2024 ರ IPL ಸೀಸನ್ ಮುಗಿದ ಬೆನ್ನಲ್ಲೆ ಸದ್ಯ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ತಂಡದ ಆಟಗಾರರು ತಯಾರಿಯಲ್ಲಿ ತೊಡಗಿದ್ದು, ಬಿಸಿಸಿಐ ಬಿಗ್ ಸರ್ಪ್ರೈಸ್ ಕೊಟ್ಟಿತ್ತು.
ಸದ್ಯ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಟಿ20 ವಿಶ್ವಕಪ್ವರೆಗೆ ಇದೆ. ಬಳಿಕ ಟೀಮ್ ಇಂಡಿಯಾದ ಕೋಚ್ ಯಾರಾಗ್ತಾರೆ ಅಂತಾ ಕ್ರಿಕೇಟ್ ಜಗತ್ತಿನಲ್ಲಿ ದೊಡ್ಡ ಪ್ರಶ್ನೇಯಾಗಿದೆ.
ರಾಹುಲ್ ದ್ರಾವಿಡ್ ಬಳಿಕ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ ಎಂದು ಬಿಸಿಸಿಐ ಮಾಹಿತಿ ನೀಡಿತ್ತು. ಇನ್ನೇನು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಹೆಸರು ಅನೌನ್ಸ್ ಮಾಡಬೇಕು ಅನ್ನುವಷ್ಟರಲ್ಲೇ ಶಾಕಿಂಗ್ ನ್ಯೂಸ್ ಇದೆ.
ಹೌದು ಟೀಮ್ ಇಂಡಿಯಾ ಹೆಡ್ ಕೋಚ್ ರೇಸ್ನಲ್ಲಿ ಹರ್ಭಜನ್ ಸಿಂಗ್ ಕೂಡಾ ಇದ್ದು ಕೋಚ್ ಸ್ಥಾನಕ್ಕೆ ಹರ್ಭಜನ್ ಅರ್ಜಿ ಹಾಕಿದ್ದಾರೆ, ಇದು ಗೌತಮ್ ಗಂಭೀರ್ಗೆ ಶಾಕಿಂಗ್ ಸುದ್ದಿ ಆಗಿದೆ.