ರೋಹಿತ್ ಶರ್ಮಾಗೆ ವಯಸ್ಸು 37 ವರ್ಷ. ಇನ್ನು ಅವರ ಕ್ರಿಕೆಟ್ ಜೀವನ ಮುಗೀತು. ರೋಹಿತ್ ಶರ್ಮಾ ಆಟದಲ್ಲಿ ಸ್ಥಿರತೆ ಇಲ್ಲ. ಒಂದ್ ಮ್ಯಾಚ್ ಆಡಿದ್ರೆ, ಐದು ಮ್ಯಾಚ್ ಆಡಲ್ಲ. ಕಡಿಮೆ ಬಾಲಿಗೆ ಜಾಸ್ತಿ ರನ್ ಹೊಡೆಯೋದು ಓಕೆ. 30-40 ರನ್ನುಗಳಿಂದ ಏನು ಲಾಭ..? ಸುದೀರ್ಘ ಇನ್ನಿಂಗ್ಸ್ ಆಡ್ತಾ ಇಲ್ಲ. ಇನ್ನು ರೋಹಿತ್ ಶರ್ಮಾಗೆ ಫಿಟ್ ನೆಸ್ ಕೂಡಾ ಇಲ್ಲ. ಕ್ಯಾಪ್ಟನ್ ಆಗಿರೋ ಕಾರಣಕ್ಕೆ ತಂಡದಲ್ಲಿದ್ದಾರೆ ಅಷ್ಟೆ.. ಒಂದಾ.. ಎರಡಾ.. ಕಂಪ್ಲೇಂಟುಗಳು. ಆದರೆ ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳ್ತಿರೋದೇ ಬೇರೆ.
ಇತ್ತೀಚೆಗೆ ರೋಹಿತ್ ಶರ್ಮಾ ಬ್ಯಾಟಿಂದ ರನ್ನುಗಳು ಬರ್ತಾ ಇಲ್ಲ. ಟೆಸ್ಟ್ ಕ್ರಿಕೆಟ್ಟಿನಲ್ಲಿ ಅವರೇ ಹಿಂದೆ ಸರಿಯುವಷ್ಟು ಫ್ಲಾಪ್ ಆಗಿದ್ದಾರೆ. ಇನ್ನು ಈಗ ನಡೀತಾ ಇರೋ ಚಾಂಪಿಯನ್ಸ್ ಟ್ರೋಫಿಯಲ್ಲೂ ಅಷ್ಟೇ. 41 ರನ್ನುಗಳೇ ಅತೀ ಹೆಚ್ಚು. 4 ಮ್ಯಾಚುಗಳಲ್ಲಿ 104 ರನ್ ಹೊಡೆದಿದ್ದಾರೆ. ಟಾಪ್ 20ಯಲ್ಲೂ ಇಲ್ಲ. 100 ಬಾಲುಗಳನ್ನೂ ಆಡೋಕೆ ಆಗಿಲ್ಲ. ಸರಾಸರಿ ಜಸ್ಟ್ 26. ಆಟ ಮುಗೀತು. ನಿವೃತ್ತಿ ಆಗ್ಬೇಕು ಎಂದವರಿಗೆ ಕೋಚ್ ಗೌತಮ್ ಗಂಭೀರ್ ಬೇರೆಯದೇ ಉತ್ತರ ಕೊಟ್ಟಿದ್ದಾರೆ.
