ಐಪಿಎಲ್ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಟೂರ್ನಿಯ ಪ್ರತಿ ಆವೃತ್ತಿಯಲ್ಲಿಯೂ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿರುತ್ತಾರೆ. ಸ್ಟೇಡಿಯಂನಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಜೈಕಾರ ಕೂಗುವ, ಅವರ ಆಟವನ್ನು ನೋಡಲು ದಿನಗಣನೆಯಲ್ಲಿರುವ ಅಭಿಮಾನಿಗಳ ನಿರೀಕ್ಷೆಗಳು ಇವೆ. ಈ ಬಾರಿ ಐಪಿಎಲ್‌ನಲ್ಲಿ ಮಿಂಚಲು ಸಜ್ಜಾಗಿರುವ ಟಾಪ್ 10 ಭಾರತೀಯ ಕ್ರಿಕೆಟಿಗರ ಬಗ್ಗೆ ತಿಳಿಯೋಣ.
1. ಕಿಂಗ್ ವಿರಾಟ್ ಕೊಹ್ಲಿ (RCB)
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯೆಂದರೆ ಒಂದು ಭರವಸೆ. ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಈ ಬಾರಿಯೂ ಆರ್‌ಸಿಬಿ ಪರ ಆಡಲು ಸಜ್ಜಾಗಿದ್ದಾರೆ. 18 ವರ್ಷಗಳಿಂದ ಆರ್‌ಸಿಬಿಯಲ್ಲೇ ಇರುವ ಕೊಹ್ಲಿ, ಈ ಬಾರಿಯೂ ತಮ್ಮ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡಲು ಕಸರತ್ತು ಮಾಡುತ್ತಿದ್ದಾರೆ. ಐಪಿಎಲ್‌ನಲ್ಲಿ 8000ಕ್ಕೂ ಹೆಚ್ಚು ರನ್ ಕಲೆಹಾಕಿರುವ ವಿರಾಟ್, ಈ ಬಾರಿಯೂ ರನ್ ಹೊಳೆ ಹರಿಸಲು ಸಜ್ಜಾಗಿದ್ದಾರೆ.
2. ಎಂ.ಎಸ್. ಧೋನಿ (CSK)
44ರ ಹರೆಯದಲ್ಲೂ ಧೋನಿ ಫಿಟ್ನೆಸ್ ಅಚ್ಚಳಿಯದ ಮಟ್ಟದ್ದಾಗಿದೆ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಐಪಿಎಲ್‌ನಲ್ಲಿ ಇನ್ನೂ ನಿರಂತರ ಕ್ರೀಡಾಪಟುವಾಗಿದ್ದಾರೆ. ಐಪಿಎಲ್‌ನಲ್ಲಿ 264 ಪಂದ್ಯಗಳಲ್ಲಿ 5243 ರನ್ ಗಳಿಸಿರುವ ಧೋನಿ, ಈ ಬಾರಿ ಎಷ್ಟು ಸಿಕ್ಸರ್ ಹೊಡೆಯಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
3. ರೋಹಿತ್ ಶರ್ಮಾ (MI)
ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ನಾಯಕನಾದ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಪರ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. 2024ರಲ್ಲಿ ರೋಹಿತ್ ಶರ್ಮಾ 417 ರನ್ ಕಲೆಹಾಕಿದರು, ಆದರೆ ಮುಂಬೈ ತಂಡ ಕೊನೆ ಸ್ಥಾನಿಯಾಗಿತ್ತು. ಈ ಬಾರಿಯೂ ಮುಂಬೈನಿಗೆ ಮತ್ತೊಂದು ಟ್ರೋಫಿ ತಂದುಕೊಡಲು ರೋಹಿತ್ ಉತ್ಸುಕರಾಗಿದ್ದಾರೆ.
4. ರಿಷಭ್ ಪಂತ್ (LSG)
₹27 ಕೋಟಿಗೆ ಐಪಿಎಲ್ ಹರಾಜಿನಲ್ಲಿ ಎತ್ತರದ ಮೊತ್ತಕ್ಕೆ ಸೇರುವ ಆಟಗಾರನಾದ ರಿಷಭ್ ಪಂತ್, ಈ ಬಾರಿಯೂ ಲಖನೌ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. 2021, 2022 ಮತ್ತು 2024ರಲ್ಲಿ ಡೆಲ್ಲಿ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ ಪಂತ್, ಈ ಬಾರಿಯೂ ಆಕರ್ಷಕ ಆಟ ನೀಡುವ ನಿರೀಕ್ಷೆಯಿದೆ.
