ಅನುಭವಿ ಪಾಕ್ ಯುಎಸ್ಎ ವಿರುದ್ಧ ಸೋತಿರೋದು ದೊಡ್ಡ ಮುಖಭಂಗಕ್ಕೆ ಕಾರಣವಾಗಿದೆ. ಆದರೆ ಪಾಕ್ ಅನ್ನು ಸೋಲಿಸಲು ಅಮೆರಿಕ ತಂಡ ಕನ್ನಡಿಗನನ್ನು ಅಸ್ತ್ರವನ್ನಾಗಿ ಬಳಸಿರೋದು ಬಹುತೇಕರಿಗೆ ತಿಳಿದಿಲ್ಲ.ಹೌದು. ಅಮೆರಿಕ ತಂಡ ಪಾಕ್ ತಂಡದ ಮೇಲೆ ನೊಸ್ತುಶ್ ಕೆಂಜಿಗೆ ಮೂಲಕ ಬೌಲಿಂಗ್ ದಾಳಿ ಮಾಡಿದರು. ನೊಸ್ತುಶ್ ಎಸೆತಕ್ಕೆ ಪಾಕ್ 3 ವಿಕೆಟ್ ಉದುರಿತ್ತು. ಇದಾದ ಬಳಿಕ ಅಬ್ಬರದ ಜೊತೆಗೆ ಆತ ಕನ್ನಡಿಗ ಎಂಬ ಸುದ್ದಿಯೂ ವೈರಲ್ ಆಯ್ತು.
ಅಂದಹಾಗೆಯೇ ನೊಸ್ತುಶ್ ಮೂಲತಃ ಕರ್ನಾಟಕದವನು. ಅದರಲ್ಲೂ ಕಾಫಿನಾಡು ಚಿಕ್ಕಮಗಳೂರಿನವರು. ಮೂಡಿಗೆರೆ ಮೂಲದ ಇವರು ಅದ್ಭುತವಾಗಿ ಕನ್ನಡ ಮಾತನಾಡುತ್ತಾರೆ. ಸದ್ಯ ಈ ಕನ್ನಡಿಗನ ಮಾತು ವೈರಲ್ ಆಗಿದೆ. ಇನ್ಸ್ಟಾದಲ್ಲಿ ಅವರು ಕನ್ನಡದಲ್ಲಿ ಮಾತನಾಡಿರುವುದು ಹರಿದಾಡುತ್ತಿದೆ. ನೊಸ್ತುಶ್ ಮಾತುಗಳ ಕೇಳಿ ಕನ್ನಡಿಗರು ಮನಸೋತಿದ್ದಾರೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
- 2019ರಲ್ಲಿ ನೊಸ್ತುಶ್ ಕೆಂಜಿಗೆ
- ಯುಎಇ ವಿರುದ್ಧ ಮೈದಾನಕ್ಕೆ ಕಾಲಿಟ್ಟರ
- ಈ ವರಗೆ. 40 ಒಡಿಐ ಮತ್ತು 7 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಅಂದಹಾಗೆಯೇ ಪಾಕ್ ವಿರುದ್ಧ ಆಡಿದ ಪಂದ್ಯ ನೊಸ್ತುಶ್ ಕೆಂಜಿಗೆ 4 ಓವರ್ನಲ್ಲಿ 30 ರನ್ ನೀಡಿ 3 ವಿಕೆಟ್ ಉರುಳಿಸಿದ್ದಾರೆ. ಆ ಮೂಲಕ ಅಮೆರಿಕ ತಂಡದ ಗೆಲುವಿಗೆ ಮತ್ತು ಪಾಕ್ ಸೋಲಿಗೆ ಕಾರಣರಾಗಿದ್ದಾರೆ. ಇದಕ್ಕೂ ಮುಖ್ಯವಾಗಿ ನೊಸ್ತುಶ್ ಕನ್ನಡಿಗ ಎಂಬ ವಿಚಾರ ಎಲ್ಲರಿಗೂ ಹೆಮ್ಮ ತಂದಿದೆ.