ರೋಹಿತ್ ಶರ್ಮಾ ನಿವೃತ್ತಿ ಆಗ್ಬೇಕು ಎಂದವರಿಗೆ ಗೌತಮ್ ಗಂಭೀರ್ ಕೊಟ್ಟಿರೋ ಉತ್ತರ ಅದರ ಬಗ್ಗೆ ನಾನ್ಯಾಕ್ ಮಾತಾಡ್ಬೇಕು.. ಅನ್ನೋದು. ಅಷ್ಟಕ್ಕೇ ಸುಮ್ಮನಾಗಿಲ್ಲ. ಒಬ್ಬ ಆಟಗಾರ ವೇಗವಾಗಿ ಆಡ್ತಿದ್ದಾನೆ ಆತನ ಹತ್ತಿರ ಇನ್ನೂ ಕ್ರಿಕೆಟ್ ಇದೆ ಅಂತಾ ಅರ್ಥ. ರೋಹಿತ್ ದೊಡ್ಡ ಇನ್ನಿಂಗ್ಸ್ ಆಡಿಲ್ಲ ಅನ್ನೋದನ್ನ ನಾನೂ ಒಪ್ಪಿಕೊಳ್ತೇನೆ. ಆದರೆ ಆಡಿರೋ ಚಿಕ್ಕ ಚಿಕ್ಕ ಆಟ ಎಷ್ಟು ಪವರ್ ಫುಲ್ ಆಗಿತ್ತು ಅನ್ನೋದು ನಮಗೆ ಗೊತ್ತಿದೆ. ನೀವು ಪತ್ರಕರ್ತರು ಎಷ್ಟು ರನ್ ಹೊಡೆದ್ರು. ಆವರೇಜ್ ಎಷ್ಟು ಅಂತಾ ಅಷ್ಟೇ ನೋಡ್ತೀರಿ. ನಾವು ಆತ ಇದ್ರೆ ಎಷ್ಟು ಇಂಪ್ಯಾಕ್ಟ್ ಮಾಡ್ತಾರೆ ಅನ್ನೋದನ್ನ ನೋಡ್ತೀವಿ. ನಿವೃತ್ತಿ ಆಗ್ಭೇಕು ಅನ್ನೋದೇ ಅಪ್ರಸ್ತುತ ಎಂದಿದ್ದಾರೆ ಗೌತಮ್ ಗಂಭೀರ್.
ಗೌತಮ್ ಗಂಭೀರ್ ವಾದಕ್ಕೆ ಕಾರಣಗಳೂ ಇವೆ. ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ ಭಾರತ ಎರಡು ಐಸಿಸಿ ಟ್ರೋಫಿ ಗೆದ್ದಿದೆ. ಒಂದು ವಿಶ್ವಕಪ್, ಒಂದು ಏಷ್ಯಾ ಕಪ್ ಗೆದ್ದಿದೆ. ಎರಡು ಬಾರಿ ಟೆಸ್ಟ್ ಚಾಂಪಿಯನ್ ಶಿಪ್, ಒಂದು ವಿಶ್ವಕಪ್ ರನ್ನರ್ ಅಪ್ ಆಗಿದೆ. ದಶಕಗಳಿಂದ ಇದ್ದ ಐಸಿಸಿ ಕಪ್ ಬರವನ್ನ ನೀಗಿಸಿದ್ದು ರೋಹಿತ್ ಶರ್ಮಾ. ಇನ್ನು ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಗೂ ಮೊದ್ಲು ಒಂದು ಸೆಂಚುರಿ ಹೊಡೆದಿದ್ದಾರೆ. ಆರಂಭಿಕ ಆಟಗಾರನಾಗಿ ತಂಡದ ಆಟವನ್ನೇ ಬದಲಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬದಲಾವಣೆ ಬಗ್ಗೆ ಕೇಳೋದ್ರಲ್ಲಿ ಅರ್ಥವೇ ಇಲ್ಲ ಅನ್ನೋ ವಾದವೂ ಇದೆ.
ಇನ್ನು ರೋಹಿತ್ ಶರ್ಮಾ ಐಸಿಸಿ ಮ್ಯಾಚುಗಳಲ್ಲಿ ಗೆಲುವಿನ ಪರ್ಸಂಟೇಜ್ 93ಕ್ಕೂ ಹೆಚ್ಚು ಮತ್ತು ನಂಬರ್ ಒನ್ ಕ್ಯಾಪ್ಟನ್. ಸತತವಾಗಿ ಅತೀ ಹೆಚ್ಚು ಐಸಿಸಿ ಮ್ಯಾಚು ಗೆದ್ದ ಲೆಕ್ಕಕ್ಕೆ ಬಂದರೆ, ಅಲ್ಲೂ ನಂಬರ್ ಒನ್. ಏಕದಿನ ವಿಶ್ವಕಪ್, ಟಿ-20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಫೈನಲ್, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್.. ಎಲ್ಲ ಫೈನಲ್ ಪಂದ್ಯಗಳನ್ನೂ ಆಡಿರುವ ಏಕೈಕ ಕ್ಯಾಪ್ಟನ್. ಸ್ಸೋ.. ನಿವೃತ್ತಿ ಮಾತು ಎತ್ತಲೇಬೇಡಿ ಅಂತಿದ್ದಾರೆ ಕೋಚ್ ಗಂಭೀರ್. ಗೇಮ್ ಚೇಂಜ್ ಆಗಿದೆ.