IPLನಲ್ಲಿ ಬೆರೆತು ಹೋದ ಒಂದು ಹೆಸರು ಕಾವ್ಯಮಾರನ್. ಈಕೆಯ ಸೌಂದರ್ಯಕ್ಕೆ, ಮೋಹಕ ನಗುವಿಗೆ ಸೋಲದವರೇ ಇಲ್ಲ ಕಣ್ರಿ. ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ ನಿಜ. ಸನ್ರೈಸರ್ಸ್ ತಂಡದ ಮಾಲಕಿ ಕಾವ್ಯಮಾರನ್ಗೂ ಸಪರೇಟ್ ಫ್ಯಾನ್ಸ್ ಬೇಸ್ ಇದೆ. ಈ ಚೆಲುವಾಗಿ ಸ್ಟೇಡಿಯಂನಲ್ಲಿ ದ್ರೆ ಅಭಿಮಾನಿಗಳಿಗಂತೂ ಖುಷಿಯೋ ಖುಷಿ. ಮೈದಾನದ LEDಯಲ್ಲಿ ಕಾವ್ಯಮಾರನ್ ಕಂಡುಬಿಟ್ರೆ ಪಡ್ಡೆಗಳು ಹುಚ್ಚೆದ್ದು ಕುಣಿತಾರೆ. ಅಷ್ಟಕ್ಕೂ ಈ ಬೆಡಗಿ ಕಾವ್ಯಮಾರನ್ ಯಾರ್ ಗೊತ್ತಾ..? ಇಲ್ಲಿದೆ ನೋಡಿ.
ಕಾವ್ಯಮಾರನ್.. ವರ್ಷಕ್ಕೊಮ್ಮೆ ದರ್ಶನ ನೀಡುವ ಸೌಂದರ್ಯದ ಖನಿ. ಕನಸಿನಲ್ಲೂ ಕಾಡುವ ಡ್ರೀಮ್ಗರ್ಲ್..ಕಲ್ಲನ್ನೂ ಕರಗಿಸೋ ಆ ಕಣ್ಣೋಟ..ಮೈ ಮರೆಸುವ ಮುಗ್ಧ ನೋಟ..ಮೋಡಿ ಮಾಡುವ ಆ ನಗು..ಇದೆಲ್ಲಾದ್ರಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸೋ ಚೆಲುವಾಂಗಿ ಚೆಲುವೆ ಈಕೆ.
ನಡೆದಾಡೋ ಗುಲಾಬಿ ಹೂವಿನಂಗಿರೋ ಕಾವ್ಯ ಮಾರನ್ ಐಪಿಎಲ್ ಇದ್ದಷ್ಟು ದಿನ ಕಾಣಿಸ್ತಾರೆ. ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ಯುವಕರ ಎದೆಯಲ್ಲಿ ರಂಗೋಲಿ ಬಿಡ್ತಾರೆ. ಸನ್ರೈಸರ್ಸ್ ಹೈದರಾಬಾದ್ ಆಟಗಾರರಿಗೆ ವೀಕ್ಷಕರ ಗ್ಯಾಲರಿಯಲ್ಲಿ ನಿಂತು ಹುರಿದುಂಬಿಸ್ತಾರೆ. ತಂಡ ಗೆದ್ದಾಗ ಮಳೆ ಬಂದಾಗ ನವಿಲು ನಾಟ್ಯ ಮಾಡುವಂತೆ ನಿಂತಲ್ಲೇ ಕುಣಿದು ಕುಪ್ಪಳಿಸ್ತಾರೆ. ತಂಡ ಸೋತುಬಿಟ್ರೆ ಈಕೆ ಮುಖದಲ್ಲಿ ಕಾಣುವ ಬೇಸರ ಗಂಡಹೈಕಳ ಕರಳು ಕಿವುಚುದಂತಾಗುತ್ತೆ. ಅಷ್ಟರ ಮಟ್ಟಿಗೆ ಅಭಿಮಾನಿಗಳು ಕಾವ್ಯಮಾರನ್ ನನ್ನ ಪ್ರೀತಿಯಿಂದ ನೋಡ್ತಾರೆ. ಕಾವ್ಯ ಪಾಪ ಅಂತಲೇ ಕರೆಯುತ್ತಾರೆ.
