ಪ್ರತಿಯೊಬ್ಬರೂ ಬಳಸುವ ಸ್ಮಾರ್ಟ್ಫೋನ್ಗಳು ಹ್ಯಾಂಗ್ ಆಗುವುದರಿಂದ ಬಹಳಷ್ಟು ಕಿರಿಕಿರಿಯಾಗಿರುತ್ತೆ. ಹ್ಯಾಂಗ್ ಆಗುವ ಫೋನ್ನನ್ನು ಬಳಸುವುದು ಬಹಳ ಕಷ್ಟ. ಫೋನ್ ಸ್ಟೋರೆಜ್ ಫುಲ್ ಆದಾಗ ಈ ಸಮಸ್ಯೆ ಕಾಡುತ್ತೆ. ಆಗ ಯಾವುದೇ ಫೈಲ್ಗಳು, ವಿಡಿಯೋಗಳು, ಫೋಟೋ ಡೌನ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸ್ಟೋರೆಜ್ ಫುಲ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೆಲವು ಆ್ಯಪ್ಗಳನ್ನು ಡಿಲೀಟ್ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಕೆಲವರ ಸ್ಮಾರ್ಟ್ಫೋನ್ನನ್ನು ಮಕ್ಕಳು ಬಳಸುವುದರಿಂದ ಮಕ್ಕಳಿಗೆ ಸಂಬಂಧಿಸಿದ ಆ್ಯಪ್ಗಳು ಇರುತ್ತದೆ. ಕೆಲ ಅನಗತ್ಯ ಸೋಶಿಯಲ್ ಮೀಡಿಯಾ ಆ್ಯಪ್, ಓಟಿಟಿ ಆ್ಯಪ್, ಗೇಮಿಂಗ್ ಆ್ಯಪ್ ಹಾಗೂ ಉಪಯೋಗಿಸದ ವಿಡಿಯೋ ಎಡಿಟಿಂಗ್ ಆ್ಯಪ್ಗಳು ಇರುತ್ತದೆ. ಇಂತಹ ಕೆಲ ಆ್ಯಪ್ಗಳಿಂದ ಹೆಚ್ಚು ಸ್ಟೋರೆಜ್ ಜಾಸ್ತಿ ಆಗಿರುತ್ತದೆ. ಇದನ್ನು ಆನ್ಇನ್ಸ್ಟಾಲ್ ಮಾಡುವ ಮೂಲಕ ಅಪಾರ ಜಾಗ ಮೊಬೈಲ್ನಲ್ಲಿ ಉಳಿಸಿಕೊಳ್ಳಬಹುದು.
ನಿಮ್ಮ ಐಫೋನ್ನಲ್ಲಿ ಯಾವುದು ಹೆಚ್ಚು ಸ್ಟೋರೇಜ್ ಅನ್ನು ಪಡೆದುಕೊಂಡಿದೆ ಎಂದು ತಿಳಿಯಲು ಹೀಗೆ ಮಾಡಿ
1. ಐಪೋನ್ ಬಳಕೆದಾರರು ತಮ್ಮ ಮೊಬೈಲ್ನಲ್ಲಿ ಸೆಟ್ಟಿಂಗ್ಸ್ಗೆ ತೆರಳಿ
2.ಸೆಟ್ಟಿಂಗ್ಸ್ನಲ್ಲಿ ಜೆನೆರಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
3.ಈಗ ಐಪೋನ್ ಸ್ಟೋರೆಜ್ ಆಯ್ಕೆ ಮಾಡಿದಾಗ ಆ್ಯಪ್ಗಳ ಪಟ್ಟಿ ಕಾಣಿಸುತ್ತದೆ
4.ಇಲ್ಲಿ ಅತಿ ಹೆಚ್ಚು ಸ್ಟೋರೆಜ್ ಯಾವ ಆ್ಯಪ್ನಲ್ಲಿದೆ ಎಂಬುದು ಗೋಚರಿಸುತ್ತದೆ