ವರುಣ್ ಚಕ್ರವರ್ತಿ ಎಂದರೆ ಇವತ್ತು ಎಲ್ಲರಿಗೂ ಗೊತ್ತು . ನಮ್ಮ ಟೀಂ ಇಂಡಿಯಾ ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಈತನ ಯೋಗಾಧಾನ ಬಹಳವಿದೆ. ಈತನ ಕಥೆಯೂ ಅಷ್ಟೇ ರೋಚಕವಿದೆ. ವರುಣ್ ಚಕ್ರವರ್ತಿ ಗೆ ಕ್ರಿಕೆಟ್ ಎಂದರೆ ಪ್ರಾಣ. ಆದರೆ ಆತ ಅಂಡರ್ 13, 15, 19 ಯಾವುದರಲ್ಲೂ ಸೆಲೆಕ್ಟ್ ಆಗುವುದಿಲ್ಲ. ಆದರೆ ಅವರು ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡುವ ಮೊದಲು ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು.
2014 ರಲ್ಲಿ ಬಂದ “ಜೀವ” ಅನ್ನೋ ತಮಿಳು ಸಿನಿಮಾದಲ್ಲಿ ಅವರು ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಅಲ್ಲೂ ಕೂಡ ಹೇಳಿಕೊಳ್ಳುವ ಬ್ರೇಕ್ ಸಿಕ್ಕುವುದಿಲ್ಲ. ಬಳಿಕ ಆರ್ಕಿಟೆಕ್ಟ್ ಮಾಡುತ್ತಾರೆ. ಅಲ್ಲಿ ಕೂಡ ಆರು ವರ್ಷ ಕಳೆದು ಹೋಗುತ್ತದೆ. ಅವರಿಗೆ ಅದು ಇಷ್ಟವಾಗುವುದಿಲ್ಲ. ಅವರಪ್ಪನಿಗೆ ಕರೆ ಮಾಡಿ ಕೆಲಸ ಬಿಡುತ್ತಿದ್ದೇನೆ ಎಂದು ಹೇಳಿರುತ್ತಾರೆ.
ವರುಣ್ ಚಕ್ರವರ್ತಿಗೆ ನಿಜಕ್ಕೂ ಇಷ್ಟವಿದ್ದದ್ದು ಕ್ರಿಕೆಟ್. ಮತ್ತೆ ಮರಳಿ ಟೆನಿಸ್ ಬಾಲ್ ಕ್ರಿಕೆಟ್ ಗೆ ಮರಳುತ್ತಾರೆ. ಅಲ್ಲಿ ಅವರು ಗಳಿಸಿದ ಯಶಸ್ಸು , ಅವರನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ಆ ಪರಿಶ್ರಮದ ಫಲವಾಗಿ ಇಂದು ಅವರು ಇಂಡಿಯನ್ ಟೀಂನಲ್ಲಿ ಕಾಲೂರಿ ನಿಂತಿದ್ದಾರೆ.
ಆಲ್ರೌಂಡರ್ ಆಗಿ ಟೆನಿಸ್ ಬಾಲ್ ಕ್ರಿಕೆಟ್ ಶುರು ಮಾಡಿದಾಗ ಮೊದಲಿಗೆ ವರುಣ್ ಚಕ್ರವರ್ತಿ ಮೊಣಕಾಲು ಕೈ ಕೊಡುತ್ತದೆ. ಹೀಗಾಗಿ ಅವರು ಸ್ಪಿನ್ನರ್ ಆಗಿ ರೂಪಾಂತರಗೊಳ್ಳುತ್ತಾರೆ. ಅದು ನಿಜವಾದ ಟರ್ನಿಂಗ್ ಪಾಯಿಂಟ್. ಅವರು ಆಡುತ್ತಿದ್ದ ಕ್ಲಬ್ ನಲ್ಲಿ ಯಶಸ್ಸು ಕಾಣುತ್ತಾರೆ. ಅದು ಅವರನ್ನು ತಮಿಳುನಾಡು ಪ್ರೀಮಿಯರ್ ಲೀಗ್ ಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿನ ಅವರ ಯಶಸ್ಸು ಐಪಿಎಲ್ ಬಾಗಿಲು ತೆರೆಯುತ್ತದೆ. 2021 ರಲ್ಲಿ ಅವರು ಪ್ರಥಮ ಬಾರಿಗೆ ಐಪಿಎಲ್ ಟಿ-20 ಆಡುತ್ತಾರೆ. ಅವರು ಒಂದು ದಿನದ ಆಟಕ್ಕೆ ಕಾಲಿಟ್ಟದ್ದು ಫೆಬ್ರವರಿ 2025 ರಲ್ಲಿ ! ಫಾರೂಕ್ ಇಂಜಿನಿಯರ್ ನಂತರ ಇಷ್ಟು ಹೆಚ್ಚಿನ ವಯಸ್ಸಿನಲ್ಲಿ ಇಂಡಿಯನ್ ಕ್ರಿಕೆಟ್ ಟೀಮ್ ಸೇರಿದ ಎರಡನೇ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ಯಾಟ್ಸ್‌ಮನ್‌ಗಳಿಗೆ ತಲೆನೋವು ತಂದೊಡ್ಡುವಂತಹ ವೈವಿಧ್ಯಮಯ ಬೌಲಿಂಗ್ ಶೈಲಿಯಿಂದಾಗಿ ವರುಣ್ ಬೇಗನೆ ಫೇಮಸ್ ಆದರು. 2023 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ವರುಣ್ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಅವರದಾಗಿತ್ತು.
ಬದುಕು ಎಂದರೆ ಟಿ 20 ಕ್ರಿಕೆಟ್ ಇದ್ದಹಾಗೆ ಕೊನೆಯ ಎಸೆತೆ ಎಸೆಯುವವರೆಗೂ ಆಟ ಮುಗಿಯಿತು ಎನ್ನುವಂತಿಲ್ಲ. ನಮಗೇನು ಬೇಕು ಅದರ ಬೆನ್ನು ಹತ್ತಿದರೆ ಖಂಡಿತ ಯಶಸ್ಸು ಕೂಡ ಬೆನ್ನು ಹತ್ತುತ್ತದೆ ಅನ್ನೋದಕ್ಕೆ 34 ರ ಹರಯದ ವರುಣ್ ಈ ಮಟ್ಟದ ಯಶಸ್ಸು ಕಂಡಿರುವುದೇ ಸಾಕ್ಷಿ.