾರತದವರು ಪಾಕಿಸ್ತಾನವೇ ಆತಿಥ್ಯ ವಹಿಸಿದ್ರೂ, ಆ ದೇಶಕ್ಕೆ ಬಂದು ಆಡೋದಿಲ್ಲ ಎಂದು ಹಠ ಹಿಡಿದ್ರು. ಬಿಸಿಸಿಐ ಹಠಕ್ಕೆ ಐಸಿಸಿ, ಪಾಕಿಸ್ತಾನದ ಕ್ರಿಕೆಟ್ ಮಂಡಳಿ ಎರಡೂ ತಲೆಬಾಗಿದವು. ಭಾರತ, ಪಾಕಿಸ್ತಾನಕ್ಕೆ ಹೆಜ್ಜೆ ಇಡದೆ, ಎಲ್ಲ ಪಂದ್ಯಗಳನ್ನೂ ದುಬೈನಲ್ಲೇ ಆಡಿತು.
ಪಾಕಿಸ್ತಾನದ ಭಯೋತ್ಪಾದಕರ ಪ್ರೀತಿಗೆ ಭಾರತ ಕೊಟ್ಟ ಉತ್ತರ ಅದು. ಅಷ್ಟೇ ಅಲ್ಲ, ಚಾಂಪಿಯನ್ ಕೂಡಾ ಆಯ್ತು.
ಇದರ ಮಧ್ಯೆ ಇನ್ನೂ ಒಂದು ಘಟನೆ ಆಯ್ತು. ಪಾಕಿಸ್ತಾನದ ಸ್ಟೇಡಿಯಂನಲ್ಲಿ ಪಾಕಿಸ್ತಾನ, ಭಾರತದ ಧ್ವಜವನ್ನೇ ಕೈಬಿಡುವ ದುರಹಂಕಾರ ತೋರಿಸಿದಾಗ, ಭಾರತ, ತನ್ನ ದೇಶದ ಪ್ರಸಾರದಲ್ಲಿ ಪಾಕಿಸ್ತಾನದ ಹೆಸರನ್ನೇ ಕೈಬಿಟ್ಟು ತಿರುಗೇಟು ಕೊಡ್ತು. ಒಂದೇ ಒಂದು ಮಾತನ್ನೂ ಆಡಲಿಲ್ಲ.
ಕಡೆಗೆ ಪಾಕಿಸ್ತಾನ, ತನ್ನ ದೇಶದ ಸ್ಟೇಡಿಯಂಗಳಲ್ಲಿ ಭಾರತದ ಧ್ವಜ ಹಾಕಿದ ಮೇಲಷ್ಟೇ, ಪಾಕಿಸ್ತಾನ ಅನ್ನೋ ಹೆಸರು ಡಿಸ್ನಿ ಹಾಟ್ ಸ್ಟಾರಿನಲ್ಲಿ ಕಾಣಿಸಿಕೊಂಡಿದ್ದು. ಭಾರತ, ಪಾಕಿಸ್ತಾನದಲ್ಲಿ ಆಡ್ತಾ ಇಲ್ಲವಲ್ಲ.. ಅನ್ನೋ ವಾದವನ್ನ ಭಾರತ ಮುಂದಿಟ್ಟಿದ್ರೆ, ಭಾರತ ಪಾಕಿಸ್ತಾನದಲ್ಲಿ ಆಡೋಕೆ ಬಂದಿಲ್ಲ ಅನ್ನೋ ಸಮರ್ಥನೆ ಭಾರತದ ಕಡೆಯಿಂದ ಹೋಯ್ತು.
ಇದಾದ ಮೇಲೆ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತದ ರಾಷ್ಟ್ರಗೀತೆಯೂ ಮೊಳಗಿ, ಪಾಕಿಸ್ತಾನ ಮತ್ತೊಮ್ಮೆ ಅವಮಾನದಿಂದ ನಲುಗಿ ಹೋಯ್ತು.
