ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀರಾಮನವಮಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೊಂಡ ಬಳಿಕ ಮೊದಲ ರಾಮನವಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.ನವಮಿಯಂದು ಬಾಲರಾಮನಿಗೆ ಸೂರ್ಯನರಶ್ಮಿ ಸ್ಪರ್ಶಿಸಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ರಾಮಲಲ್ಲಾನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿದ್ದು, ಸುಮಾರು 70 ಮಿ.ಮೀ ಉದ್ದದ ತಿಲಕ ಹಣೆ ಮೇಲೆ ಮೂಡಿದೆ. ಚೈತ್ರ ಮಾಸ ಶುಕ್ಲ ಪಕ್ಷದ ನವಮಿಯಂದು ಬಾಲ ರಾಮನಿಗೆ ಸೂರ್ಯ ರಶ್ಮಿ ಸ್ಪರ್ಶವಾಗಿದೆ. ರಾಮಲಲ್ಲಾನಿಗೆ ಸುಮಾರು ಮೂರರಿಂದ ಮೂರುವರೆ ನಿಮಿಷ ಸೂರ್ಯನ ಕಿರಣಗಳು ಬಿದ್ದಿದ್ದು, 2 ನಿಮಿಷಗಳ ಕಾಲ ಸಂಪೂರ್ಣ ತಿಲಕ ಗೋಚರವಾಗಿದೆ.
“ವೈಜ್ಞಾನಿಕ ಸೂರ್ಯ ತಿಲಕ”..!
ಅಯೋಧ್ಯೆಯಲ್ಲಿ ರಾಮಲಲ್ಲಾನ ಹಣೆಯನ್ನು ಸೂರ್ಯ ರಶ್ಮಿಯು ವೈಜ್ಞಾನಿಕವಾಗಿ ಮಾಡಲಾಗಿದೆ. ಐಐಟಿ ರೂರ್ಕಿಯ ವಿಜ್ಞಾನಿಗಳಿಂದ ಸೂರ್ಯ ತಿಲಕದ ವ್ಯವಸ್ಥೆ ಮಾಡಲಾಗಿತ್ತು. ir ಫಿಲ್ಟರ್ ಇರುವ ಅಪರ್ಚರ್ ಮೂಲಕ ಗರ್ಭ ಗುಡಿಯ ಮೇಲ್ಭಾಗದಿಂದ ಸೂರ್ಯ ರಶ್ಮಿ ಪ್ರವೇಶಿಸಿದೆ. ದೇಗುಲದ ದಕ್ಷಿಣ ಭಾಗದಿಂದ ಸೂರ್ಯ ರಶ್ಮಿ ಪ್ರವೇಶಿಸಿದ್ದು, ಇದಕ್ಕಾಗಿ ನಿರ್ದಿಷ್ಟ ಕೋನದಲ್ಲಿ 4 ಲೆನ್ಸ್ ಹಾಗೂ 4 ಕನ್ನಡಿಗಳ ಬಳಸಲಾಗಿದೆ. ಸೂರ್ಯನ ಚಲನೆಯ ಆಧಾರದಲ್ಲಿ ಎಲ್ಲವನ್ನು ಅಳವಡಿಕೆ ಮಾಡಿದ್ದು, ರಾಮಲಲ್ಲಾ ಮೂರ್ತಿಗೆ ಸೂರ್ಯ ತಿಲಕಕ್ಕಾಗಿಯೇ ರಿಫ್ಲೆಕ್ಟಿವ್ ಮಿರರ್ಸ್ & ಲೆನ್ಸ್ಗಳನ್ನ ಬಳಸಿ ಸೂರ್ಯರಶ್ಮಿ ಸೃಷ್ಟಿಸಲಾಗಿದೆ.