5. ಶ್ರೇಯಸ್ ಅಯ್ಯರ್ (PBKS)
2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ಗೆ ಐಪಿಎಲ್ ಕಪ್ ಗೆಲ್ಲಿಸಿಕೊಟ್ಟ ನಾಯಕ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. 2024ರ ಐಪಿಎಲ್, ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಮತ್ತು ಇರಾನಿ ಟ್ರೋಫಿ ಜಯಿಸಿದ ಶ್ರೇಯಸ್, ಈ ಬಾರಿಯೂ ಅದೇ ಮೆರುಗು ತೋರಬಹುದೇ? ಎಂದು ಕಾದುನೋಡಬೇಕಿದೆ.
6. ವೆಂಕಟೇಶ್ ಅಯ್ಯರ್ (KKR)
ಕೆಕೆಆರ್ ಪರ ಆಡುವ ವೆಂಕಟೇಶ್ ಅಯ್ಯರ್, 2024ರಲ್ಲಿ 159ರ ಸ್ಟ್ರೈಕ್ ರೇಟ್‌ನೊಂದಿಗೆ 370 ರನ್ ಕಲೆಹಾಕಿದ್ದರು. ಈ ಬಾರಿಯೂ ತಮ್ಮ ಆಲ್ರೌಂಡರ್ ಪ್ರದರ್ಶನದ ಮೂಲಕ ತಂಡಕ್ಕೆ ಕೊಡುಗೆ ನೀಡಲು ಸಜ್ಜಾಗಿದ್ದಾರೆ.
7. ಅಭಿಷೇಕ್ ಶರ್ಮಾ (SRH)
2024ರಲ್ಲಿ 484 ರನ್ ಕಲೆಹಾಕಿದ 24 ವರ್ಷದ ಯುವ ಕ್ರಿಕೆಟಿಗ ಅಭಿಷೇಕ್ ಶರ್ಮಾ, ಈ ಬಾರಿಯೂ ಸನ್‌ರೈಸರ್ಸ್ ತಂಡಕ್ಕೆ ಮಹತ್ವದ ಆಟಗಾರ. ಅವರ 204.22ರ ಸ್ಟ್ರೈಕ್ ರೇಟ್ ಅವರನ್ನು ತಂಡದ ಪ್ರಮುಖ ಆಟಗಾರರಾಗಿ ಮಾಡುತ್ತದೆ.
8. ಜಸ್‌ಪ್ರೀತ್ ಬೂಮ್ರಾ (MI)
ಜಸ್‌ಪ್ರೀತ್ ಬೂಮ್ರಾ ವರ್ಷದಿಂದ ವರ್ಷಕ್ಕೆ ತಮ್ಮ ಶ್ರೇಷ್ಠತೆ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಈ ಬಾರಿ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಗೆ ಲಭ್ಯರಿಲ್ಲ. ಹಾಗಂತ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಬುಮ್ರಾ ಅವರು ಮುಂಬೈಗೆ ಮತ್ತೊಂದು ಟ್ರೋಫಿ ಗೆಲ್ಲಿಸಿಕೊಡುವುದು ಬೂಮ್ರಾ ಮುಂದಿರುವ ಗುರಿಯಾಗಿದೆ.
9. ಅರ್ಶ್‌ದೀಪ್ ಸಿಂಗ್ (PBKS)
₹18 ಕೋಟಿ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಹರಾಜಿನಲ್ಲಿ ಪಡೆಯಲಾದ ಅರ್ಶ್‌ದೀಪ್, ಈ ಬಾರಿಯೂ ವಿಕೆಟ್ ಕಬಳಿಸಲು ಸಜ್ಜಾಗಿದ್ದಾರೆ. 2024ರಲ್ಲಿ 14 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದ ಅವರು, ಈ ಬಾರಿಯೂ ತಮ್ಮ ಉತ್ತಮ ಬೌಲಿಂಗ್ ಮೂಲಕ ತಂಡಕ್ಕೆ ಬಲ ನೀಡಲಿದ್ದಾರೆ.
10. ಯಜುವೇಂದ್ರ ಚಹಲ್ (PBKS)
ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿರುವ ಚಹಲ್, ಈ ಬಾರಿಯೂ ಪಂಜಾಬ್ ಪರ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. 160 ಪಂದ್ಯಗಳಲ್ಲಿ 205 ವಿಕೆಟ್ ಪಡೆದಿರುವ ಚಹಲ್, ತಮ್ಮ ಸ್ಪಿನ್ ಮಾಂತ್ರಿಕತೆಯಿಂದ ತಂಡಕ್ಕೆ ಮಹತ್ವದ ಕೊಡುಗೆ ನೀಡಲು ನಿರೀಕ್ಷಿಸಲಾಗಿದೆ.
ಈಗಾಗಲೇ ಕ್ರಿಕೆಟ್ ಪ್ರೇಮಿಗಳಲ್ಲಿ ಈ ಆಟಗಾರರ ಕುರಿತಾಗಿ ಅಪಾರ ನಿರೀಕ್ಷೆಯಿದೆ. ಈ ಬಾರಿಯೂ ಐಪಿಎಲ್ 2025 ರೋಚಕ ಕ್ಷಣಗಳೊಂದಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.