IPL 2025: ಡೆಲ್ಲಿ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ; ಪ್ಲೇಯಿಂಗ್​- 11ನಲ್ಲಿ ದೊಡ್ಡ ಬದಲಾವಣೆ

Untitled design (86)

ಐಪಿಎಲ್ 2025ರ 46ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ತಂಡಗಳು ಮುಖಾಮುಖಿಯಾಗಿವೆ. ಎರಡೂ ತಂಡಗಳು ಈ ಸೀಸನ್ ಉತ್ತಮ ಫಾರ್ಮ್‌ನಲ್ಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡಕ್ಕೆ ಅಗ್ರಸ್ಥಾನಕ್ಕೆ ಏರುವ ಅವಕಾಶವಿದೆ. ಪ್ರಸ್ತುತ, ಡೆಲ್ಲಿ ಕ್ಯಾಪಿಟಲ್ಸ್ 12 ಅಂಕ ಹಾಗೂ ಉತ್ತಮ ನೆಟ್ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದು, ಆರ್‌ಸಿಬಿ ಕೂಡ 12 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯ ಎರಡು ತಂಡಗಳಿಗೂ ಅತ್ಯಂತ ಮಹತ್ವದಾಗಿದೆ.

ಟಾಸ್‌ನಲ್ಲಿ ಜಯ ಸಾಧಿಸಿದ ಆರ್‌ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ಟಾಸ್ ನಂತರ ಮಾತನಾಡಿದ ರಜತ್, “ಪಿಚ್‌ನ ಪ್ರಾರಂಭದಲ್ಲಿ ಬೌಲರ್‌ಗಳಿಗೆ ಸಹಾಯ ಲಭ್ಯವಿದೆ, ಹಾಗಾಗಿ ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದ್ದೇವೆ,” ಎಂದು ಹೇಳಿದರು.

ADVERTISEMENT
ADVERTISEMENT
ಆರ್‌ಸಿಬಿಯಲ್ಲಿ ಮಹತ್ವದ ಬದಲಾವಣೆ

ಆರ್‌ಸಿಬಿಯ ಆರಂಭಿಕ ಆಟಗಾರ ಫಿಲ್ ಸಾಲ್ಟ್, ಜ್ವರದಿಂದ ಬಳಲುತ್ತಿರುವ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಯುವ ಆಂಗ್ಲ ಬ್ಯಾಟರ್ ಜಾಕೋಬ್ ಬೆಥೆಲ್ ಅವರನ್ನು ತಂಡ ಸೇರಿಸಿಕೊಂಡಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನ ಬದಲಾವಣೆಗಳು

ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿಯೂ ಬದಲಾವಣೆಗಳಾಗಿವೆ. ಫಾಫ್ ಡು ಪ್ಲೆಸಿಸ್, ತಮ್ಮ ಅನುಭವದೊಂದಿಗೆ ಮತ್ತೆ ತಂಡವನ್ನು ಶಕ್ತಿಪಡಿಸಲು ಹಾಜರಾಗಿದ್ದಾರೆ. ತಂಡದ ನಾಯಕತ್ವವನ್ನು ಅಕ್ಷರ್ ಪಟೇಲ್ ನಿರ್ವಹಿಸುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕೆಎಲ್ ರಾಹುಲ್, ಕರುಣ್ ನಾಯರ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಮೇಲೆ ಭಾರವಿದೆ.

ಮುಖಾಮುಖಿ ದಾಖಲೆ

ಇದುವರೆಗೆ ಡೆಲ್ಲಿ ಮತ್ತು ಬೆಂಗಳೂರು ತಂಡಗಳು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಡೆಲ್ಲಿ 12 ಪಂದ್ಯಗಳಲ್ಲಿ ಜಯಗಳಿಸಿದ್ದು, ಬೆಂಗಳೂರು 19 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿದೆ. 2021 ರಿಂದ ಡೆಲ್ಲಿ, ಆರ್‌ಸಿಬಿ ವಿರುದ್ಧ ಆಡಿದ ಏಳು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿದೆ. ವಿಶೇಷವಾಗಿ, ಡೆಲ್ಲಿ ತಂಡ ತವರಿನಲ್ಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ 10 ಪಂದ್ಯಗಳನ್ನು ಆಡಿದ್ದು, ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

ತಂಡಗಳ ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್ (DC):
ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ದುಷ್ಮಂತ ಚಮೀರಾ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್ಸ್:
ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಜೇಕ್ ಫ್ರೇಸರ್ ಮೆಕ್‌ಗುರ್ಕ್, ಮಾಧವ್ ತಿವಾರಿ, ವಿಜಯ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB):
ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್, ರಜತ್ ಪಾಟಿದರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಲ್.

ಇಂಪ್ಯಾಕ್ಟ್ ಪ್ಲೇಯರ್ಸ್:
ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಖ್ ದಾರ್ ಸಲಾಂ, ಮನೋಜ್ ಭಾಂಡಗೆ, ಸ್ವಪ್ನಿಲ್ ಸಿಂಗ್.

Exit mobile version