ಆರ್‌ಸಿಬಿ ತಂಡಕ್ಕೆ ಸ್ಟಾರ್ ಬೌಲರ್ ಎಂಟ್ರಿ!

Befunky collage 2025 03 18t180403.236

2025, ಮಾರ್ಚ್ 22ರಿಂದ ಐಪಿಎಲ್ ಕ್ರಿಕೆಟ್ ಪ್ರಪಂಚದ ಅತಿ ದೊಡ್ಡ ಕ್ರೇಜ್ ಶುರುವಾಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್‌ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗಲಿದೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡದ ಮೇಲೆ ಫ್ಯಾನ್‌ಗಳ ನಿರೀಕ್ಷೆಗಳು ಇಮ್ಮಡಿಯಾಗಿವೆ.

ಆರ್‌ಸಿಬಿ ತಂಡಕ್ಕೆ ಅಂತರರಾಷ್ಟ್ರೀಯ ಸ್ಟಾರ್ ಬೌಲರ್ ಸೇರ್ಪಡೆಯಾಗಿದೆ.ಈ ಸ್ಟಾರ್ ಬೌಲರ್ ಸೊಂಟದ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು.ಹೀಗಾಗಿ ಅವರು ಐಪಿಎಲ್ 2025ರಲ್ಲಿ ಆಡುವುದು ಡೌಟ್ ಎನ್ನಲಾಗಿತ್ತು.ಸದ್ಯ ಈ ಸ್ಟಾರ್ ಬೌಲರ್‌ ಆರ್‌‌ಸಿಬಿ ಸೇರಿರುವುದು ತಂಡದ ಬಲ ಹೆಚ್ಚಿಸಿದೆ.

ADVERTISEMENT
ADVERTISEMENT

ಆರ್‌‌ಸಿಬಿ ತಂಡ ಸೇರಿದ ಸ್ಟಾರ್‌‌‌ ಬೌಲರ್‌‌ ಜೋಶ್ ಹೇಜಲ್‌‌ವುಡ್. ಹೇಜಲ್‌ವುಡ್ ಆರ್‌‌ಸಿಬಿ ‌ 12.5 ಕೋಟಿ ರೂ. ಹಣಕ್ಕೆ ಖರೀದಿಸಿತ್ತು.

ವಿರಾಟ್ ಕೋಹ್ಲಿ, ಫಿಲ್ ಸಾಲ್ಟ್, ಗ್ಲೆನ್ ಮ್ಯಾಕ್ಸ್ವೆಲ್‌ ರಂತಹ ಅನುಭವಿ ಆಟಗಾರರ ಜೊತೆಗೆ, ರಜತ್ ಪಾಟಿದಾರ್ ಕ್ಯಾಪ್ಟನ್‌ಸಿಯಲ್ಲಿ ತಂಡದಲ್ಲಿ ಹೊಸ ಶಕ್ತಿ ಕಾಣಸಿಗುತ್ತಿದೆ. ತಂಡದ ಅಭ್ಯಾಸಗಳು ಪೂರ್ಣಗತಿಯಲ್ಲಿವೆ ಮತ್ತು ಸದಸ್ಯರು ಬೆಂಗಳೂರು ಕ್ಯಾಂಪ್‌ನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಚಾಂಪಿಯನ್‌ಶಿಪ್ ತಪ್ಪಿದ ಆರ್‌ಸಿಬಿ, ಈ ಸಲ “ಕಪ್ ನಮ್ದೇ” ಎಂದು ಘೋಷಿಸಲು ಸಿದ್ಧವಾಗಿದೆ.

ಆರ್‌ಸಿಬಿಯ 2025 ತಂಡದಲ್ಲಿ ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್ ರಂತಹ ಕೀಲಿ ಆಟಗಾರರಿದ್ದಾರೆ. ಹೊಸ ಸೇರ್ಪಡೆಗಳು ಮತ್ತು ಅನುಭವಿ ಪ್ಲೇಯರ್‌ಗಳ ಸಮತೋಲನ ತಂಡವನ್ನು ಸಮಗ್ರವಾಗಿ ಮಾಡಿದೆ. ಫ್ಯಾನ್‌ಗಳು ಸೋಷಿಯಲ್ ಮೀಡಿಯಾದಲ್ಲಿ “ಈ ಬಾರಿ ಕಪ್ ಆರ್‌ಸಿಬಿದೇ” ಎಂದು ಟ್ರೆಂಡ್ ಮಾಡುತ್ತಿದ್ದಾರೆ.

ಐಪಿಎಲ್ 2025ರಲ್ಲಿ ಆರ್‌ಸಿಬಿ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ರಜತ್ ಪಾಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಪ್‌ ಗೆಲ್ಲಲಿದೆ ಅನ್ನೋ ವಿಶ್ವಾಸ ಇದೆ.

ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ಕ್ಯಾಪ್ಟನ್​), ಯಶ್ ದಯಾಳ್, ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹೇಜಲ್‌ವುಡ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.

Exit mobile version