IPL 2025: ಕ್ರಿಕೆಟ್‌ ಮೈದಾನಕ್ಕೆ ಬಂದ ರೋಬೋ ಶ್ವಾನ

Untitled design 2025 04 13t225943.828

ಇಡೀ ಕ್ರಿಕೆಟ್ ಪ್ರಪಂಚದ ಗಮನಸೆಳೆದಿರುವ 2025 ರ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) 29ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಆದರೆ ಈ ಪಂದ್ಯದ ಮೈದಾನಕ್ಕೆ ಒಂದು ವಿನೂತನ ತಂತ್ರಜ್ಞಾನ ರೋಬೋ ಶ್ವಾನ ಆಗಮಿಸಿದ್ದು ಎಲ್ಲರ ಗಮನ ಸೆಳೆದಿದೆ.

ಪಂದ್ಯಕ್ಕೂ ಮುನ್ನ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾಗ ಮೈದಾನದೊಳಗೆ ಪ್ರವೇಶಿಸಿದ ಈ ಯಾಂತ್ರಿಕ ಶ್ವಾನ ಎಲ್ಲರ ಗಮನ ಸೆಳೆಯಿತು. ಪ್ರಾರಂಭದಲ್ಲಿ ಆಟಗಾರರು ಹಾಗೂ ಕಮೆಂಟೇಟರ್‌ಗಳು ಈ ಯಂತ್ರ ನೋಡಿ ತುಸು ಭಯಭೀತಗೊಂಡರು.. ಹೆಸರೇ ಕೇಳದ ಈ ರೋಬೋ ಶ್ವಾನ ಮೊದಲಿಗೆ ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿತು.

ADVERTISEMENT
ADVERTISEMENT

ಐಪಿಎಲ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ ಈ ಘಟನೆಯ ವೀಡಿಯೋವನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಡೆಲ್ಲಿ ನಾಯಕ ಅಕ್ಷರ್ ಪಟೇಲ್, ಮುಂಬೈ ವೇಗಿ ರೀಸ್ ಟಾಪ್ಲಿ ಮತ್ತು ಹಿರಿಯ ನಿರೂಪಕ ಡ್ಯಾನಿ ಮಾರಿಸನ್ ಮೊದಲ ಬಾರಿಗೆ ಈ ಶ್ವಾನವನ್ನು ನೋಡಿದ ಕ್ಷಣದ ಪ್ರತಿಕ್ರಿಯೆ ಸ್ಪಷ್ಟವಾಗಿ ಕಾಣುತ್ತದೆ. “ಇದು ಯಾವ ರೀತಿಯ ಶ್ವಾನ?” ಎಂದು ಟಾಪ್ಲಿ ಆಶ್ಚರ್ಯಚಕಿತರಾದರೆ, ಡ್ಯಾನಿ ಮಾರಿಸನ್ ಕೂಡ ಪ್ರಾರಂಭದಲ್ಲಿ ಬೆಚ್ಚಿಬಿದ್ದರು.

ಡ್ಯಾನಿ ಮಾರಿಸನ್ ನಂತರ ಮಾತನಾಡುವಾಗ, ಈ ರೋಬೋ ಶ್ವಾನದಲ್ಲಿ ಅಳವಡಿಸಲಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ವಿವರಿಸಿದರು. ಇದರಲ್ಲಿ ಉನ್ನತ ರೆಸಲ್ಯೂಷನ್ ಕ್ಯಾಮೆರಾ, ಸಂವೇದಕಗಳು, ಬುದ್ಧಿವಂತಿಕೆಯಿಂದ ರೂಪುಗೊಂಡ ಯಂತ್ರಾಂಗಗಳು ಸೇರಿವೆ. ಈ ರೋಬೋ ಶ್ವಾನ ತನ್ನ ಪಂಜದ ಮೂಲಕ ಆಟಗಾರರಿಗೆ ಕೈಕೊಟ್ಟರೆಂಬುದು ಎಲ್ಲರ ಗಮನ ಸೆಳೆಯಿತು. ಕ್ರೀಡಾಂಗಣದಲ್ಲಿ ಉಂಟಾದ ಆ ಖುಷಿಯ ವಾತಾವರಣ ವಿಶೇಷವಾಗಿ ಅಭಿಮಾನಿಗಳಿಗೂ ತಲುಪಿತು.

ಈ ಯಂತ್ರ ಶ್ವಾನ ತನ್ನದೇ ಆದ ನಟನೆಗಳಿಂದ ಗಮನ ಸೆಳೆದಿದ್ದು, ಡ್ಯಾನಿ ಮಾರಿಸನ್ ಅವರಿಗೆ ‘ಲವ್ ಪೋಸ್’ ನೀಡಿದ ಕ್ಷಣ ಎಲ್ಲರ ಮುಖದಲ್ಲೂ ನಗು ಮೂಡಿಸಿತು. ಈ ವಿನೂತನ ತಂತ್ರಜ್ಞಾನವನ್ನು ಕಂಡು ಕ್ರಿಕೆಟ್ ಪ್ರೇಮಿಗಳು ಸಹ ಖುಷಿಪಟ್ಟರು. ಪ್ರಸಾರದಲ್ಲಿ ಹೊಸ ಆಯಾಮ ನೀಡುವ ಈ ಯಂತ್ರದ ಬಳಕೆಯನ್ನು ಮೆಚ್ಚಿದ ಮಾರಿಸನ್, “ಇದು ಕ್ರೀಡಾ ಜಗತ್ತಿನಲ್ಲಿ ತಂತ್ರಜ್ಞಾನದ ಹೊಸ ಯುಗದ ಪ್ರಾರಂಭ” ಎಂದು ಭಾವೋದ್ರೇಕದಿಂದ ಹೇಳಿದರು.

ಇಷ್ಟೆ ಅಲ್ಲದೆ, ಈ ರೋಬೋ ಶ್ವಾನಕ್ಕೆ ಅಭಿಮಾನಿಗಳೇ ಹೊಸ ಹೆಸರು ಸೂಚಿಸುವಂತೆ ಸೂಚನೆ ನೀಡಲಾಗಿದ್ದು, ಅತ್ಯುತ್ತಮ ಹೆಸರನ್ನು ಶಿಫಾರಸು ಮಾಡುವ ಅಭಿಮಾನಿಗೆ ಐಪಿಎಲ್ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ ಎಂಬ ಘೋಷಣೆಯೂ ಮರೆಯಲಾಗದು.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version