ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಿದ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಕರ್ನಾಟಕದ ಕಲಾ ರತ್ನ ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆಗೆ ವಿಶೇಷ ಗೌರವ ಸಲ್ಲಿಸಿತು. ಪುನೀತ್ ಅವರ 50ನೇ ಜನ್ಮದಿನದಂದು ನಡೆದ ಈ ಕಾರ್ಯಕ್ರಮದಲ್ಲಿ ಅವರ ನಟ ಶಿವರಾಜ್‌ಕುಮಾರ್ ಹಾಜರಿದ್ದರು. ಗಾಯಕ ವಿಜಯಪ್ರಕಾಶ್ “ಬೊಂಬೆ ಹೇಳುತೈತೆ” ಹಾಡಿನ ಮೂಲಕ ಪುನೀತ್ ಅವರ ಸಾಧನೆಗೆ ಗೌರವ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳನ್ನು ಮನರಂಜಿಸಿದರು.
ಐಪಿಎಲ್ 2025 ಮಾರ್ಚ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯ ಮೇ 25ರಂದು ಅದೇ ಮೈದಾನದಲ್ಲಿ ನಡೆಯಲಿದೆ. ಆರ್‌ಸಿಬಿ ತಂಡ ತನ್ನ ಮೊದಲ ಹೋಮ್ ಪಂದ್ಯವನ್ನು ಮಾರ್ಚ್ 28ರಂದು ಚೆನ್ನೈ ಸೂಪರ್ ಕಿಂಗ್ಸ್‌ನ ವಿರುದ್ಧ ಆಡಲಿದೆ.
ಕನ್ನಡತನದ ಜಯಗೀತೆ:
ಆರ್‌ಸಿಬಿಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಆರ್‌ಸಿಬಿ ಕನ್ನಡವನ್ನು ಬಳಸುತ್ತಿಲ್ಲ. ಕನ್ನಡಿಗರನ್ನು ಪ್ರತಿನಿಧಿಸುತ್ತಿಲ್ಲ ಎಂದು ಆನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ಆದರೆ ಈ ಬಾರಿ ಆರ್‌ಸಿಬಿ ಆ ತಪ್ಪು ಮಾಡಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಪ್ಲೇ ಮಾಡಿದ್ದಾರೆ. ಅಲ್ಲದೆ ಕರುನಾಡ ರಾಜರತ್ನ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಗೌರವವನ್ನು ಸಹ ಸಲ್ಲಿಸಿದ್ದಾರೆ.
ಇವೆಲ್ಲದರ ಜೊತೆಗೆ ಮೈದಾನದಲ್ಲಿ ಕನ್ನಡದ ಬಾವುಟ ಕೂಡ ರಾರಾಜಿಸಿದೆ. ಗಾಯಕ ಆಲ್ ಓಕೆ ಕನ್ನಡ ಹಾಡು ಹಾಡುತ್ತಿದ್ದಂತೆ ಚಿನ್ನಸ್ವಾಮಿ ಮೈದಾನದಲ್ಲಿ ಕೆಂಪು ಮತ್ತು ಹಳದಿ ಧ್ವಜ ಕಾಣಿಸಿಕೊಂಡಿದ್ದು, ಆರ್‌ಸಿಬಿ ಫ್ರಾಂಚೈಸಿಯ ಈ ನಡೆಗೆ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕನ್ನಡ ಧ್ವಜವನ್ನು ಹಾರಿಸಿದಕ್ಕೆ ಹಲವರು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ: ಕೊಹ್ಲಿ ಹೇಳಿದ್ದೇನು?
ಆರ್‌ಸಿಬಿಯ ಕನ್ನಡ ಪ್ರೀತಿಗೆ ಅಭಿಮಾನಿಗಳು ಹಲವಾರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. “ಆರ್‌ಸಿಬಿ ಇದು ಕನ್ನಡದ ತಂಡ!” ಎಂಬ ಸಂದೇಶಗಳು ಟ್ರೆಂಡ್ ಆಗಿವೆ.
ಆರ್‌ಸಿಬಿಯ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಆರ್‌ಸಿಬಿ ದತ್ತು ಪುತ್ರ ವಿರಾಟ್ ಕೊಹ್ಲಿ ತಂಡದ ನಾಯಕರಾಗಿರುವ ರಜತ್ ಪಟಿದಾರ್ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದರು. ಇದೇ ವೇಳೆ ನೂತನ ನಾಯಕನ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಈ ತಂಡವನ್ನು ದೀರ್ಘಕಾಲದವರೆಗೆ ಮುನ್ನಡೆಸಲಿದ್ದಾರೆ. ಅವರಿಗೆ ನೀವು ಸಾಧ್ಯವಾದಷ್ಟು ಪ್ರೀತಿ ನೀಡಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ.
ತಂಡದ ಹೊಸ ಚೈತನ್ಯ:
ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಭುವನೇಶ್ವರ್ ಕುಮಾರ್, ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಅನುಭವಿ ಮತ್ತು ಯುವ ಕ್ರಿಕೆಟ್‌ರ್ಗಳ ಮಿಶ್ರಣವಿದೆ. 2025ರ ಐಪಿಎಲ್‌ನಲ್ಲಿ ತಂಡವು ತನ್ನ ಮೊದಲ ಚಾಂಪಿಯನ್‌ಶಿಪ್ ಗೆದ್ದುಕೊಳ್ಳಲು ಸಜ್ಜಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ.