ಐಪಿಎಲ್ 2025ರ ಪಂದ್ಯ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಬಹುನಿರೀಕ್ಷಿತ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾಗಿದ್ದು, ಅಭಿಮಾನಿಗಳು ಎರಡು ದಿಗ್ಗಜ ಕ್ರಿಕೆಟಿಗರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿಯನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.
ಐಪಿಎಲ್ ಇತಿಹಾಸವನ್ನು ಗಮನಿಸಿದರೆ, ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡದ ಸಾಧನೆ ಅತ್ಯಂತ ದುರ್ಬಲವಾಗಿದೆ. 2008ರಲ್ಲಿ ಏಕೈಕ ಗೆಲುವು ಪಡೆದ ಬಳಿಕ, ಆರ್‌ಸಿಬಿ ಈ ಮೈದಾನದಲ್ಲಿ ಸಿಎಸ್‌ಕೆ ವಿರುದ್ಧ ಜಯಗಳಿಸಲು ವಿಫಲವಾಗಿದೆ. ಎರಡು ತಂಡಗಳು ಈ ಕ್ರೀಡಾಂಗಣದಲ್ಲಿ ಒಟ್ಟು 9 ಬಾರಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 8 ಬಾರಿ ಗೆದ್ದು, ಆರ್‌ಸಿಬಿ ಕೇವಲ ಒಂದೇ ಬಾರಿ ಜಯ ಸಾಧಿಸಿದೆ.
ಆರ್‌ಸಿಬಿ ಈ ಬಾರಿ ಬಲಿಷ್ಠ ತಂಡವೊಂದನ್ನು ರೂಪಿಸಿಕೊಂಡಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಸಮತೋಲನ ಸಾಧಿಸಿದೆ. ನಾಯಕ ರಜತ್ ಪಾಟಿದಾರ್ ನೇತೃತ್ವದ ಈ ತಂಡದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್ ಎಂಬ ಶಕ್ತಿಶಾಲಿ ಬ್ಯಾಟರ್‌ಗಳಿದ್ದು, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಲ್ ಅವರಂತ ಬಲಿಷ್ಠ ಬೌಲರ್‌ಗಳಿದ್ದಾರೆ. ಸ್ಪಿನ್ ವಿಭಾಗದಲ್ಲಿ ಸುಯಾಶ್ ಶರ್ಮಾ ತೀವ್ರತೆಯನ್ನು ಹೆಚ್ಚಿಸುತ್ತಿದ್ದು, ಆರ್‌ಸಿಬಿ ತಮ್ಮ ವೇಗ ಹಾಗೂ ಪವರ್‌ಹಿಟಿಂಗ್‌ನಲ್ಲಿ ತೂಕ ಹೆಚ್ಚಿಸಿಕೊಂಡಿದೆ.
ಇನ್ನು, ಸಿಎಸ್‌ಕೆ ತಂಡ ತವರಿನಲ್ಲಿ ತಮ್ಮ ಪ್ರಾಬಲ್ಯವನ್ನು ಮುಂದುವರೆಸಲು ತಯಾರಿ ಮಾಡಿಕೊಂಡಿದೆ. ನಾಯಕ ರುತುರಾಜ್ ಗಾಯಕ್ವಾಡ್ ಅವರ ಶಾಂತ ನಾಯಕತ್ವದಡಿ, ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್ ಮುಂತಾದರೂ ಬಲಿಷ್ಠ ಬ್ಯಾಟಿಂಗ್ ಆರ್ಡರ್ ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರವಿಚಂದ್ರನ್ ಅಶ್ವಿನ್, ಜಡೇಜಾ, ನೂರ್ ಅಹ್ಮದ್ ಎಂಬ ಸ್ಪಿನ್ ತ್ರಿಮೂರ್ತಿಗಳು ಇದ್ದಾರೆ. ಖಲೀಲ್ ಅಹ್ಮದ್ ಅವರ ವೇಗ ಬೌಲಿಂಗ್ ಕೂಡ ಸಿಎಸ್‌ಕೆಗೆ ಆರ್‌ಸಿಬಿ ವಿರುದ್ಧ ಪ್ರಮುಖ ಅಸ್ತ್ರವಾಗಲಿದೆ.
ಪ್ಲೇಯಿಂಗ್ ಇಲೆವೆನ್ ವಿವರ:
ಆರ್‌ಸಿಬಿ:
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಲ್.
ಇಂಪ್ಯಾಕ್ಟ್ ಆಟಗಾರರು: ಸ್ವಪ್ನಿಲ್ ಸಿಂಗ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಮನೋಜ್ ಭಾಂಡಗೆ.
ಸಿಎಸ್‌ಕೆ:
ರೂತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್, ಎಂಎಸ್ ಧೋನಿ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮತೀಶ ಪತಿರಾನ, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಆಟಗಾರರು: ರಾಹುಲ್ ತ್ರಿಪಾಠಿ, ವಿಜಯ್ ಶಂಕರ್.