ವಿಶ್ವದಲ್ಲೇ ಅತಿ ವೇಗದ ಬೌಲಿಂಗ್ ದಾಖಲೆ ಇರೋದು ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರ ಹೆಸರಿನಲ್ಲಿ.. ಗಂಟೆಗೆ 161.3 ಕಿ. ಮೀ. ವೇಗದಲ್ಲಿ ಶೋಯೆಬ್ ಅಖ್ತರ್ ಬೌಲಿಂಗ್ ಮಾಡಿದ್ದು ಈವರೆಗಿನ ದಾಖಲೆ. 2003ರಲ್ಲಿ ಶೋಯೆಬ್ ನಿರ್ಮಿಸಿದ ದಾಖಲೆಯನ್ನ ಈವರೆಗೂ ಯಾರೂ ಮುರಿದಿಲ್ಲ. ಆದರೆ, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಗಂಟೆಗೆ 181.6 ಕಿ. ಮೀ. ವೇಗದಲ್ಲಿ ಬೌಲಿಂಗ್ ಮಾಡಿದರು ಎಂದು ಆಸ್ಟ್ರೇಲಿಯಾದ ಅಡಿಲೇಡ್ ಕ್ರೀಡಾಂಗಣದ ಪರದೆಯಲ್ಲಿ ಮಾಹಿತಿ ಬಿತ್ತರವಾಯ್ತು.
ಇದನ್ನ ಕಂಡು ಕ್ರಿಕೆಟ್ ಪ್ರೇಮಿಗಳು ದಂಗಾದರು. ಸಾಮಾನ್ಯವಾಗಿ ಸಿರಾಜ್ ಗಂಟೆಗೆ 130 ರಿಂದ 140 ಕಿ. ಮೀ. ವೇಗದಲ್ಲಿ ಬೌಲಿಂಗ್ ಮಾಡ್ತಾರೆ. ಅಂತಾದ್ರಲ್ಲಿ ಒಮ್ಮೆಲೇ 180 ಕಿ. ಮೀ.ಗಿಂತ ಹೆಚ್ಚು ವೇಗದಲ್ಲಿ ಚೆಂಡು ಎಸೆದರಾ ಎಂಬ ಪ್ರಶ್ನೆ ಉದ್ಭವವಾಯ್ತು. ಬಳಿಕ ಇದು ತಾಂತ್ರಿಕ ದೋಷ ಅನ್ನೋದು ಸಾಬೀತಾಯ್ತು. ಅಸಲಿಗೆ ತಾವು ಇಷ್ಟು ವೇಗವಾಗಿ ಬೌಲಿಂಗ್ ಮಾಡಿದೆನಾ ಎಂದು ಸಿರಾಜ್ ಅವರೇ ಗೊಂದಲಕ್ಕೆ ಒಳಗಾಗುವಂತಾ ಸನ್ನಿವೇಶ ಈ ಸಂದರ್ಭದಲ್ಲಿ ಸೃಷ್ಟಿಯಾಗಿತ್ತು. ಒಂದು ವೇಳೆ ಇದು ತಾಂತ್ರಿಕ ದೋಷ ಅಲ್ಲವಾಗಿದ್ದರೆ, ಸಿರಾಜ್ ಹೆಸರಲ್ಲಿ ಅಮೋಘ ದಾಖಲೆಯೊಂದು ನಿರ್ಮಾಣವಾಗಿ ಬಿಡುತ್ತಿತ್ತು!
ಅಡಿಲೇಡ್ ಓವಲ್ನಲ್ಲಿ ಸಿರಾಜ್ ಇತಿಹಾಸ ನಿರ್ಮಿಸಿದರು ಎಂದು ಕ್ರಿಕೆಟ್ ಪ್ರೇಮಿಗಳು ದಿಲ್ ಖುಷ್ ಆಗಿದ್ದರು. ಆ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ ನಲ್ಲಿ 180 ರನ್ಗಳಿಗೆ ಆಲೌಟ್ ಆಗಿದ್ದರು. ನಂತರ ಬೌಲಿಂಗ್ ಗೆ ಮೈದಾನಕ್ಕಿಳಿದ ಟೀಂ ಇಂಡಿಯಾ ಅತ್ಯತ್ತಮವಾಗಿ ಎದುರಾಳಿಯನ್ನ ಕಟ್ಟಿಹಾಕಿತ್ತು. ಮದ್ಯದಲ್ಲಿ ಮೊಹಮದ್ ಸಿರಾಜ್ ಅವರು ಸಾಮಾನ್ಯವಾಗಿ 130-140ರ ಅಸುಪಾಸಿನಲ್ಲಿ ಚೆಂಡೆಸೆಯುತ್ತಿದ್ದರು ಮೊಹಮದ್ ಸಿರಾಜ್ ಅವರು. ಆದರೆ ಅದೊಂದು ಬಾಲ್ 181.6 kph ವೇಗದಲ್ಲಿ ಚೆಂಡೆಸೆದು ಸಿರಾಜ್ ದಾಖಲೆ ಮಾಡಿದ್ದರು. ಸಿರಾಜ್ ಬೌಲಿಂಗ್ ವೇಗ ನೋಡಿ ಪ್ರೇಕ್ಷಕರು ದಂಗಾಗಿದ್ದರು. ವಿಶ್ವ ದಾಖಲೆಯನ್ನು ಖುದ್ದು ಸಿರಾಜ್ ಕೂಡಾ ನಂಬಿರಲಿಲ್ಲ.
ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಬೌಲ್ ಆಗಿತ್ತು. ಆದರೆ ಸಿರಾಜ್ ಬೌಲಿಂಗ್ ವೇಗವನ್ನಾ ತಪ್ಪಾಗಿ ತೋರಿಸಿತ್ತು ಸ್ಟೇಡಿಯಂ ಸ್ಕ್ರೀನ್. ಇದರಿಂದ ಸಿರಾಜ್ ಅವರು ಯಾವುದೇ ದಾಖಲೆ ಮುರಿದಿಲ್ಲ ಎಂದು ತಿಳಿದುಬಂದಿದೆ.