ಭಾರತ vs ಪಾಕಿಸ್ತಾನ ಹೋರಾಟ – ಟೆಲಿವಿಷನ್ ವೀಕ್ಷಣೆಯಲ್ಲಿ ದಾಖಲೆ , 20.6 ಕೋಟಿ ಜನ ನೋಡಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೀಕ್ಷಿಸಿದ್ದಾರೆ. 2011ರ ಕ್ರಿಕೆಟ್ ವಿಶ್ವಕಪ್ ಮ್ಯಾಚ್ ಹೊರತುಪಡಿಸಿ, ಇದು BARC ಇತಿಹಾಸದಲ್ಲಿ ಎರಡನೇ ಅತಿಹೆಚ್ಚು ವೀಕ್ಷಣೆ ಪಡೆದ ಕ್ರಿಕೆಟ್ ಪಂದ್ಯ. 2023ರ ವಿಶ್ವಕಪ್ ಇಂಡಿಯಾ ಪಾಕ್ ಮ್ಯಾಚ್ ಗಿಂತಲೂ 10% ಹೆಚ್ಚಿನ ರೇಟಿಂಗ್ ಬಂದಿದೆ.
ಫೆ.23ರಂದು ನಡೆದ ಚಾಂಪಿಯೆನ್ಸ್ ಟ್ರೋಪಿಯ ಇಂಡಿಯಾ ಪಾಕ್ ಮ್ಯಾಚ್ ಅನ್ನು ಬರೊಬ್ಬರಿ 20.6 ಕೋಟಿ ವೀಕ್ಷಕರು ಟಿವಿಯಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ BARC ನಲ್ಲಿ ಹೊಸ ದಾಖಲೆ ರಿಜಿಸ್ಟಾರ್ ಆಗಿದೆ. ಈ ಪಂದ್ಯವೂ 2023ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಇಂಡಿಯಾ ಪಾಕ್ ಮ್ಯಾಚ್‌ಗಿಂತಲ್ಲೂ 10% ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
1400 ರನ್‌ಗಳನ್ನು ಪೂರೈಸಿದ ಈ ಮ್ಯಾಚ್ ಅನ್ನು 2609 ಕೋಟಿ ನಿಮಿಷಗಳ ಕಾಲ ವೀಕ್ಷಿಸಿದ ಪ್ರೇಕ್ಷಕರು, ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ. ಈ ಪಂದ್ಯದ ಮೂಲಕ ಇಂಡಿಯಾದಲ್ಲಿ ಕ್ರಿಕೆಟ್‌ಗಿರೋ ಪಾಪ್ಯುಲಾರಿಟಿ ಮತ್ತೊಮ್ಮೆ ಸಾಭೀತಾಗಿದೆ. ಇಂಡಿಯಾ ಪಾಕ್ ಮ್ಯಾಚ್ ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ದಾಖಲೆ ಸೃಷ್ಟಿ ಮಾಡ್ತಾನೆ ಇರುತ್ತೆ. ಈ ಬಾರಿಯ ಮ್ಯಾಚ್ ರೇಟಿಂಗ್‌ನಲ್ಲಿ ದಾಖಲೆ ಮಾಡಿದೆ.
ಐಪಿಎಲ್ ಹಾವಳಿಯ ನಡುವೆಯೂ, ಮೊಬೈಲ್‌ನಲ್ಲಿ ಮ್ಯಾಚ್ ನೋಡೋರ ಮಧ್ಯೆಯೂ ಈ ಏಕದಿನ ಪಂದ್ಯದ ಇಷ್ಟು ಟಿವಿ ವೀಕ್ಷಣೆ ಕಂಡಿರೋದು ಗಮನಾರ್ಹ. ಈ ಮೂಲಕ ಸ್ಟಾರ್ ಸ್ಪೋರ್ಟ್ಸ್ ತನಗಿರೋ ಫಾಲೋಯಿಂಗ್ ಬಗ್ಗೆ ಹೆಮ್ಮೆ ಪಡುತ್ತಿದೆ. ಈ ಇಂಡಿಯಾ ಪಾಕ್ ಪಂದ್ಯವನ್ನು ಭಾರತದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಹಾಗೂ ಬಾಲಿವುಡ್ ನಟ ಸನ್ನಿ ಡಿಯೋಲ್ ನೇರವಾಗಿ ಸ್ಟೇಡಿಯಂನಲ್ಲಿ ವೀಕ್ಷಿಸಿದ್ದು ವಿಶೇಷವಾಗಿತ್ತು.
ಈ ಮ್ಯಾಚ್ ಬಳಿಕ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೆಣೆಸಿ, ಗೆದ್ದು ಅಧಿಕೃತವಾಗಿ ಫಿನಾಲೆಗೆ ಎಂಟ್ರಿ ಕೊಟ್ಟಿದೆ. ಲೀಗ್ ಹಂತದ ಪಂದ್ಯಗಳಲ್ಲಿ ಎದುರಾಳಿಯಾಗಿದ್ದ ನ್ಯೂಜಿಲ್ಯಾಂಡ್ ಅನ್ನು ಭಾರತ ರೋಚಕವಾಗಿ ಸೋಲಿಸಿತ್ತು. ಈಗ ಫಿನಾಲೆಯಲ್ಲೂ ಮತ್ತೆ ನ್ಯೂಜಿಲ್ಯಾಂಡ್ ಅನ್ನು ಭಾರತ ಎದುರಿಸಲಿದೆ. ಈ ಪಂದ್ಯ ಇದೇ ಭಾನುವಾರ ಮಾ.9ರಂದು ಪ್ರಸಾರವಾಗಲಿದ್ದು, ಈ ಮ್ಯಾಚ್ ಕೂಡ ಹೈ ವೋಲ್ಟೇಜ್ ಮ್ಯಾಚ್ ಆಗಿರಲಿದೆ. ಮತ್ತೊಂದು ದಾಖಲೆ ಸೃಷ್ಟಿಸೋ ಸಾಧ್ಯತೆ ಇದೆ.