ಮಂಡ್ಯ : ಮಂಡ್ಯದಲ್ಲಿ ಸುಮಲತಾ ಸಹಕಾರ ನೀಡುತ್ತಿಲ್ಲ ಎಂದಿದ್ದ ಹೆಚ್.ಡಿ.ದೇವೇಗೌಡರಿಗೆ ಸುಮಲತಾ ತಿರುಗೇಟು ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸುಮಲತಾ, ಜೆಡಿಎಸ್ ನಾಯಕರು ತನ್ನನ್ನು ದೂರವಿಟ್ಟರು, ಅವರ ನಡೆಸಿದ ಸಭೆಗೆ ನನ್ನನ್ನು ಕರೆಯಲಿಲ್ಲ, ನಾನಿಲ್ಲದೆಯೂ ಚುನಾವಣೆ ಗೆಲ್ಲುತ್ತೇವೆ ಎಂಬ ಭಾವನೆ ಅವರಿಗೆ ಬಂದಿರಬೇಕು. ಈ ಮಾತನ್ನು ಆ ಪಕ್ಷದ ಕೆಲ ವರಿಷ್ಠರು ಹೇಳಿರುವುದು ನನ್ನ ಗಮನಕ್ಕೆ ಬಂದಿದೆ, ಅವರ ವರ್ತನೆ ಮತ್ತು ಧೋರಣೆಗಳಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದರು. ಈಗ ಜೆಡಿಎಸ್ ವರ್ತನೆ ನೋಡಿ ನನ್ನ ಬೆಂಬಲಿಗರು ಮತ್ತೇ ತನಗೆ ಫೋನ್ ಮಾಡಿ ತನ್ನ ನಿರ್ಧಾರದ ಬಗ್ಗೆ ಕೇಳುತ್ತಿದ್ದಾರೆ, ತಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ, ಕುಮಾರಸ್ವಾಮಿಯವರು ಮನೆಗೆ ಬಂದು ಹೋದ ಮೇಲೆ ಒಂದೇ ಒಂದು ಸಲ ತನಗೆ ಫೋನ್ ಮಾಡಿಲ್ಲ ಎಂದು ಸುಮಲತಾ ಬೇಸರದಿಂದ ಹೇಳಿದರು.