ಇಂಡಿಯನ್ ಪ್ರೀಮಿಯರ್ ಲೀಗ್ (IPL)-18 2025ರ ಹೊಸ ಸೀಸನ್‌ಗೆ ಕೇವಲ 6 ದಿನಗಳೇ ಬಾಕಿ. ಮಾರ್ಚ್ 22ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತನ್ನ ಮೊದಲ ಪಂದ್ಯವನ್ನು ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಆಡಲಿದೆ.
ಆದರೆ, ಪಂದ್ಯದ ಮುನ್ನಡೆಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಭ್ಯಾಸ ಸೆಷನ್‌ಗಳು ಈಗಾಗಲೇ ತಂಡದಲ್ಲಿ ಹೊಸ ಹುರುಪು ಮೂಡಿದೆ. ವಿರಾಟ್ ಕೊಹ್ಲಿ ಸಹ ಆಟಗಾರರೊಂದಿಗೆ ಕ್ವಾಟ್ಲೆ ಮಾಡುತ್ತಾ ಸಖತ್ ಜಾಲಿ ಮೂಡ್ನಲ್ಲಿದ್ದಾರೆ.
ವಿರಾಟ್ ಕೊಹ್ಲಿಯವರ “ಡ್ಯಾನ್ಸಿಂಗ್ ಕಿಂಗ್” ಮೂಡ್!
RCB ಅಭ್ಯಾಸ ಸೆಷನ್‌ಗೆ ಕಾಣಿಸಿಕೊಂಡ ವಿರಾಟ್ ಕೊಹ್ಲಿ, ತಂಡದ ಸದಸ್ಯರೊಂದಿಗೆ ಕ್ವಿಕ್ ಫೀಲ್ಡಿಂಗ್ ಡ್ರಿಲ್‌ಗಳು ಮತ್ತು ಬ್ಯಾಟಿಂಗ್ ಪ್ರಾಕ್ಟೀಸ್‌ನಲ್ಲಿ ತೊಡಗಿದ್ದರು. ಆದರೆ, ಅಭ್ಯಾಸದ ನಡುವೆ ಅವರು ಸಹಜವಾಗಿ ನೃತ್ಯ ಮಾಡುವ ಸನ್ನಿವೇಶದ ವಿಡಿಯೊ ವೈರಲ್ ಆಗಿದೆ. “ಕಿಂಗ್ ಕೊಹ್ಲಿ” ಅವರ ಈ ಲೈಟ್‌ಮೂಡ್‌ನನ್ನು ನೋಡಿದ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಸುರಿಮಳೆಗೆ ಒಳಗಾಗಿದ್ದಾರೆ. ಹಲವರು “ವಿರಾಟ್ ಅವರ ಈ ಎನರ್ಜಿ RCBಗೆ ಚಾಂಪಿಯನ್‌ಶಿಪ್ ತರಲಿ!”ಎಂದು ಕಾಮೆಂಟ್‌ಗಳಲ್ಲಿ ಬರೆದಿದ್ದಾರೆ.
A complete Package of Entertainment 😂❤️ pic.twitter.com/WcpxCgFeub
— Virat Kohli Fan Club (@Trend_VKohli) March 16, 2025
ಚಾಲೆಂಜಿಂಗ್ ಸ್ಟಾರ್ಟ್: RCBಯ ಮೊದಲ 4 ಪಂದ್ಯಗಳು ಚಾಂಪಿಯನ್ ತಂಡಗಳ ವಿರುದ್ಧ!
IPL 2025ರಲ್ಲಿ RCB ತಂಡವು ತನ್ನ ಮೊದಲ 4 ಪಂದ್ಯಗಳನ್ನು ಕಳೆದ ವರ್ಷದ ಚಾಂಪಿಯನ್ ಮತ್ತು ರನ್ನರ್-ಅಪ್ ತಂಡಗಳ ವಿರುದ್ಧ ಆಡಲಿದೆ. ಮಾರ್ಚ್ 22ರಂದು KKR ವಿರುದ್ಧ ಉದ್ಘಾಟನಾ ಪಂದ್ಯದ ನಂತರ, ಮಾರ್ಚ್ 28ರಂದು ಚೆನ್ನೈ ಸೂಪರ್ ಕಿಂಗ್ಸ್ (CSK), ಏಪ್ರಿಲ್ 2ರಂದು ಗುಜರಾತ್ ಟೈಟಾನ್ಸ್ (GT) ಮತ್ತು ಏಪ್ರಿಲ್ 7ರಂದು ಮುಂಬೈ ಇಂಡಿಯನ್ಸ್ (MI) ವಿರುದ್ಧ ಪಂದ್ಯಗಳಿವೆ. ಇದು RCBಗೆ ಟೂರ್ನಿಯ ಆರಂಭದಲ್ಲೇ ಒತ್ತಡವನ್ನು ನೀಡಬಹುದಾದರೂ, ವಿರಾಟ್ ಮತ್ತು ಸಹ ಆಟಗಾರರ ಪ್ರಸ್ತುತ ಫಾರ್ಮ್ ಅಭಿಮಾನಿಗಳಿಗೆ ಭರವಸೆ ನೀಡಿದೆ.
ಹೊಸ ಮುಖಗಳು, ಹಳೇ ಹಾವಭಾವಗಳು!
ಈ ವರ್ಷದ RCB ತಂಡದಲ್ಲಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಭುವನೇಶ್ವರ್ ಕುಮಾರ್ ರಂತಹ ಅನುಭವಿ ಆಟಗಾರರ ಜೊತೆಗೆ ಯಶ್ ದಯಾಳ್, ಸುಯೇಶ್ ಶರ್ಮಾ, ಮತ್ತು ನುವಾನ್ ತುಷಾರ್ ಅಂತಹ ಯುವ ಪ್ರತಿಭೆಗಳು ಸೇರಿದ್ದಾರೆ.
“ಈ ಬಾರಿ RCBಗೆ ಟ್ರೋಫಿ ಸಿಗಲೇಬೇಕು!”
15 ವರ್ಷಗಳಿಂದ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿರುವ RCB ಅಭಿಮಾನಿಗಳು, 2025 ಸೀಸನ್‌ನಲ್ಲಿ ತಂಡದ ಪ್ರದರ್ಶನ ದತ್ತ ವಿಶೇಷ ಗಮನ ಹರಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ನಾಯಕತ್ವ ಮತ್ತು ತಂಡದ ಸಮತೋಲನದಿಂದ ಈ ಬಾರಿ ಇತಿಹಾಸ ಬರೆಯಬಹುದು ಎಂಬ ನಂಬಿಕೆ ಹರಡಿದೆ. ಅಭ್ಯಾಸದ ವಿಡಿಯೊಗಳು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ.