ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ತಂಡ ಬಾಹ್ಯಾಕಾಶದಲ್ಲೇ ಸಿಲುಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಬೇಕಿದ್ದ ಬೋಯಿಂಗ್ ಸ್ಟಾರ್ಲೈನರ್ ಅನ್ನು ತಾಂತ್ರಿಕ ಸಮಸ್ಯೆ ಕಾರಣ ನಾಸಾ ಮತ್ತೆ ಮುಂದೂಡಿದೆ. ಹೀಗಾಗಿಯೇ ಸುನೀತಾ ಭೂಮಿಗೆ ಮರಳುವುದು ತಡವಾಗಿದೆ.
ಗಗನಯಾತ್ರಿಗಳ ತಂಡ ಆರಂಭದಲ್ಲಿ ಜೂನ್ 14 ಕ್ಕೆ ವಾಪಸಾಗುತ್ತದೆ ಎಂದು ಹೇಳಲಾಗಿತ್ತು. ನಂತರ ಜೂನ್ 26ಕ್ಕೆ ಮುಂದೂಡಲಾಯಿತು. ಆದಾಗ್ಯೂ, ನಿಲ್ದಾಣವು ಎರಡು ಯೋಜಿತ ನಡಿಗೆಗಳನ್ನು ಜೂನ್ 24 ರಂದು ಮತ್ತು ಇನ್ನೊಂದು ಜುಲೈ 2 ರಂದು ನಡೆಯಬೇಕಾಗಿರುವುದರಿಂದ ಯೋಜನೆಯನ್ನು ಬದಲಾಯಿಸಲಾಗಿದೆ.
ನಾವು ನಮ್ಮ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ನಮ್ಮ ಸ್ಟ್ಯಾಂಡರ್ಡ್ ಮಿಷನ್ ಮ್ಯಾನೇಜ್ಮೆಂಟ್ ತಂಡದ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇವೆ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದ್ದಾರೆ.ಇನ್ನು ಬೋಯಿಂಗ್ ಸ್ಟಾರ್ಲೈನರ್ನಲ್ಲಿ ಕೇವಲ 27ದಿನಗಳ ಇಂಧನ ಹೊಂದಿದ್ದು, ಅಷ್ಟರೊಳಗೆ ತಾಂತ್ರಿಕ ಸಮಸ್ಯೆ ನಿವಾರಿಸಬೇಕಾಗಿದೆ.