ಕಾವ್ಯ ಮಾರನ್ ಸನ್ರೈಸರ್ಸ್ ತಂಡದ ಸಿಇಓ ಅಂತ ಮಾತ್ರ ಗೊತ್ತು. ಆದ್ರೆ ಈಕೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಏಕೈಕ ಪುತ್ರಿ ಅಂತ ಅಷ್ಟಾಗಿ ಗೊತ್ತಿಲ್ಲ. ಇವರದ್ದು ಭಾರತದಲ್ಲಿ ದೊಡ್ಡ ದೂರದರ್ಶನ ಜಾಲ ಹೊಂದಿರುವ ಸನ್ ಟಿವಿ ನೆಟ್ವರ್ಕ್ಸ್ 32 ಟಿವಿ ಚಾನೆಲ್ಗಳು ಮತ್ತು 45 ಎಫ್ಎಂ ರೇಡಿಯೋ ಸ್ಟೇಶನ್ಗಳನ್ನು ಹೊಂದಿದೆ. ಪ್ರಭಾವಿ ಮನೆತನದ ಕುಡಿಯಾಗಿರೋ ಕಾವ್ಯಮಾರನ್ ವಾರ್ವಿಕ್ ಬ್ಯುಸಿನೆಸ್ ಸ್ಕೂಲ್ನಿಂದ ಎಂಬಿಎ ಮಾಡಿದ್ದಾರೆ. ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದ್ರು. 2018ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಓ ಆಗಿ ನೇಮಕರಾದ್ರು.
ಕಾವ್ಯ ಮಾರನ್ ಕೆಲ ವರ್ಷಗಳಿಂದ ಐಪಿಎಲ್ ಹರಾಜು ಪ್ರಕ್ರಿಯೆಲ್ಲಿ ಕಾಣಿಸಿಕೊಳ್ತಿದ್ದಾರೆ. ಯಾರನ್ನ ಖರೀದಿ ಮಾಡ್ಬೇಕು..? ಯಾರಿಗೆ ಎಷ್ಟು ಕೋಟಿ ಬಿಡ್ ಮಾಡ್ಬೇಕು..? ಯಾವ ಆಟಗಾರನನ್ನ ಬಿಟ್ಟುಕೊಡ್ಬೇಕು..? ಅಂತ ಪರಿಣಿತಿ ಹೊಂದಿದ್ದಾರೆ. ಅದಕ್ಕೆ ಎಕ್ಸಾಂಪಲೇ ಇಶಾನ್ ಕಿಶಾನ್. ಮೊದಲ ಶತಕದಲ್ಲೇ ಡಬಲ್ ಸೆಂಚೂರಿ ಬಾರಿಸಿದ್ದ ಇಶಾನ್ ಕಿಶಾನ್ನ ಮುಂಬೈ ಇಂಡಿಯನ್ಸ್ ಖರೀದಿ ಮಾಡ್ಲಿಲ್ಲ. ಪಾಕೆಟ್ ಡೈನಮೋ ಇಶಾನ್ ಕಿಶಾನ್ ಮೇಲೆ ಕಾವ್ಯಮಾರನ್ಗೆ ಸಾಕಷ್ಟು ನಂಬಿಕೆಯಿತ್ತು. ಇದೇ ಕಾರಣಕ್ಕೆ 11.15 ಕೋಟಿಗೆ ಖರೀದಿ ಮಾಡಿದ್ರು. ಕಾವ್ಯ ಮಾರನ್ ನಂಬಿಕೆಗೆ ಇಶಾನ್ ಕಿಶಾನ್ ಮೋಸ ಮಾಡ್ಲಿಲ್ಲ. ಈ ಸೀಸನ್ ಮೊದಲ ಪಂದ್ಯದಲ್ಲೇ ಐಪಿಎಲ್ನಲ್ಲಿ ಮೊದಲ ಸೆಂಚುರಿ ಬಾರಿ ಕಾವ್ಯ ಮಾರನ್ ಕುಣಿದು ಕುಪ್ಪಳಿಸುವಂತೆ ಮಾಡಿದ್ರು.
