ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹೊತ್ತಲ್ಲಿ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದ್ರೂ, ಅದು ಕಡಿಮೆನೆ. ಯಾಕಂದ್ರೆ ಹೀಟ್ ವೇವ್ಗೆ ನಮ್ಮ ದೇಹ ಬಳಲಿ ಬೆಂಡಾಗುವುದಂತು ಪಕ್ಕಾ. ಸೂರ್ಯನ ಶಾಖಕ್ಕೆ ಬೆವರು, ದದ್ದುಗಳು, ಡಿಹೈಡ್ರೇಷನ್ ಮತ್ತು ಸನ್ ಸ್ಟ್ರೋಕ್, ನಾವು ಫಿಟ್ ಆಗಿರಲು ಪ್ರೇರೇಪಿಸುವಿದಿಲ್ಲ. ಬೇಸಿಗೆ ಕಾಲದಲ್ಲಿ ಆಹಾರದ ಮೂಲಕವೇ ನಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಸೂಕ್ತ ಅಂತಾರೆ ಡಾಕ್ಟರ್ಸ್.
ಬೇಸಿಗೆಯಲ್ಲಿ ಹೇಗಿರಬೇಕು ಆಹಾರ ಪದ್ದತಿ.?
1.ಮೊಸರು – ಪ್ರೋಬಯಾಟಿಕ್ ಮತ್ತು ಜೀರ್ಣಕ್ಕೆ ಸಹಾಯ ಮಾಡುತ್ತೆ
2. ಎಳನೀರು – ದೇಹದಲ್ಲಿ ಎಲೆಕ್ಟ್ರೋಲೈಟ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯಕ
3. ಸ್ವೀಟ್ ಕಾರ್ನ್ – ಫೈಬರ್ ಅಂಶ ಹೆಚ್ಚಾಗಿದ್ದು, ಚರ್ಮ, ಕೂದಲು ಮತ್ತು ಕಣ್ಣುಗಳನ್ನು ಆರೋಗ್ಯಕ್ಕೆ ಉತ್ತಮ, ವಿಟಮಿನ್ A, E ಮತ್ತು B ಹೇರಳವಾಗಿದೆ.
4. ಸೌತೆಕಾಯಿ – ನೀರಿನ ಅಂಶದಲ್ಲಿ ಸಮೃದ್ಧವಾಗಿದೆ
5.ಮಾವಿನಹಣ್ಣು – ಕಬ್ಬಿಣ ಮತ್ತು ಮೆಗ್ನೀಶಿಯಮ್ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ.
ಬೇಸಿಗೆಯಲ್ಲಿ ಮಾಡಬೇಕಾದ ವ್ಯಾಯಾಮಗಳು
1.ಸ್ವಿಮ್ಮಿಂಗ್ – ವ್ಯಾಯಾಮ ಮತ್ತು ತಂಪಾಗಿರಲು ಉತ್ತಮ ಮಾರ್ಗ, ದೇಹ ತೂಕ ಇಳಿಸಲು ಸಹಾಯಕ
2.ವಾಕಿಂಗ್ – ಮುಂಜಾನೆ ವಾಕಿಂಗ್ ಮಾಡುವುದರಿಂದ ನಿಮ್ಮ ದೇಹವನ್ನು ಆಕ್ಟಿವ್ ಆಗಿರಲಿದೆ
3.ಸೈಕ್ಲಿಂಗ್ – ಕೊಬ್ಬನ್ನು ಕರಗಿಸಿ ಮತ್ತು ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