ಐಪಿಎಲ್ 2025ರ ಋತು ಸೀಸನ್ ಅದ್ಭುತ ಉದ್ಘಾಟನೆ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಜನಪ್ರಿಯ ಗಾಯಕಿಯರಾದ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಮತ್ತು ನಟಿ ದಿಶಾ ಪಟಾನಿ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ.ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) vs ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಆದರೆ, ಕೋಲ್ಕತ್ತಾದ ಹವಾಮಾನವು ಅಭಿಮಾನಿಗಳಿಗೆ ಕಳವಳ ತಂದಿದೆ. ಭಾರತೀಯ ಹವಾಮಾನ ಇಲಾಖೆ (IMD) ಮಾರ್ಚ್ 20-22ರವರೆಗೆ ಪಶ್ಚಿಮ ಬಂಗಾಳದಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯ ಅಂದಾಜು ನೀಡಿದೆ.
ಮಳೆಯಿಂದಾಗಿ ಕೆಕೆಆರ್- ಆರ್‌ಸಿಬಿ ಪಂದ್ಯ ರದ್ದಾಗುವ ಸಾಧ್ಯತೆ:
ಐಪಿಎಲ್ 2025 ರ ಋತುವು ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಜನಪ್ರಿಯ ಗಾಯಕಿಯರಾದ ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಮತ್ತು ನಟಿ ದಿಶಾ ಪಟಾನಿ ಪ್ರದರ್ಶನ ನೀಡಲಿದ್ದಾರೆ. ಆದಾಗ್ಯೂ, ಮಾರ್ಚ್ 22 ರವರೆಗೆ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯವು ಮಳೆಯಿಂದ ಕೊಚ್ಚಿ ಹೋಗುವ ಸಾಧ್ಯ ಇದೆ.
ಕೋಲ್ಕತ್ತಾದಲ್ಲಿ ಭಾರೀ ಮಳೆ ಮುನ್ಸೂಚನೆ
ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮಾರ್ಚ್ 20 ರಿಂದ 22 ರವರೆಗೆ ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಮತ್ತು ಜೋರು ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಂಭವವಿದೆ. ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಾಗಿದ್ದು, ಕೋಲ್ಕತ್ತಾ ಸಹ ಈ ಪಟ್ಟಿಯಲ್ಲಿದೆ. ಬಂಗಾಳಕೊಲ್ಲಿಯಿಂದ ಬೀಸುವ ಗಾಳಿ ಮತ್ತು ತೇವಾಂಶದಿಂದಾಗಿ ಈ ಹವಾಮಾನ ಪರಿಸ್ಥಿತಿ ಉಂಟಾಗಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ. ಇದರಿಂದಾಗಿ ಐಪಿಎಲ್‌ನ ಮೊದಲ ಪಂದ್ಯ ರದ್ದಾಗುವ ಆತಂಕ ಎದುರಾಗಿದೆ.
ಹವಾಮಾನದ ಸ್ಥಿತಿ ಮತ್ತು ಪರಿಣಾಮ:
ಕೋಲ್ಕತ್ತಾದ ಪ್ರಾದೇಶಿಕ ಹವಾಮಾನ ಕೇಂದ್ರವು ಅಲರ್ಟ್ ಜಾರಿ ಮಾಡಿದೆ. ಮಾರ್ಚ್ 22ರ ಸಂಜೆ ಮತ್ತು ರಾತ್ರಿ ಭಾರೀ ಮಳೆ, 40-50 km/h ವೇಗದ ಗಾಳಿ ಮತ್ತು ಮಿಂಚಿನ ಸಾಧ್ಯತೆ ಇದೆ. ಐಪಿಎಲ್ ನಿಯಮಗಳ ಪ್ರಕಾರ, ಮಳೆಯಿಂದ ಪಂದ್ಯ ರದ್ದಾದರೆ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳಿಗೆ ಒಂದೊಂದು ಪಾಯಿಂಟ್ ನೀಡಲಾಗುತ್ತದೆ. ಇದು ಎರಡೂ ತಂಡಗಳಿಗೆ ಹೊಸ ಸೀಸನ್‌ನಲ್ಲಿ ಗೆಲುವಿನ ಆರಂಭಕ್ಕೆ ಚಿಂತೆಯ ಸೂಚನೆಯಾಗಿದೆ.
ಕೆಕೆಆರ್-ಆರ್‌ಸಿಬಿ ಇತಿಹಾಸ
ಈ ತಂಡಗಳ ನಡುವೆ ಈ ವರೆಗೆ 34 ಪಂದ್ಯಗಳು ನಡೆದಿದ್ದು, ಕೆಕೆಆರ್ 20 ಗೆಲುವುಗಳೊಂದಿಗೆ ಮೇಲುಗೈ ಸಾಧಿಸಿದೆ. ಆರ್‌ಸಿಬಿ 14 ಪಂದ್ಯಗಳಲ್ಲಿ ಜಯ ಗಳಿಸಿದೆ. ಇವರ ಹಿಂದಿನ ಯಾವುದೇ ಪಂದ್ಯವೂ ಮಳೆಯಿಂದ ರದ್ದಾಗಿಲ್ಲ. ಈ ಬಾರಿ ರದ್ದತಿ ಸಂಭವಿಸಿದರೆ, ಅದು ಇತಿಹಾಸದಲ್ಲಿ ಮೊದಲ ಬಾರಿಗೆ ಆಗಲಿದೆ. ಈ ಸಾರಿ ಹವಾಮಾನವೇ ಸವಾಲಾಗಿದೆ.
ಪಂದ್ಯದ ದಿನ ಸಮೀಪಿಸುತ್ತಿದ್ದಂತೆ, ಅಭಿಮಾನಿಗಳ ದೃಷ್ಟಿ ಹವಾಮಾನದ ಮೇಲಿದೆ. ಮಳೆ ತಪ್ಪಿ, ಐಪಿಎಲ್ 2025 ಭರ್ಜರಿಯಾಗಿ ಆರಂಭವಾಗಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.