ಸನ್ರೈಸರ್ಸ್ ಹೈದರಾಬಾದ್ ಮ್ಯಾಚ್ ಇದ್ದಾಗೆಲ್ಲಾ ಕಾವ್ಯಮಾರನ್ ಅಭಿಮಾನಿಗಳಿಗೆ ದರ್ಶನ ನೀಡ್ತಾರೆ. ಮ್ಯಾಚ್ ಮುಗಿಯೋವರ್ಗು ವೀಕ್ಷಕರ ಗ್ಯಾಲರಿಯಲ್ಲಿ ಈ ಗಾರ್ಜಿಯಸ್ ಬ್ಯೂಟಿ ಕೂತಿರ್ತಾರೆ. ಗೆದ್ದಾಗ ಜಾಸ್ತಿ ಹಿಗ್ಗದೆ, ಸೋತಾಗ ಕುಗ್ಗದೆ ಆಟಗಾರರಿಗೆ ಪ್ರೋತ್ಸಾಹ, ಹುಮ್ಮಸ್ಸು ನೀಡ್ತಾರೆ. ಇನ್ನು ಕಾವ್ಯಮಾರನ್ ಸೌಂದರ್ಯದಲ್ಲಿ ಎಷ್ಟು ಶ್ರೀಮಂತೆನೋ, ನಿಜ ಜೀವನದಲ್ಲೂ ಈಕೆ ಶ್ರೀಮಂತೆ. ಸುಮಾರು 50 ಮಿಲಿಯನ್ ಡಾಲರ್ ಒಡತಿಯಾಗಿದ್ದಾರೆ. ಭಾರತೀಯ ಕರೆನ್ಸಿ ಪ್ರಕಾರ ಕಾವ್ಯಮಾರನ್ 409 ಕೋಟಿ ಅಂತ ಹೇಳಲಾಗುತ್ತೆ.
ಸುಂದರಿ ಕಾವ್ಯಮಾರನ್ಗೆ ಕ್ರಿಕೆಟ್ ಮೇಲಷ್ಟೇ ಅಲ್ಲ. ಕಾರುಗಳ ಮೇಲೂ ಸಖತ್ ಕ್ರೇಜ್ ಇದೆ. ಈಕೆಯ ಕಾರು ಸೆಲೆಕ್ಷನ್ನಲ್ಲಿ ದುಬಾರಿ ಹಾಗೂ ಅತ್ಯಂತ ಐಷರಾಮಿ ಕಾರುಗಳಿವೆ. 10 ಕೋಟಿ ಬೆಲೆ ಬಾಳುವು ರೋಲ್ಸ್ ರಾಯ್ಸ್ ಫ್ಯಾಂಟಮ್, ಬೆಂಟ್ಲಿ ಬೆಂಟೆಗಾ, BMW 760LI ನಂತರ ದುಬಾರಿ ಕಾರ್ಗಳಿವೆ.
ಕಾವ್ಯಾ ಮಾರನ್ ಈಗ ಅತಿ ಜನಪ್ರಿಯತೆ ಹೊಂದಿರುವ ವ್ಯಕ್ತಿ. ಕೆಲ ವರ್ಷಗಳ ಹಿಂದೆ ಕಾವ್ಯಮಾರನ್ ಮೊದಲ ಬಾರಿ ವೈರಲ್ ಆಗಿದ್ರು. ಅಲ್ಲಿಂದಾಚೆಗೆ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಯಾವ ಹೀರೋಹಿನ್ಗೂ ಇಲ್ಲದ ಅಭಿಮಾನಿಗಳ ಬಳಗ ಈಕೆ ಸೌಂದರ್ಯಕ್ಕಿದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಸನ್ರೈಸರ್ಸ್ ಸುಂದರಿ ಕಾವ್ಯಮಾರನ್ ಯುವಕರ ಪಾಲಿಗೆ ಸೌಂದರ್ಯ ದೇವತೆ. ಆರೆಂಜ್ ಆರ್ಮಿಯ ಅಪ್ಸರೆ.