ರಾಮ್ ಬಡಿಗೇರ್…ಸ್ಪೋರ್ಟ್ಸ್ ಬ್ಯೂರೋ…ಗ್ಯಾರಂಟಿ ನ್ಯೂಸ್
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆದು, ಫೈನಲ್ ತಲುಪಿದೆ ನಮ್ಮ ಭಾರತ…ಫೈನಲ್ ತಲುಪೋದಕ್ಕೆ ಭಾರತ ತಂಡ ಒಗ್ಗಟ್ಟಿನ ಪ್ರದರ್ಶನದ ಜೊತೆಗೆ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಅವರ ಜವಾಬ್ಧಾರಿಯುತ ಆಟವು ಪ್ರಮುಖವಾಗಿತ್ತು….ಮ್ಯಾಚ್ ಫಿನಿಶ್ ಮಾಡಿದ ನಂತರ ರಾಹುಲ್ ಮಾಡಿದ ಸೆಲೇಬ್ರೇಷನ್ ಹೆಂಗಿತ್ತು ಅಂದ್ರೆ ಆತನಿಗೆ ಆದ ಅವಮಾನ, ಟೀಕೆಗಳಿಗೆ ಉತ್ತರ ಕೊಟ್ಟಂಗಿತ್ತು….
ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯ ಮುಗಿದ ಬಳಿಕ… ಕಾಮೆಂಟೆಟರ್ ಹರ್ಷಾ ಬೋಗ್ಲೆ ಒಂದು ಮಾತು ಹೇಳ್ತಾರೆ… ನಿಮ್ಮ ಹೆಸರು ರಾಹುಲ್ ಆಗಿದ್ದರೆ, ನೀವು ಕರ್ನಾಟಕದವರಾಗಿದ್ದರೆ, ತಂಡಕ್ಕೆ ನೀವು ಎಲ್ಲವನ್ನೂ ಕೊಡುತ್ತಿರಿ ಎಂದು… ಅವರ ಮಾತಿನ ತೂಕ ಎಂಥದ್ದು ಅಂತ ಕ್ರಿಕೆಟ್ ಜಗತ್ತಿಗೆ ಈಗಾಗಲೇ ಗೊತ್ತಾಗಿದೆ… ಹೌದು ನಿಮಗೆ ಅರ್ಥ ಆಗಿಲ್ಲ ಅಂದ್ರೆ ಮುಂದೆ ನೋಡಿ…
ಆಡು ಮುಟ್ಟದ ಸೊಪ್ಪಿಲ್ಲ… ತಂಡದಲ್ಲಿ KL ರಾಹುಲ್ ನಿಭಾಯಿಸದ ಜವಾಬ್ದಾರಿ ಇಲ್ಲ…. ಹೌದು ನಮ್ಮ KL ರಾಹುಲ್ ವಿಕೆಟ್ ಕೀಪಿಂಗ್ ಮಾಡು ಅಂದರೆ ಅದಕ್ಕೂ ರೆಡಿ…ಇನ್ನಿಂಗ್ಸ್ ಓಪನ್ ಮಾಡು ಅಂದ್ರೆ ರೆಡಿ.. ಕೆಳ ಕ್ರಮಾಂಕದಲ್ಲಿ ಆಡುತ್ತಿಯಾ ಅಂದ್ರೆ ರೆಡಿ..ಫಿನಿಷರ್ ರೊಲ್ ನಿಬಾಯಿಸ್ತಿಯಾ ಅಂದ್ರೆ ಅದಕ್ಕೂ ರೆಡಿ ಅಂತಾರೆ ನಮ್ಮ ಹುಡುಗ ರಾಹುಲ್…
ಇದೇ ರೀತಿ ದಿ ವಾಲ್ ಖ್ಯಾತಿಯ, ನಮ್ಮ ಕನ್ನಡದ ಹೆಮ್ಮೆ ರಾಹುಲ್ ದ್ರಾವಿಡ್ ಕೂಡ ತಂಡಕ್ಕಾಗಿ ಎಲ್ಲವನ್ನೂ ಮಾಡಿದ್ದಾರೆ.. ಈ ಇಬ್ಬರು ರಾಹುಲ್‌ಗಳನ್ನ ನೆನಪಿಸಿಕೊಂಡೆ ಕಾಮೆಂಟೆಟರ್ ಹರ್ಷಾ ಬೋಗ್ಲೆ ಆ ಮಾತನ್ನ ಹೇಳಿರೋದು…
