ರೋಹಿತ್, ಕೊಹ್ಲಿ, ಜಡೇಜಾಗೆ ಬಿಸಿಸಿಐ ಡಿ-ಪ್ರಮೋಷನ್ ಶಾಕ್..!

Befunky collage 2025 03 12t144250.105

ಪ್ರಶಾಂತ್‌ ಎಸ್‌ , ಸ್ಪೇಷಲ್‌ ಡೆಸ್ಕ್‌, ಗ್ಯಾರಂಟಿ ನ್ಯೂಸ್

ಭಾರತ ಕಳೆದ ವರ್ಷ T-20 ವರ್ಲ್ಡ್ ಕಪ್ ತನ್ನದಾಗಿಸಿಕೊಂಡಿತು. T-20 ವಿಶ್ವಕಪ್ ನಂತರ ಈಗ ಚಾಂಪಿಯನ್ ಟ್ರೋಫಿಗೆ ಮುತ್ತಿಟ್ಟಿದೆ. ಭಾರತ ತಂಡದ ಈ ಸಾಧನೆಗೆ ಕಾರಣ ಕರ್ತರು ಈ ಮೂವರು ಆಟಗಾರರು. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ಕೊಹ್ಲಿ, ಆಲ್ರೌಂಡರ್ ರವೀಂದ್ರ ಜಡೇಜಾ ಎನ್ನುವ ಸ್ಟಾರ್ ಕ್ರಿಕೆಟಿಗರು ಹಾಗೂ ಟೀಂ ಇಂಡಿಯಾದ ಪಿಲ್ಲರ್‌‌‌‌ಗಳು. 2025ರ ಕೇಂದ್ರ ಒಪ್ಪಂದದ ಗುತ್ತಿಗೆ ಪಟ್ಟಿ ಬಿಡುಗಡೆಗೆ ಸಿದ್ದವಾಗಿರುವ ಬಿಸಿಸಿಐ ಈ ಮೂವರು ಆಟಗಾರರಿಗೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಆಟಗಾರರ ಜೊತೆಗಿನ 2025ರ ಕೇಂದ್ರ ಒಪ್ಪಂದಕ್ಕೆ ಬಿಸಿಸಿಐ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಕೆಲ ಮಹತ್ವದ ಬದಲಾವಣೆಗಳನನ್ನು ಮಾಡಲು ಬಿಸಿಸಿಐ ನಿರ್ಧರಿಸಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ‘ಎ’ ಪ್ಲಸ್ ಗ್ರೇಡ್ನಿಂದ ಕೆಳಗಿಳಿಸಲು ಮುಂದಾಗಿದೆ. ಟೀಂ ಇಂಡಿಯಾದ ಆಟಗಾರರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಮಾತ್ರ ‘ಎ’ ಪ್ಲಸ್ ಗ್ರೇಡ್ ಪಟ್ಟಿಯಲ್ಲಿದ್ದರು. ಮೂರು ಸ್ವರೂಪದ ಕ್ರಿಕೆಟ್ನಲ್ಲಿ ಸಕ್ರೀಯರಾದವರಿಗೆ ಮಾತ್ರ ‘ಎ’ ಪ್ಲಸ್ ಗ್ರೇಡ್ ನೀಡಲಾಗುತ್ತೆ. ರೋಹಿತ್, ವಿರಾಟ್ ಹಾಗೂ ಜಡೇಜಾ T-20 ಕ್ರಿಕೆಟ್ಗೆ ವಿದಾಯ ಹೇಳಿರುವ ಕಾರಣ ‘ಎ’ ಪ್ಲಸ್ ಗ್ರೇಡ್ ಕಾಂಟ್ರ್ಯಾಕ್ಟ್ ಕಳೆದುಕೊಳ್ಳುವ ಸಾಧ್ಯತೆ ಇದೆ.

ADVERTISEMENT
ADVERTISEMENT

ಬೌಲರ್ ಜಸ್ಪ್ರಿತ್ ಬುಮ್ರಾ ‘ಎ’ ಪ್ಲಸ್ ಗ್ರೇಡ್ನಲ್ಲೇ ಮುಂದುವರೆಲಿದ್ದಾರೆ. ರೋಹಿತ್, ಕೊಹ್ಲಿ, ಜಡೇಜಾ ಅವರನ್ನು ‘ಎ’ ಪ್ಲಸ್ ಗ್ರೇಡ್ ನಿಂದ ಕೈ ಬಿಟ್ಟು ‘ಎ’ ಗ್ರೇಡ್ಗೆ ಸೇರಿಸುವ ಮೂಲಕ ಬದಲಾವಣೆ ತರಲು ಬಿಸಿಸಿಐ ನಿರ್ಧರಿಸಿದೆ. ಬಿಸಿಸಿಐ ಒಪ್ಪಂದದ ಪ್ರಕಾರ ‘ಎ’ ಪ್ಲಸ್ ವರ್ಗದ ಆಟಗಾರರು ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ‘ಎ’ ವರ್ಗದವರು 5 ಕೋಟಿ ರೂಪಾಯಿ, ‘ಬಿ’ ವರ್ಗದವರು 3 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

ಇನ್ನು ‘ಸಿ’ ವರ್ಗದ ಕ್ರಿಕೆಟಿಗರಿಗೆ ವರ್ಷಕ್ಕೆ 1 ಕೋಟಿ ಸಿಗಲಿದೆ. ‘ಎ’ ಪ್ಲಸ್ ವಿಭಾಗದಲ್ಲಿರುವ ಕೊಹ್ಲಿ, ರೋಹಿತ್, ಜಡೇಜಾ ಅವರ ಜಾಗಕ್ಕೆ ಅದ್ಭುತವಾಗಿ ಆಟ ಆಡುತ್ತಿರುವ ಶುಭ್ಮನ್ ಗಿಲ್, ಕೆ.ಎಲ್ ರಾಹುಲ್ ಬಡ್ತಿ ಪಡೆಯಬಹುದು. ಇನ್ನು ಕಳೆದ ವರ್ಷ ದೇಶೀಯ ಕ್ರಿಕೆಟ್ ಆಡುವಂತೆ ಹೇಳಿದ್ದ ಬಿಸಿಸಿಐ ಆದೇಶವನ್ನು ಶ್ರೇಯಸ್ ಅಯ್ಯರ್ ದಿಕ್ಕರಿಸಿದ್ದರು. ಹೀಗಾಗಿ ಶ್ರೇಯಸ್ ಅವರ ಕೇಂದ್ರ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು. ನಂತರ ರಣಜಿ ಟ್ರೋಫಿ, ದೇಶಿ ಟೂರ್ನಿಗಳು ಸೇರಿದಂತೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರದ ಒಪ್ಪಂದಕ್ಕೆ ಸೇರಿಸುವ ಸಾಧ್ಯತೆಯಿದೆ.

ಪ್ರಶಾಂತ್‌ ಎಸ್‌ , ಸ್ಪೇಷಲ್‌ ಡೆಸ್ಕ್‌, ಗ್ಯಾರಂಟಿ ನ್ಯೂಸ್

Exit mobile version