RCB vs RR: ತವರಿನಲ್ಲಿ ಹೊಸ ದಾಖಲೆ ಬರೆದ ಕಿಂಗ್‌ ಕೊಹ್ಲಿ

11 2025 04 24t232527.058

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಹೈವೋಲ್ಟೇಜ್ ಪಂದ್ಯಗಳಲ್ಲಿ ಒಬ್ಬ ಸ್ಪಷ್ಟವಾದ ಸ್ಟಾರ್ ಆಟಗಾರನಾಗಿ ಮತ್ತೊಮ್ಮೆ ಮೆರೆದಿದ್ದಾರೆ ವಿರಾಟ್ ಕೊಹ್ಲಿ. ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೊಹ್ಲಿ ತಮ್ಮ ಭರ್ಜರಿ ಅರ್ಧಶತಕದ ಆಟದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಿತು. ತವರಿನ ಪ್ರೇಕ್ಷಕರ ಮಧ್ಯೆ ನಿರೀಕ್ಷೆಗಳೊಂದಿಗೆ ಮೈದಾನಕ್ಕಿಳಿದ ಆರ್‌ಸಿಬಿ ಆರಂಭಿಕ ಆಟಗಾರರು ವಿರಾಟ್ ಕೊಹ್ಲಿ ಮತ್ತು ಫಿಲಿಪ್ ಸಾಲ್ಟ್ ಆರಂಭಿಕ ಜೋಡಿಯಾಗಿ ಇಳಿದರು. ಆದರೆ, ಶೀಘ್ರದಲ್ಲೇ 26 ರನ್ ಗಳಿಸಿದ ಬಳಿಕ ಫಿಲಿಪ್ ಸಾಲ್ಟ್ ವಿಕೆಟ್ ಕಳೆದುಕೊಂಡರು.

ADVERTISEMENT
ADVERTISEMENT

ಇನ್ನು ಏಕಾಏಕಿ ಜವಾಬ್ದಾರಿಯನ್ನು ತಮ್ಮ ಹೊಣೆ ಹೊತ್ತಿದ್ದ ಕೊಹ್ಲಿ, ಎದುರಾಳಿಗಳಾದ ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳನ್ನು ಅದ್ಭುತವಾಗಿ ಎದುರಿಸಿದರು. ಯಾವುದೇ ಆತುರವಿಲ್ಲದೆ ಸ್ಥಿರತೆಯಿಂದ ಆಟವಾಡಿದ ಅವರು, ಕೇವಲ 32 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 51 ರನ್ ಗಳಿಸಿದರು. ಅವರು ಒಂದೂ ಸಿಕ್ಸರ್ ಸಿಡಿಸದೇ ಈ ಅರ್ಧಶತಕ ದಾಖಲಿಸಿದ್ದಾರೆ. ಕೊಹ್ಲಿಯ ಶ್ರೇಷ್ಠ ಬ್ಯಾಟಿಂಗ್ ಟೆಕ್ನಿಕ್ ಮತ್ತು ತಾಳ್ಮೆ ಅವರ ಇನ್‌ನಿಂಗ್ಸ್‌ನ ಪ್ರಮುಖ ಆಕರ್ಷಣೆಯಾಗಿತ್ತು.

ಇದು ಐಪಿಎಲ್ 2025 ಟೂರ್ನಿಯಲ್ಲಿ ಕೊಹ್ಲಿಗೆ ಇದೇ ಐದನೇ ಅರ್ಧಶತಕವಾಗಿದ್ದು, ಕಳೆದ 9 ಇನ್ನಿಂಗ್ಸ್‌ಗಳಲ್ಲಿ 5 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿರುವ ಅವರು ತಮ್ಮ ಸ್ಥಿರತೆ ಮತ್ತು ಶ್ರೇಷ್ಠತೆ ತೋರಿಸಿದ್ದಾರೆ. ಈ ಸಾಧನೆಯೊಂದಿಗೆ ಕೊಹ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ 50 ಪ್ಲಸ್ ಸ್ಕೋರ್ ಗಳಿಸಿರುವ ಆಟಗಾರರಲ್ಲಿ ಟಾಪ್ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ ಅವರ ರೆಕಾರ್ಡ್‌ನ್ನು ಮುರಿದು, ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಕೊಹ್ಲಿಯ ಈ ಬಾಟಿಂಗ್ ಪ್ರದರ್ಶನ ಆರ್‌ಸಿಬಿಗೆ ಮಾತ್ರವಲ್ಲದೇ ತಂಡದ ಅಭಿಮಾನಿಗಳಿಗೂ ದೊಡ್ಡ ಆತ್ಮವಿಶ್ವಾಸ ತಂದಿದೆ.

Exit mobile version