ಭಾರತ ಕ್ರಿಕೆಟ್ ತಂಡಕ್ಕೆ ಕನ್ನಡಿಗರ ಕೊಡುಗೆ ಅಪಾರವಾದದ್ದು… ಅದರಲ್ಲಿ ಎರಡು ಮಾತಿಲ್ಲ ಬಿಡಿ.. ಆದರೆ ಅದ್ಯಾಕೋ ಏನೊ, ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕು ಅಂದ್ರೆ ಕರ್ನಾಟಕದ ಪ್ಲೇಯರ್ಸ್ ಪಡಬಾರದ ಪಾಡು ಅನುಭವಿಸಬೇಕು… ಹಂಗುಹಿಂಗು ಮಾಡಿ ಸ್ಥಾನ ಸಿಕ್ಕರೂ ಆಡಿದ ಒಂದೇ ಪಂದ್ಯಕ್ಕೆ ಅವರ ಅರ್ಹತೆ ಬಗ್ಗೆ ಮಾತಾಡಿ , ಕುಗ್ಗಿಸುವ ಪ್ರಯತ್ನವು ನಡೆಯುತ್ತೆ…
ಹೌದು… ಭಾರತ ಕ್ರಿಕೆಟ್ ತಂಡದಲ್ಲಿ ಉತ್ತರ ಭಾರತದವರದ್ದೆ ಪಾರುಪತ್ಯ ಹೆಚ್ಚು… ಅಂತಹವರ ಮುಂದೆ ಎದೆ ಸೆಟಿಸಿ ನಿಂತದ್ದು ನಮ್ಮ KL ರಾಹುಲ್…. ಅದೆಷ್ಟೋ ಅವಮಾನಗಳು, ಟೀಕೆಗಳನ್ನ ನುಂಗಿ, ಟೀಕಿಸಿದವರಿಗೆಲ್ಲ ತನ್ನ ಆಟದ ಮೂಲಕವೇ ಉತ್ತರ ಕೊಟ್ಟು ಬಾಯಿ ಮುಚ್ಚಿಸುವ ತಾಖತ್ತು ತೋರಿಸಿದ್ದು ವೀರ ಕನ್ನಡಿಗ ರಾಹುಲ್…
ಕ್ರಿಕೆಟ್ ಅಂದ್ರೆ ನಿಸ್ವಾರ್ಥ ಆಟ… ತಂಡಕ್ಕಾಗಿ ಎಲ್ಲವನ್ನು ಮಾಡುವುದು ನಿಜವಾದ ನಿಸ್ವಾರ್ಥತೆ… ತನ್ನ ತಂಡದ ಮತ್ತೊಬ್ಬ ಆಟಗಾರ ಸೆಂಚುರಿ ಬಾರಿಸಿದಾಗ ಅವರಿಗಿಂತ ಹೆಚ್ಚು ಸೆಲೆಬ್ರೇಷನ್ ಮಾಡುವವನು ನಿಸ್ವಾರ್ಥಿ.. ತನ್ನ ಸಹ ಆಟಗಾರ ಔಟ್ ಆದಾಗ ಫೀಲ್ ಮಾಡಿಕೊಳ್ಳುವವನು ನಿಜವಾದ ನಿಸ್ವಾರ್ಥಿ ಆಟಗಾರ…. ಈ ಎಲ್ಲದಕ್ಕೂ ಹೇಳಿಮಾಡಿಸದಂಗಿದ್ದಾರೆ ನಮ್ಮ KL ರಾಹುಲ್…..ಆದರೆ ಇಂತಹ ನಿಸ್ವಾರ್ಥ ಆಟಗಾರನಿಗೆ ನ್ಯಾಯವಾಗಿ ಸಿಗಬೇಕಾಗಿರುವುದು ಸಿಗುತ್ತಿದೆಯೆ..? ಅವಕಾಶ ಎಷ್ಟು ಸಿಕ್ಕಿದೆ ಅನ್ನೋದನ್ನ ಬಿಡಿ… ಕನಿಷ್ಠ ಗೌರವ..?
