ಭಾರತ ತಂಡದ ಪ್ರಸ್ತುತ ಮುಖ್ಯ ಕೋಚ್ ಆದ ರಾಹುಲ್ ದ್ರಾವಿಡ್, ಪರ್ಸ್ನಲ್ ಕಾರಣಗಳಿಂದಾಗಿ ತಂಡದ ದೀರ್ಘಾವಧಿಯ ಕೋಚ್ ಆಗಿರಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಈ ಒಂದು ಆಫರ್ ಈಗ ಭಾರತ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ಗೆ ಒಲಿದಿದೆ. ಆದರೆ ಅವರು ಸಹ ಈಗ ಅರ್ಜಿ ಸಲ್ಲಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜೂನ್ ೨ ರಂದು ನಡೆಯಲಿರುವ ಟಿ-೨೦ ವಿಶ್ವಕಪ್ ಬಳಿಕ ರಾಹುಲ್ ಅಧಿಕಾರವಧಿ ಮುಗಿಯಲಿದೆ. ಹೀಗಾಗಿ ಭಾರತ ತಂಡದ ಮುಂದಿನ ಕೋಚ್ ಯಾರು? ಎಂಬುದು ಪ್ರಶ್ನೆಯಾಗಿದೆ. ಇದರ ಮಧ್ಯೆ ಬಿಸಿಸಿಐ ಇತ್ತೀಚೆಗೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿ ಜಾಹೀರಾತು ಹೊರಡಿಸಿತ್ತು. ಈ ಪ್ರಕಾರ ಜುಲೈ 1, 2024 ರಿಂದ ನ್ಯೂ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಅವರ ಅಧಿಕಾರಾವಧಿ 2027 ರ ಅಂತ್ಯದವರೆಗೆ ಇರಲಿದೆ.
ಹೀಗಾಗಿ ಟೀಂ ಇಂಡಿಯಾಗೆ ವಿದೇಶಿ ಆಟಗಾರರು ಮುಖ್ಯ ಕೋಚ್ ಆಗಬಹುದು ಎಂದು ಹೇಳಲಾಗುತ್ತಿದೆ. ಅದರಂತೆ ಈಗ ಕೋಚ್ ಹುದ್ದೆಗೆ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಹೆಸರು ಮುಂಚೂಣಿಯಲ್ಲಿದೆ. ಫ್ಲೆಮಿಂಗ್ ಪ್ರಸ್ತುತ ಸಿಎಸ್ಕೆ ತಂಡದ ಮುಖ್ಯ ಕೋಚ್ ಆಗಿದ್ದು, ಅವರ ಕೋಚಿಂಗ್ನಲ್ಲಿ ತಂಡ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ.ಹೊಸ ಮುಖ್ಯ ಕೋಚ್ನ ಅಧಿಕಾರಾವಧಿ 3.5 ವರ್ಷಗಳಾಗಿದ್ದು, ಇದು ಜುಲೈ 1, 2024 ರಿಂದ ಪ್ರಾರಂಭವಾಗಿ ಡಿಸೆಂಬರ್ 31, 2027 ರಂದು ಕೊನೆಗೊಳ್ಳುತ್ತದೆ. ಅಂದರೆ, ಹೊಸ ಮುಖ್ಯ ಕೋಚ್ ಅಡಿಯಲ್ಲಿ, ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ 2025, 2025 ಮತ್ತು 2027 ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್, 2026 ರ ಟಿ20 ವಿಶ್ವಕಪ್ ಮತ್ತು 2027ರ ಏಕದಿನ ವಿಶ್ವಕಪ್ ಆಡಲಿದೆ.