ಬೇಸಿಗೆಯಲ್ಲಿ ಏನಾದರೂ ತಂಪಾದ ಆಹಾರ ಅಥವಾ ತಂಪು ಪಾನೀಯ ಸೇವಿಸಬೇಕೆಂದು ಅನಿಸುವುದು ಸಹಜ. ಬಹುತೇಕ ಜನರು ಬೇಸಿಗೆಯಲ್ಲಿ ಸೆಖೆಯನ್ನು ನೀಗಿಸಿಕೊಳ್ಳಲೆಂದು ಫ್ರಿಡ್ಜ್ನಲ್ಲಿಟ್ಟ ತಣ್ಣನೆಯ ನೀರು ಕುಡಿಯುತ್ತಾರೆ. ಈ ತಣ್ಣನೆಯ ನೀರು ಗಂಟಲಿನ ಕಾಯಿಲೆ ಇರುವವರೆಗೆ ಒಳ್ಳೆಯದಲ್ಲ. ಬಿಸಿಲು ಎಷ್ಟೇ ಇದ್ದರೂ ಫ್ರೀಡ್ಜ್ನಲ್ಲಿಟ್ಟ ನೀರನ್ನು ನೇರವಾಗಿ ಕುಡಿಯುವುದು ಯಾರ ಆರೋಗ್ಯಕ್ಕೂ ಒಳ್ಳೆಯದಲ್ಲ. ನೀರು ತಣ್ಣಗಾದಷ್ಟೂ ಅದರ ಪರಿಣಾಮ ತೀವ್ರವಾಗಿರುತ್ತೆ.
ಅತಿಯಾದ ತಣ್ಣೀರಿನ ಸೇವನೆಯು ದೇಹದ ವ್ಯವಸ್ಥೆಗಳನ್ನು ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಆಘಾತಗೊಳಿಸುತ್ತದೆ. ಇದರಿಂದಾಗಿ ಕೆಲವು ಜನರು ಜೀರ್ಣ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅತ್ಯಂತ ತಣ್ಣನೆಯ ನೀರು ಗಂಟಲಿನ ರಕ್ತನಾಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು. ಇದರಿಂದ ನೋವು ಅಥವಾ ಕಿರಿಕಿರಿಯನ್ನು ಉಂಟಾಗಲಿದೆ.
ತಣ್ಣನೆಯ ನೀರು ಸೇವನೆಯಿಂದ ಗಂಟಲಿನ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಶೀತ, ಜ್ವರ ಅಥವಾ ಅಲರ್ಜಿಯಂತಹ ರೋಗಲಕ್ಷಣಗಳನ್ನು ಹದಗೆಡಿಸುತ್ತದೆ. ಹೊಟ್ಟೆ ಉಬ್ಬುವುದು, ಸೆಳೆತ ಮತ್ತು ಮಲಬದ್ಧತೆಯಂತಹ ಹಲವು ಲಕ್ಷಣಗಳಿಗೆ ಕಾರಣವಾಗಬಹುದು. ತಣ್ಣೀರು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಉತ್ತಮ ಜೀರ್ಣಕ್ರಿಯೆಗಾಗಿ ತಣ್ಣನೆಯ ನೀರನ್ನು ಸೇವಿಸದಿರುವುದು ಒಳ್ಳೆಯದು.