ಯಾಕೆ ಈ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಅಂದ್ರೆ ಆಸ್ಟ್ರೇಲಿಯಾ ವಿರದ್ಧ ಸೆಮಿಫೈನಲ್ ಪಂದ್ಯದಲ್ಲಿ ಸಿಕ್ಸ್ ಬಾರಿಸಿ ಮ್ಯಾಚ್ ಫಿನಿಷ್ ಮಾಡಿದ ಬಳಿಕ ರಾಹುಲ್ ಆಡಿದ ಆ ಒಂದು ಮಾತಿಗೆ…ಹೌದು ಆ ಮಾತು ಏನಂದ್ರೆ ಪ್ರತೀ ಬಾರಿ ಬೇರೆಬೇರೆ ಸರಣಿಗಳಿಗಾಗಿ ತಂಡದ ಆಯ್ಕೆ ಆಗುವಾಗ ಅಲ್ಲೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತೆ.. ’ ಓಹ್ ಇವನು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ತಾನಾ..?, ಯಾವ ಸ್ಥಾನಕ್ಕೆ ಇವನು ಫಿಟ್ ಆಗ್ತಾನೆ ಎಂದು..ಆದರೂ ಕೂಡ ನಾನು ತಂಡದಲ್ಲಿ ಇನ್ನು ಏನೇನು ಮಾಡಬೇಕು ಎಂದು ನನಗೆ ನಾನೇ ಪ್ರಶ್ನಿಸಿಕೊಂಡಿದ್ದೇನೆ.. ಯಾವ ಕ್ರಮಾಂಕದಲ್ಲಿ ಆಡು ಎಂದರು ಆಡಿದ್ದೇನೆ..ನನ್ನ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂದು ರಾಹುಲ್ ಹತಾಶರಾಗಿ ಮಾತನಾಡಿರೋದು..
ಕಾರಣ ಇಷ್ಟೆ… ರಾಹುಲ್ ನೊಂದಿದ್ದಾರೆ… ಯಾಕಂದ್ರೆ ಭಾರತ ತಂಡದಲ್ಲಿ ಬೇರ್ಯಾರಿಗೂ ಇಲ್ಲದ ನ್ಯಾಯ, ಬೇರೆ ಯಾರ ಮೇಲೂ ಇಲ್ಲದ ಪ್ರಯೋಗ ರಾಹುಲ್ ಮೇಲೆ ಮಾತ್ರ ಯಾಕೆ..? ಮಾಡು ಅಂದಿದ್ದನ್ನ ಮಾಡುವ ಪಾಪದ ಹುಡುಗ ರಾಹುಲ್..ಯಾರ ನಿರ್ಧಾರವನ್ನು ಪ್ರಶ್ನಿಸುವವನಲ್ಲ.. ಎಷ್ಟಾದರೂ ರಾಹುಲ್ ದ್ರಾವಿಡ್ ಆವರನ್ನ ಆದರ್ಷವಾಗಿ ಇಟ್ಟುಕೊಂಡವನಲ್ಲವೇ..?
ಆದ್ರೆ ಏನ್ ಮಾಡೋದು..? ಪ್ರತೀ ಪಂದ್ಯವನ್ನ ರಾಹುಲ್ ಒತ್ತಡದಲ್ಲಿಯೇ ಆಡುತ್ತಾರೆ, ಆಡುವಂತೆ ಮಾಡಿದ್ದಾರೆ.. ಒಂದು ವೈಫಲ್ಯಕ್ಕೂ ಕಲ್ಲೇಟು ತಿನ್ನುವ ಭಯದ ಜೊತೆ ಬಲಿಪೀಠದಲ್ಲಿ ಕುಳಿತುಕೊಳ್ಳಲು ಸಿದ್ಧನಿರಬೇಕು ..….ಇದರ ಮಧ್ಯೆ ದ್ವೇಷ ಬೇರೆ… ಇವೆಲ್ಲವನ್ನು ಸಹಿಸಿಕೊಳ್ಳುತ್ತಾನೆ..ಹಲ್ಲುಕಚ್ಚಿ ಆಡುತ್ತಾನೆ… ಯಾಕಂದ್ರೆ ಅವನು ರಾಹುಲ್……
ಇನ್ನಾದ್ರು ಕೆಎಲ್ ರಾಹುಲ್ ಭವಿಷ್ಯ ಬದಲಾಗುತ್ತಾ..? ಎನ್ನುವುದರ ಜೊತೆಗೆ ಟೀಮ್ ಇಂಡಿಯಾದಲ್ಲಿ ರಾಹುಲ್‌ಗೆ ಸಿಗಬೇಕಾದ ಗೌರವ ಸಿಕ್ಕಿ, ಒಂದೇ ಕ್ರಮಾಂಕದಲ್ಲಿ ಆಡುವ ಅವಕಾಶ ದೊರೆಯಲಿ ಅನ್ನೋದೆ ಕನ್ನಡಿಗರ ಆಶಯ…..
ರಾಮ್ ಬಡಿಗೇರ್…ಸ್ಪೋರ್ಟ್ಸ್ ಬ್ಯೂರೋ…ಗ್ಯಾರಂಟಿ ನ್ಯೂಸ್