ಅದೆಲ್ಲದಕ್ಕೂ ಕಳಸ ಇಟ್ಟಂತೆ ಪಾಕಿಸ್ತಾನ ಲೀಗ್ ಹಂತದಲ್ಲಿಯೇ, ಟೂರ್ನಿಯಿಂದ ಔಟ್ ಆದ್ರೆ, ಭಾರತ ಚಾಂಪಿಯನ್ ಆಯ್ತು. ಆತಿಥ್ಯ ವಹಿಸಿದ ದೇಶವೊಂದು ಟೂರ್ನಿಯ ಲೀಗ್ ಹಂತದಲ್ಲೇ ಎಕ್ಸಿಟ್ ಆಗಿದ್ದು ಇದೇ ಮೊದಲು. ಪಾಕಿಸ್ತಾನಕ್ಕೆ, ಭಾರತ ಹೋಗಲಿಲ್ಲ. ಆದರೆ ಪಾಕಿಸ್ತಾನದಲ್ಲಿ ರಾಷ್ಟ್ರಧ್ವಜ ಹಾರಾಡಿತು. ಭಾರತ, ಪಾಕಿಸ್ತಾನಕ್ಕೆ ಹೋಗಲಿಲ್ಲ. ಸ್ಟೇಡಿಯಮ್ಮುಗಳು ಪ್ರೇಕ್ಷಕರಿಲ್ಲದೆ ಖಾಲಿ ಹೊಡೆದವು. ಪಾಕಿಸ್ತಾನ ಕೂಡಾ, ತನ್ನ ಭಾರತದ ವಿರುದ್ಧದ ಪಂದ್ಯವನ್ನ ದುಬೈನಲ್ಲೇ ಆಡೋಕೆ ಬಂತು. ಹೀನಾಯವಾಗಿ ಸೋತು ಹೋಯ್ತು. ಭಾರತದಿಂದ ಪಾಕಿಸ್ತಾನಕ್ಕಾದ ಮತ್ತೊಂದು ಅವಮಾನವದು.
ಹೀಗೆ ಪದೇ ಪದೇ ಅವಮಾನ ಅನುಭವಿಸಿದ.. ಜೊತೆಗೆ ಕೋಟ್ಯಂತರ ಖರ್ಚು ಮಾಡಿಯೂ ಲಾಭವನ್ನೂ ಮಾಡದ ಪಾಕಿಸ್ತಾನಕ್ಕೀಗ ಕೊನೆಯಲ್ಲೊಂದು ವೈಟ್ ಕೋಟ್ ಕೊಟ್ಟು, ಅದರ ಮೇಲೆ ಪಾಕಿಸ್ತಾನದ ಹೆಸರು ಹಾಕಿ ಸಮಾಧಾನ ಪಟ್ಟುಕೊಂಡಿದೆ.
ಅಷ್ಟೇ ಅಲ್ಲ, ಪಿಸಿಬಿ ಕ್ರಿಕೆಟ್ ಟ್ವಿಟರ್ ಖಾತೆಯಲ್ಲಿ, ಭಾರತ ಚಾಂಪಿಯನ್ ಆದ ಒಂದೇ ಒಂದು ಫೋಟೋ ಕೂಡಾ ಹಾಕಿಲ್ಲ. ವಿಷ್ ಮಾಡುವ ಒಂದೇ ಒಂದು ಟ್ವೀಟ್ ಕೂಡಾ ಮಾಡಿಲ್ಲ. ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಪ್ರಶಸ್ತಿ ಕೊಡುವ ಸಮಾರಂಭಕ್ಕೂ ಗೈರು ಹಾಜರಾಗಿ, ಸೋಲಿನ ಅವಮಾನಕ್ಕೆ ಔಷಧಿ ಹಚ್ಚಿಕೊಳ್ಳೋ ಪ್ರಯತ್ನ ಮಾಡಿದೆ.
ಇದನ್ನೂ ಭಾರತ ನಿರಾಕರಿಸಬಹುದಿತ್ತಲ್ವಾ.. ಎಂಬ ಪ್ರಶ್ನೆಗೆ ಉತ್ತರವೂ ಇದೆ. ಆತಿಥ್ಯ ವಹಿಸಿದ ದೇಶದ ಹೆಸರು ಹಾಕಿಕೊಳ್ಳಲೇಬೇಕು ಎನ್ನೋದು ಐಸಿಸಿಯ ನಿಯಮ. ಆ ನಿಯಮವನ್ನಂತೂ ಬ್ರೇಕ್ ಮಾಡೋಕೆ ಆಗಲ್ಲ. ನಿಮ್ಮ ದೇಶದ ಆಟಗಾರರ ಎದೆಯ ಮೇಲೆ ನಮ್ಮ ದೇಶದ ಹೆಸರಿದೆ ಗೊತ್ತಾ.. ಎಂದು ಹೇಳಿಕೊಂಡು ಪಾಕ್ ಕ್ರಿಕೆಟ್ ಪ್ರೇಮಿಗಳು ಸಮಾಧಾನ ಪಟ್ಟುಕೊಳ್ಳಬೇಕಷ್ಟೆ. ಅಷ್ಟಾದರೂ ಸಮಾಧಾನ ಸಿಕ್ಕಲಿ ಬಿಡಿ.